ರಾಜ್ಯಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ,ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಲವರಿಂದ ಸ್ವಾಗತ…..

Suddi Sante Desk

ಬೆಂಗಳೂರು –

ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಿದ್ದಾರೆ.ಎರಡು ದಿನಗಳ ಕಾಲ ರಾಜ್ಯದಲ್ಲಿ ಪ್ರವಾಸವನ್ನು ಕೈಗೊಳ್ಳಲಿದ್ದು ಇನ್ನೂ ರಾಜ್ಯಕ್ಕೆ ಆಗಮಿಸದ ಇವರನ್ನು ರಾಜ್ಯದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿ ದಂತೆ ಹಲವು ಗಣ್ಯರು ಸ್ವಾಗತಿಸಿ ಬರಮಾಡಿಕೊಂಡರು

ಹೌದು ಯಲಹಂಕ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಇವರನ್ನು ಪ್ರೀತಿಯಿಂದ ಸ್ವಾಗತಿಸಲಾಯಿತು. ಇದರೊಂ ದಿಗೆ ಎರಡು ದಿನಗಳ ಈ ಒಂದು ಪ್ರವಾಸದಲ್ಲಿ ಪ್ರಮುಖ ವಾಗಿ ಪ್ರಧಾನಿ ನರೇಂದ್ರ ಮೋದಿಯವರ ಎರಡು ದಿನಗಳ ರಾಜ್ಯ ಪ್ರವಾಸ ಸಂದರ್ಭದಲ್ಲಿ ಯಾವುದೇ ರಾಜಕೀಯ ಭೇಟಿ ಹಾಗೂ ಚರ್ಚೆಗೆ ಅವಕಾಶ ಹಾಗೂ ಸಮಯ ನಿಗದಿಯಾಗಿಲ್ಲ.

ಅಭಿವೃದ್ಧಿ ಕಾರ್ಯಕ್ರಮಗಳ ಶಿಲಾನ್ಯಾಸ ಹಾಗೂ ಅಂತಾ ರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟನೆ ಹಾಗೂ ಇನ್ನಿತರ ಪೂರ್ವ ನಿಗದಿತ ಕಾರ್ಯಕ್ರಮಗಳಲ್ಲಿ ಮಾತ್ರ ಅವರು ಭಾಗವಹಿಸಲಿದ್ದಾರೆ.ಅಭಿವೃದ್ಧಿ ಕಾರ್ಯಕ್ರಮಗಳ ಶಿಲಾನ್ಯಾಸ ಹಾಗೂ ಅಂತಾರಾಷ್ಟ್ರೀಯ ಯೋಗ ದಿನಾಚ ರಣೆ ಉದ್ಘಾಟನೆ ಹಾಗೂ ಇನ್ನಿತರ ಪೂರ್ವ ನಿಗದಿತ ಕಾರ್ಯಕ್ರಮಗಳಲ್ಲಿ ಮಾತ್ರ ಅವರು ಭಾಗವಹಿಸಲಿದ್ದಾರೆ.

ಸುಮಾರು 900 ದಿನಗಳ ನಂತರ ಮೋದಿ ರಾಜ್ಯ ಪ್ರವಾಸಕ್ಕೆ ಬಂದಿದ್ದರೂ ಪಕ್ಷದ ಕಚೇರಿಗೂ ಭೇಟಿ ಇಲ್ಲ.ವಿಶೇಷ ವಿಮಾನದಲ್ಲಿ ನಗರಕ್ಕೆ ಆಗಮಿಸದರು.ಸಿಎಂ ಬೊಮ್ಮಾಯಿ ಜೊತೆ ತೆರಳಿ ಪ್ರಧಾನಿಯವರನ್ನು ಯಡಿ ಯೂರಪ್ಪ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ವಾಗತಿಸಿದ ರು.ಈ ಸಂದರ್ಭದಲ್ಲಿ‌ ಕೆಲ ಸಮಯ ಮೋದಿ ಯಡಿಯೂ ರಪ್ಪ ಅವರನ್ನು ಆತ್ಮೀಯವಾಗಿ ಮಾತನಾಡಿಸಿದರು. ಇದನ್ನು ಹೊರತುಪಡಿಸಿದರೆ ಮತ್ತೆ ಯಾವ ರಾಜಕೀಯ ನಾಯಕರನ್ನೂ ಅಧಿಕೃತ ವೇದಿಕೆ ಹೊರತುಪಡಿಸಿ ಎಲ್ಲಿ ಯೂ ಭೇಟಿ ಇಲ್ಲ.ಬೆಂಗಳೂರಿನಿಂದ ಮೈಸೂರಿನತ್ತ ಹೊರಟರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.