ಬಾಗಲಕೋಟೆ ಬಾಲಕಿಗೆ ಪತ್ರ ಬರೆದ ಪ್ರಧಾನಿ ನರೇಂದ್ರ ಮೋದಿ – ಕೊಟ್ಟ ಮಾತಿನಂತೆ ಬಾಲಕಿಗೆ ಪತ್ರ ಬರೆದ ಪ್ರಧಾನಿ…..

Suddi Sante Desk
ಬಾಗಲಕೋಟೆ ಬಾಲಕಿಗೆ ಪತ್ರ ಬರೆದ ಪ್ರಧಾನಿ ನರೇಂದ್ರ ಮೋದಿ – ಕೊಟ್ಟ ಮಾತಿನಂತೆ ಬಾಲಕಿಗೆ ಪತ್ರ ಬರೆದ ಪ್ರಧಾನಿ…..

ಬಾಗಲಕೋಟೆ

ಹೌದು ಬಾಗಲಕೋಟೆ ಬಾಲಕಿಗೆ ಪ್ರಧಾನಿ ನರೇಂದ್ರ ಮೋದಿಯವರು ಪತ್ರವನ್ನು ಬರೆದಿದ್ದಾರೆ. ಸಧ್ಯ ಬರೆದ ಪತ್ರವು ಬಂದಿದ್ದು ಮೋದಿ ಪತ್ರವನ್ನು ನೋಡಿದ ಬಾಲಕಿ ಪುಲ್ ಖುಷಿ ಯಾಗಿದ್ದಾರೆ.ಇದರೊಂದಿಗೆ ಕೊಟ್ಟ ಮಾತಿನಂತೆ ಬಾಲಕಿಗೆ ಪತ್ರ ಬರೆದಿದ್ದಾರೆ ಪ್ರಧಾನಿಯವರು‌.

ಮೋದಿ ಮತ್ತು ಅವರ ತಾಯಿಯ ಸ್ಕೆಚ್ ನೀಡಿದ್ದ ಯುವತಿಗೆ ಪ್ರಧಾನಿ ಪತ್ರವನ್ನು ಸಧ್ಯ ಬರೆದಿದ್ದಾರೆ ಬಾಗಲಕೋಟೆಯ ಯುವತಿ ನಾಗರತ್ನ ಮೇಟಿಗೆ ಪ್ರಧಾನಿ ಪತ್ರ ಬರೆದಿದ್ದು ಏಪ್ರಿಲ್ 29 ರಂದು ಬಾಗಲಕೋಟೆಗೆ ಬಂದಿದ್ದ ಪ್ರಧಾನಿ ಮೋದಿ ಪ್ರಚಾರ ಸಭೆಯಲ್ಲಿ ಗಮನ ಸೆಳೆದಿದ್ದ ಯುವತಿಯ ಸ್ಕೆಚ್..

ತಾನು ಚಿತ್ರಿಸಿದ ಸ್ಕೆಚ್ ಹಿಡಿದು ವೇದಿಕೆ ಮುಂಭಾಗ ದಲ್ಲಿ ನಿಂತಿದ್ದ ಯುವತಿ.ತಾಯಿಯ ಫೋಟೋ ಫ್ರೆಮ್ ನೋಡಿ ಎಸ್ ಪಿಜಿ ಸಿಬ್ಬಂದಿಗೆ ಹೇಳಿ ತರಿಸಿಕೊಂಡಿದ್ದ ಮೋದಿ..ಅದರಲ್ಲಿ ನಿನ್ನ ಹೆಸರು ವಿಳಾಸ ಬರಿ ನಾನು ಪತ್ರ ಕಳಿಸುತ್ತೇನೆ ಎಂದಿದ್ದರು ಪ್ರಧಾನಿಯವರು.

ಯುವತಿಗೆ ಕೊಟ್ಟ ಮಾತಿನಂತೆ ಮೇ 5 ರಂದು ಪತ್ರ ಬರೆದಿದ್ದಾರೆ ಮೋದಿಯವರು.ಪೋಸ್ಟ್ ಮೂಲಕ ಯುವತಿಗೆ ಪ್ರಧಾನ ಮಂತ್ರಿ ಯವರು ಬರೆದ ಪತ್ರವು ಸಧ್ಯ ತಲುಪಿದೆ.ಸುಂದರವಾದ ಭಾವಚಿತ್ರ ಉಡುಗೊ ರೆಯಾಗಿ ನೀಡಿದಕ್ಕೆ ನಾನು ನಿಮಗೆ ಧನ್ಯವಾದ ತಿಳಿಸುತ್ತೇನೆ.

ಹೊಸ ಭಾರತವನ್ನು ರೂಪಿಸುವ ಮತ್ತು ನಮ್ಮ ಯುವಕರಿಗೆ ಭರವಸೆಯ ಭವಿಷ್ಯವನ್ನು ಭದ್ರಪಡಿ ಸುವ ನನ್ನ ಬದ್ಧತೆಯನ್ನು ಪ್ರೇರೇಪಿಸುತ್ತದೆ ಎಂದು ಉಲ್ಲೇಖ ಮಾಡಿದ್ದು ಮೋದಿ ಪತ್ರದಲ್ಲಿ ಉಲ್ಲೇಖ ಮಾಡಿ ಬರೆದಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬಾಗಲಕೋಟ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.