ಸರ್ಕಾರ ಆದೇಶ ದಿಕ್ಕರಿಸಿ ಪ್ರಾಥಮಿಕ ಶಾಲೆ ಗಳು ಆರಂಭ ಅನುಮತಿ ನೀಡುವ ಮುನ್ನವೇ ಖಾಸಗಿ ಶಾಲೆಗಳ ದರ್ಬಾರ್…..

Suddi Sante Desk

ಚಿಕ್ಕಬಳ್ಳಾಪುರ –

ರಾಜ್ಯ ಸರ್ಕಾರ ರಾಜ್ಯದಲ್ಲಿ ಇನ್ನೂ ಕೂಡಾ ಪ್ರಾಥಮಿಕ ಹಂತದ ಶಾಲೆಗಳ ಆರಂಭಕ್ಕೆ ಅವಕಾಶ ವನ್ನು ನೀಡಿಲ್ಲ.ಆದರೂ ಕೂಡಾ ಈ ಒಂದು ಆದೇಶ ವನ್ನು ಉಲ್ಲಂಘಿಸಿ ಎಲ್ ಕೆಜಿ ಯುಕೆಜಿ ತರಗತಿಗ ಳನ್ನು ಪ್ರಾರಂಭ ಮಾಡಲಾಗಿದೆ.

ಹೌದು 1 ‌ರಿಂದ 5 ನೇ ತರಗತಿಗಳಿಗೆ ಸರ್ಕಾರ ಅನು ಮತಿ ನೀಡುವ ಮುಂಚೆಯೇ ಖಾಸಗಿ ಸ್ಕೂಲ್ಸ್ ಗಳನ್ನು ಓಪನ್ ಮಾಡಲಾಗಿದೆ.ಚಿಕ್ಕಬಳ್ಳಾಪುರ ದ ಚಿಂತಾಮಣಿಯ ಬಹುತೇಕ ಶಾಲೆಗಳಲ್ಲಿ ಫ್ರೀ ಪ್ರೈಮರಿ ಕ್ಲಾಸಸ್ ಆರಂಭವಾಗಿವೆ.

ಬಹುತೇಕ ಮಕ್ಕಳಿಗೆ ಶೀಥ,ಜ್ವರ ಕೆಮ್ಮು ಆತಂಕ ಇದ್ರೂ ಡೋಂಟ್ ಕೇರ್ ಎನ್ನುತ್ತಾ ಖಾಸಗಿ ಶಾಲೆಗಳನ್ನು ತೆರೆಯಲಾಗಿದೆ‌.ಖಾಸಗಿ ಶಾಲೆಗಳೊಂ ದಿಗೆ ಮಿಂಗಲ್ ಆಗಿದ್ದಾರಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಈ ಒಂದು ಗಂಭೀರವಾದ ಆರೋಪ ಸಾರ್ವಜನಿ ಕರಿಂದ ಕೇಳಿ ಬರತಾ ಇದೆ.

ಹಂತ ಹಂತವಾಗಿ ಶಾಲೆಗಳ ಆರಂಭಕ್ಕೆ ಸರ್ಕಾರ ಚಿಂತನೆ ನಡೆಸುತ್ತಿರುವ ನಡುವೆ ಈಗಾಗಲೇ ಪ್ರಾಥಮಿಕ ಹಂತದ ಶಾಲೆಗಳನ್ನು ಆರಂಭ ಮಾಡಿದ್ದು ಕಂಡು ಬರುತ್ತಿದೆ.ಕೊರೋನ ಮೂರನೆ ಅಲೆ ಆತಂಕ ಇದ್ರೂ ಕೇರ್ ಮಾಡದ ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರು ಶಾಲೆ ಆರಂಭ ಮಾಡಿದ್ದಾರೆ‌

ಫೀಸ್ ವಸೂಲಿಗೆ ಪ್ರೀ ಪ್ರೈಮರಿಗೆ ಮುಂದಾಗಿದೆ ಪ್ರೈವೇಟ್ ಸ್ಕೂಲ್ಸ್ ಗಳು.ಸರ್ಕಾರದ ಆದೇಶಕ್ಕೂ ಮುನ್ನವೇ ಖಾಸಗಿ ಶಾಲೆಗಳು ಓಪನ್ ಆಗಿವೆ. ನಗರದ ಪ್ರೀತಿ ಪಬ್ಲಿಕ್ ಸ್ಕೂಲ್ ,ನವೀನ ಸ್ಕೂಲ್ ಸೇರಿ ಹಲವು ಸ್ಕೂಲ್ಸ್ ರೂಲ್ಸ್ ಬ್ರೇಕ್ ಮಾಡಿ ಆರಂಭಗೊಂಡಿವೆ.ಮಾಸ್ಕ್ ಸಾಮಾಜಿಕ ಅಂತರ ಪಾಲಿಸದೇ ಮಕ್ಕಳಿಗೆ ತರಗತಿಗಳನ್ನು ನಡೆಸುತ್ತಿವೆ ಖಾಸಗಿ ಶಾಲೆಗಳು.ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದಲ್ಲಿ ಇದು ಕಂಡು ಬಂದಿತು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.