ಹೊಸದಿಲ್ಲಿ –
ದೇಶವನ್ನುದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ಇಂದು ಸಂಜೆ 5 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಲಾಕ್ ಡೌನ್ ಮತ್ತು ಕೋವಿಡ್ ನಡುವೆ ಇಂದು ಸಂಜೆ ಪ್ರಧಾನಿ ದೇಶವನ್ನು ಉದ್ದೇಶಿಸಿ ಮಾತನಾಡ ಲಿದ್ದಾರೆ ಎಂದು ಪ್ರಧಾನಿ ಕಚೇರಿ (ಪಿಎಂಒ) ಟ್ವೀಟ್ ಮಾಡಿದ್ದು ತೀವ್ರ ಕುತೂಹಲವನ್ನು ಕೆರಳಿಸಿದೆ
ಎಪ್ರಿಲ್-ಮೇ ತಿಂಗಳಲ್ಲಿ ಉಲ್ಬಣಗೊಂಡಿದ್ದ ಕೋವಿಡ್ ಪ್ರಕರಣಗಳು ಈಗ ಕಡಿಮೆಯಾಗುತ್ತಿ ರುವ ಸಮಯದಲ್ಲಿ ಪ್ರಧಾನಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.ಕೋವಿಡ್ ಎರಡನೇ ಅಲೆಯಿಂ ದಾಗಿ ದೇಶದ ಕೆಲವು ಭಾಗಗಳಲ್ಲಿ ಕಟ್ಟುನಿಟ್ಟಾದ ಲಾಕ್‌ಡೌನ್ ವಿಧಿಸಲಾಗಿತ್ತು ಈಗ ಪ್ರಧಾನಿ ಅವರ ಭಾಷಣ ಕುತೂಹಲ ಕೆರಳಿಸಿದೆ
ರಾಜ್ಯಗಳು ಮತ್ತು ತಜ್ಞರುಗಳ ಟೀಕೆಗೆ ಗುರಿಯಾಗಿ ರುವ ತಮ್ಮ ಸರಕಾರದ ವ್ಯಾಕ್ಸಿನೇಷನ್ (ಲಸಿಕೆ) ನೀತಿಯ ಕುರಿತು ಪ್ರಧಾನಿ ಮೋದಿಯವರು ಮಾತ ನಾಡಲಿದ್ದಾರೆ ಎಂದು ವರದಿಗಳು ತಿಳಿಸಿದ್ದು ಏನು ಮಾತನಾಡಲಿದ್ದಾರೆ ಯಾವ ಸಂದೇಶಗಳನ್ನು ದೇಶಕ್ಕೆ ನೀಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ