ಪ್ರಾಚಾರ್ಯ ಗೋಪಾಲಯ್ಯ ಟಿ ಇನ್ನೂ ನೆನಪು ಮಾತ್ರ – ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ಸೇರಿದಂತೆ ರಾಜ್ಯದ ಶಿಕ್ಷಕ ಬಂಧುಗಳಿಂದ ಭಾವಪೂರ್ಣ ನಮನ ಸಂತಾಪ

Suddi Sante Desk
ಪ್ರಾಚಾರ್ಯ ಗೋಪಾಲಯ್ಯ ಟಿ ಇನ್ನೂ ನೆನಪು ಮಾತ್ರ – ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ಸೇರಿದಂತೆ ರಾಜ್ಯದ ಶಿಕ್ಷಕ ಬಂಧುಗಳಿಂದ ಭಾವಪೂರ್ಣ ನಮನ ಸಂತಾಪ

ತುಮಕೂರು

 

ಶಿಕ್ಷಕ ರಾಗಿ ವೃತ್ತಿಯನ್ನು ಆರಂಭ ಮಾಡಿದ ಗೋಪಾಲಯ್ಯ ಟಿ ಇವರು ನಿಧನರಾಗಿದ್ದಾರೆ. ಹೌದು ಗೋಪಾಲಯ್ಯ ಟಿ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಮೋತಕಪಲ್ಲಿ ತಾಲ್ಲೂಕು ಗುರು ಮಿಟ್ಕಲ್ ಜಿಲ್ಲಾ ಯಾದಗಿರಿ ಯಲ್ಲಿ ಇಂಗ್ಲಿಷ್ ಶಿಕ್ಷಕರಾಗಿ  ಸೇವೆ ಸಲ್ಲಿಸುತ್ತಿದ್ದರು 2009 ರಲ್ಲಿ  ಉಪನ್ಯಾಸಕರಾಗಿ ಬಡ್ತಿಯನ್ನು ಪಡೆದುಕೊಂಡು ಸಧ್ಯ ಸರ್ಕಾರಿ ಪದವಿ ಪೂರ್ವ ಕಾಲೇಜ್ ಶೀಗಿಹಳ್ಳಿ ತಾಲ್ಲೂಕು ತುರುವೇಕೆರೆ ಜಿಲ್ಲಾ ತುಮಕೂರು ಇಲ್ಲಿ ಪ್ರಭಾರಿ ಪ್ರಿನ್ಸಿಪಾಲರಾಗಿ ಸೇವೆಯನ್ನು ಮಾಡುತ್ತಿದ್ದರು

ಇವರು ಉಸಿರಾಟದ ತೊಂದರೆಯಿಂದ ನಿಧನರಾಗಿದ್ದಾರೆ.ಗೋಪಾಲ್ ಟಿ ನಾಡಿನ ಶಿಕ್ಷಕರಿಂದ ಅದರಲ್ಲಿ ಗ್ರಾಮೀಣ ಪ್ರೌಢಶಾಲೆ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ  ಆತ್ಮೀಯ ಗೆಳೆಯರಾಗಿದ್ದು ಇಲಾಖೆಯಲ್ಲಿ ಸಾಕಷ್ಟು ಕೆಲಸ ಕಾರ್ಯಗಳ ಮೂಲಕ ಅಚ್ಚು ಮೆಚ್ಚಿನ ಶಿಕ್ಷಕರಾಗಿ ಸಧ್ಯ ಪ್ರಾಚಾರ್ಯರಾಗಿ ಕೆಲಸವನ್ನು ಮಾಡುತ್ತಿದ್ದರು.

ಇನ್ನೂ ಇವರ ನಿಧನಕ್ಕೆ  ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ  ಪವಾಡೆಪ್ಪ,ಹಾಗೂ ಶಿಕ್ಷಕರು ಮಂಜುನಾಥ್ ಎಂ ಜಿ,ವೆಂಕಟೇಶ್ ಮೂರ್ತಿ ಶಿಕ್ಷಕಿ ಹನುಮವ್ವ ದೋಟಿಹಾಳ, ವಿರುಪಾಕ್ಷಪ್ಪ ಕೋರಿ,ಶ್ರೀಕಾಂತ್ ಮಾರ್ಗ ಅಶೋಕ,ಜೋಶಿ,ಚಂದ್ರಶೇಖರ

ಹಣಮಂತ ಸೇರಿದಂತೆ ನಾಡಿನ ಶಿಕ್ಷಕ ಬಂಧುಗಳು ತೀವ್ರ ಸಂತಾಪವನ್ನು ಸೂಚಿಸಿ ದ್ದಾರೆ.ನಾಳೆ ಅವರ ಸ್ವಗ್ರಾಮದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.