ಮಂಗಳೂರು –
SDPI ವಿಜಯೋತ್ಸವ ವೇಳೆ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿದ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಒಂದು ವಿಡಿಯೋ ವೈರಲ್ ಆಗಿದೆ.

ಪಾಕಿಸ್ಥಾನ ಜಿಂದಾಬಾದ್ ಎಂಬ ಜೈಕಾರದ ಘೋಷಣೆಯ ವಿಡಿಯೋ ಇದಾಗಿದೆ.ಪಾಕ್ ಪರ ಘೋಷಣೆ ಎನ್ನಲಾದ ವಿಡಿಯೋ ಇದಾಗಿದ್ದು ಸಾಕಷ್ಟು ವೈರಲ್ ಆಗಿದೆ.

ಉಜಿರೆಯ SDM ಪಿಯು ಕಾಲೇಜು ಮತ ಎಣಿಕೆ ಕೇಂದ್ರದ ಮುಂದೆ ಈ ಒಂದು ಘಟನೆ ನಡೆದಿದೆ.ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಯಲ್ಲಿ ಈ ಒಂದು ಘಟನೆ ನಡೆದಿದ್ದು ಸಧ್ಯ ಉಜಿರೆಯ ಪೊಲೀಸರು ವಿಡಿಯೋವನ್ನು ಪರಿಶೀಲನೆ ಮಾಡ್ತಾ ಇದ್ದಾರೆ.
ಮುಂದೆ ಯಾವ ಕ್ರಮವನ್ನು ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.