This is the title of the web page
This is the title of the web page

Live Stream

[ytplayer id=’1198′]

June 2024
T F S S M T W
 12345
6789101112
13141516171819
20212223242526
27282930  

| Latest Version 8.0.1 |

ಧಾರವಾಡ

ವನಹಳ್ಳಿ,ತಳವಾಯಿ,ಕನಕೂರು ಗ್ರಾಮಗಳಲ್ಲಿ ಪತಿಯ ಪರವಾಗಿ ಅಬ್ಬರದ ಪ್ರಚಾರ ಮಾಡಿದ ಪ್ರೀಯಾ ದೇಸಾಯಿ – ಮನೆ ಮನೆಗೆ ತೆರಳಿ ಮತಯಾಚನೆ ಪ್ರಚಾರ…..

WhatsApp Group Join Now
Telegram Group Join Now

ಧಾರವಾಡ

2023 ಕರ್ನಾಟಕ ವಿಧಾನಸಭಾ ಚುನಾವಣೆ ಅಂಗವಾಗಿ ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಅಮೃತ ದೇಸಾಯಿ ಪರವಾಗಿ ಅವರ ಪತ್ನಿಯಾದ ಶ್ರೀಮತಿ ಪ್ರೀಯಾ ಅಮೃತ ದೇಸಾಯಿ ಅವರು ಧಾರವಾಡ ತಾಲೂಕಿನ ಗ್ರಾಮಾಂತರ ಕ್ಷೇತ್ರಗಳಾದ ವನಹಳ್ಳಿ ತಳವಾಯಿ, ಮತ್ತು ಕನಕೂರು ಗ್ರಾಮಗಳಿಗೆ ಭೇಟಿಕೊಟ್ಟು ಪ್ರಚಾರ ಮಾಡಿದರು

ಈ ಮೂರು ಗ್ರಾಮಗಳಲ್ಲಿ ಪಾದಯಾತ್ರೆ ಮಾಡುತ್ತ ಆ ಗ್ರಾಮಗಳ ಮನೆ ಮನೆಗೂ ತೆರಳಿ ಮಹಿಳಾ ನಾಗರಿಕರನ್ನು ಭೇಟಿ ಮಾಡಿದರು. ಅವರ ಸಹಕಾರ ಮತ್ತು ಬೆಂಬಲದಿಂದ ಈ ವರೆಗೆ ನನ್ನ ಅಧಿಕಾರ ಅವಧಿಯಲ್ಲಿ ಧಾರವಾಡ ಕ್ಷೇತ್ರಾ ಭೀವೃದ್ಧಿಗಾಗಿ ನಾನು ಕೈಗೊಂಡ ಅಭಿವೃದ್ಧಿ ಯೋಜನೆಗಳ ಬಗ್ಗೆ ತಿಳಿಸಿದರು

ಅವರೆಲ್ಲರ ಪ್ರೀತಿ ವಿಶ್ವಾಸದಿಂದ ಬಿಜೆಪಿ ಸರ್ಕಾರ ಮತ್ತೊಂದು ಬಾರಿ ನನಗೆ ಸ್ಪರ್ಧೆಸಲು ಅವಕಾಶ ಕೊಟ್ಟಿದ್ದು ಈ ಮುಂಬರುವ ಚುನಾವಣೆಯಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರಗಳ ಸಂಪೂರ್ಣ ಅಭೀವೃದ್ಧಿಗಾಗಿ ನಿಮ್ಮ ಮತಗಳು ಅಮೂಲ್ಯವಾ ದದ್ದು ಎಂದು ತಿಳಿಸಿದರು

ಮತ್ತೆ ಪತಿಯನ್ನು ಮತ್ತೊಂದು ಬಾರಿಗೆ ಗೆಲ್ಲಿಸಿ ಹಾಗೆ ಭಾರತ ದೇಶದಲ್ಲಿ ಅಭಿವೃದ್ಧಿಯುತ ಆಡಳಿತಕ್ಕಾಗಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುವಂತೆ ಎಲ್ಲೆಡೆ ಕರಪತ್ರಗಳನ್ನು ಹಂಚಿ ಮನವಿ ಮಾಡಿ ಮತಯಾಚನೆ ಮಾಡಿದರು.

ಈ ವೇಳೆ ಶ್ರೀಮತಿ ಜ್ಯೋತಿ ಗೌಡರ,ಶ್ರೀಮತಿ ನಿರ್ಮಲ ಹಾವೇರಿ,ಶ್ರೀಮತಿ ದೀಪಾ ಶಿರೂರ, ಶ್ರೀಮತಿ ರೇಣುಕಾ ಅರೆನ್ನವರ,ಶ್ರೀಮತಿ ಈರಮ್ಮ ಹುಬ್ಬಳ್ಳಿ, ಶ್ರೀಮತಿ ಬಸಮ್ಮ ತಳವಾರ, ಶ್ರೀಮತಿ ಸುಮಾ ನಾವಳಿ ಸೇರಿದಂತೆ ಆ ಗ್ರಾಮಗಳ ಸರ್ವ ತಾಯಂದಿರು ಯುವಕರು ಮತ್ತು ಎಲ್ಲಾ ಗ್ರಾಮ ಸ್ಥರು ಶ್ರೀಮತಿ ಪ್ರಿಯಾ ಅಮೃತ ದೇಸಾಯಿ ಅವರೊಂದಿಗೆ ಉಪಸ್ಥಿತರಿದ್ದರು.

ಸುದ್ದಿ ಸಂತೆ ನ್ಯೂಸ್ ಧಾರವಾಡ…..


Google News

 

 

WhatsApp Group Join Now
Telegram Group Join Now
Suddi Sante Desk