This is the title of the web page
This is the title of the web page

Live Stream

[ytplayer id=’1198′]

October 2024
T F S S M T W
 12
3456789
10111213141516
17181920212223
24252627282930
31  

| Latest Version 8.0.1 |

State News

ಬೆಲೆ ಏರಿಕೆಯ ನಡುವೆ ಶಾಲಾ ಪಠ್ಯಪುಸ್ತಕದ ಬೆಲೆ ಹೆಚ್ಚಳ – ಬರುವ ಶೈಕ್ಷಣಿಕ ವರ್ಷದಿಂದ ಪೋಷಕರಿಗೆ ಬೆಲೆ ಏರಿಕೆಯ ಶಾಕ್…..

ಬೆಲೆ ಏರಿಕೆಯ ನಡುವೆ ಶಾಲಾ ಪಠ್ಯಪುಸ್ತಕದ ಬೆಲೆ ಹೆಚ್ಚಳ – ಬರುವ ಶೈಕ್ಷಣಿಕ ವರ್ಷದಿಂದ ಪೋಷಕರಿಗೆ ಬೆಲೆ ಏರಿಕೆಯ ಶಾಕ್…..
WhatsApp Group Join Now
Telegram Group Join Now

ಬೆಂಗಳೂರು

ಈಗಾಗಲೇ ಗ್ಯಾಸ್, ಪೆಟ್ರೋಲ್ ಸೇರಿದಂತೆ ದಿನನಿತ್ಯ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರ ನಡುವೆ ಈಗ ಪೋಷಕರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಲಿದೆ ಹೌದು ವಿದ್ಯಾರ್ಥಿ ಗಳಿಗೆ ಬಿಗ್ ಶಾಕ್ ಎದುರಾಗಿದ್ದು ಖಾಸಗಿ ಶಾಲಾ ಕಾಲೇಜುಗಳ ಪಠ್ಯ ಪುಸ್ತಕದ ಬೆಲೆ ಏರಿಕೆ ಬಿಸಿ ತಟ್ಟಿದೆ.

ಕರ್ನಾಟಕ ಪಠ್ಯಪುಸ್ತಕ ಸಂಘ (ಕೆಟಿಬಿಎಸ್) ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ನೀಡುವ ಪಠ್ಯಪುಸ್ತಕಗಳ ಬೆಲೆಯನ್ನು ಹೊಸ ಶೈಕ್ಷಣಿಕ ವರ್ಷದಿಂದ ಶೇ.25ರಷ್ಟು ಹೆಚ್ಚಿಸಲು ನಿರ್ಧರಿಸ ಲಾಗಿದ್ದು, ಇದರಿಂದಾಗಿ ಈ ಶಾಲೆಗಳಲ್ಲಿ 1 ರಿಂದ 12 ನೇ ತರಗತಿಯಲ್ಲಿ ಓದುತ್ತಿರುವ ಸುಮಾರು 52,00,000 ವಿದ್ಯಾರ್ಥಿಗಳ ಪೋಷಕರ ಮೇಲೆ ಪರಿಣಾಮ ಬೀರಲಿದೆ.

KTBS ನಿಂದ ಪುಸ್ತಕಗಳನ್ನು ಖರೀದಿಸಲು 10% ಮುಂಗಡವನ್ನು ಪಾವತಿಸಿದ್ದ ಖಾಸಗಿ ಶಾಲೆಗಳು ಈಗ ಹೊಸ ಬೆಲೆಗಳು ಹೆಚ್ಚಾಗುತ್ತಿವೆ ಎಂದು ತಿಳಿಸಿ ಬೆಲೆ ಏರಿಕೆಯ ನಡುವೆ ಬೆಲೆ ಹೆಚ್ಚಳವನ್ನು ಮಾಡಲು ನಿರ್ಧಾರಕ್ಕೆ ಮುಂದಾಗಿದ್ದಾರೆ.

ಕರ್ನಾಟಕ ಅಸೋಸಿಯೇಷನ್ ಆಫ್ ಮ್ಯಾನೇಜ್ಮೆಂಟ್ ಆಫ್ ಪ್ರೈಮರಿ ಅಂಡ್ ಸೆಕೆಂಡರಿ ಸ್ಕೂಲ್ಸ್ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್ ಮಾತನಾಡಿ 10ನೇ ತರಗತಿಯ ಪಠ್ಯಪುಸ್ತಕಗಳಿಗೆ ಕೆಟಿಬಿಎಸ್ ಮುಂದೆ ಇಂಡೆಂಟ್ ಇಟ್ಟಾಗ ಗಣಿತ ಭಾಗ 2ರ ಬೆಲೆ 46 ರೂ ಇತ್ತು ಈಗ ಅದರ ದರ ಬೆಲೆ 60 ರೂ ಆಗಿದೆ.

ಗಣಿತ ಭಾಗ-1 45 ರೂ ಇದ್ದ ಬೆಲೆ ಈಗ 58 ರೂ.ಗೆ ಏರಿದೆ. ವಿಜ್ಞಾನ ಭಾಗ-2 34 ರೂ.ನಿಂದ 44 ರೂ.ಗೆ ಹೆಚ್ಚಳವಾಗಿದೆ ಎಂದು ತಿಳಿಸಿದ್ದು ಇತ್ತ ಈ ಒಂದು ಬೆಲೆ ಏರಿಕೆಗೆ ಪೋಷಕರು ರಾಜ್ಯ ಸರ್ಕಾರ ಹೇಗೆ ಸ್ಪಂದಿಸುತ್ತದೆ ಎಂಬೊದನ್ನು ಕಾದು ನೋಡಬೇಕಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News

 

 

WhatsApp Group Join Now
Telegram Group Join Now
Suddi Sante Desk