ಬೆಂಗಳೂರು –
ಪ್ರಾಥಮಿಕ ಶಾಲಾ ಸಹ ಶಿಕ್ಷಕರ ವರ್ಗಾವಣೆಗೆ ಕೆಎಟಿ ತಡೆಯಾಜ್ಞೆ ನೀಡಿರುವುದರಿಂದ ಮತ್ತೆ ಒಂದು ರೀತಿಯ ಅನಿಶ್ಚಿತತೆ ಮೂಡಿದಂತಾಗಿದೆ.ಹೌದು ವರ್ಗಾವಣೆ ಪ್ರಕ್ರಿಯೆಗೆ ತಡೆ ತಂದಿರುವುದರಿಂದ ಪ್ರಾಥಮಿಕ ಶಾಲೆಯ ಸುಮಾರು 500 ರಿಂದ 600 ಶಿಕ್ಷಕರಿಗೆ ಈ ಒಂದು ತಡೆ ಯಾಜ್ಞೆ ಯಿಂದಾಗಿ ಸಮಸ್ಯೆಯುಂಟಾಗಲಿದ್ದು ವರ್ಗಾವಣೆ ಆದೇಶಕ್ಕಾಗಿ ಮತ್ತಷ್ಟು ದಿನ ಕಾಯುವಂತಾಗಿದೆ.ಕಳೆದ ಎರಡು ವರ್ಷಗಳಿಂದ ವರ್ಗಾವಣೆ ಆದೇಶಕ್ಕಾಗಿ ಕಾಯು ತ್ತಿದ್ದು ಇದೀಗ ಪ್ರಕ್ರಿಯೆ ಪ್ರಾರಂಭವಾಗಿ ಮುಗಿಯಲಿದೆ ಎನ್ನುವಷ್ಟರಲ್ಲಿ ತಡೆಯಾಜ್ಞೆ ನೀಡಿರುವುದರಿಂದ ಶೈಕ್ಷಣಿಕ ಚಟುವಟಿಕೆಗಳ ಮೇಲೂ ಪರಿಣಾಮ ಬೀರಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ನಿಯಮಗಳ ಪ್ರಕಾರ ಸಾಮಾನ್ಯವಾಗಿ ಶಿಕ್ಷಕರ ವರ್ಗಾವಣೆ ಯನ್ನು ಏಪ್ರಿಲ್‌ನಿಂದ ಜೂನ್ ತಿಂಗಳಿನ ಬೇಸಿಗೆ ರಜೆ ಅವಧಿಯಲ್ಲಿ ಪ್ರಕ್ರಿಯೆ ನಡೆಸಬೇಕು.ಆದರೆ ಕಳೆದ ಎರಡು ವರ್ಷದಿಂದ ವರ್ಗಾವಣೆ ಪ್ರಕ್ರಿಯೆ ನಡೆಯುತ್ತಿದೆ. ಕೊರೊನಾದಿಂದ ಶಾಲೆಗಳು ನಡೆಯದಿರುವ ವೇಳೆಯೂ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡಿಲ್ಲ.ಇದೀಗ ಪರೀಕ್ಷಾ ಸಮಯದಲ್ಲಿ ನಡೆಸುತ್ತಿರುವುದರಿಂದ ಮಕ್ಕಳ ಕಲಿಕೆ ಮೇರೆ ಪರಿಣಾಮ ಬೀರಲಿದೆ.1-5ನೇ ತರಗತಿಗೆ ಬೋಧನೆ ಮಾಡುವ ಪ್ರಾಥಮಿಕ ಶಾಲಾ ಶಿಕ್ಷಕರನ್ನು 1-7ನೇ ತರಗತಿ ವರೆಗೆ ಬೋಧನೆ ಮಾಡುತ್ತಾರೆ ಎಂದು ತಿಳಿಸಿರುವ ಸರ್ಕಾ ರವು, 6-8ನೇ ತರಗತಿ ಬೋಧಿಸುವ ಪದವೀಧರ ಶಿಕ್ಷಕರಿಗೆ ವರ್ಗಾವಣೆಯಲ್ಲಿ ಅವಕಾಶ ಮಾಡಿಕೊಟ್ಟಿಲ್ಲ. ಈ ನಿಯ ಮವು ತಾರತಮ್ಯದಿಂದ ಕೂಡಿದೆ ತಮಗೂ ವರ್ಗಾವಣೆ ಯಲ್ಲಿ ಅವಕಾಶ ಕಲ್ಪಿಸಬೇಕು ಎಂಬುದು ಪದವೀಧರ ಶಿಕ್ಷಕರ ಮನವಿಯಾಗಿದೆ.ಈ ವಿಚಾರವಾಗಿಯೇ ಕೆಎಟಿ ಅಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.ಇನ್ನೂ ಈ ಒಂದು ವಿಚಾರ ಕುರಿತು ಇಲಾಖೆಯ ಆಯುಕ್ತ ಆರ್ ವಿಶಾಲ್ ಅವರು ಮಾತನಾಡಿ ಪ್ರಕರಣವು ಕೆಎಟಿ ಅಲ್ಲಿ ಇರುವುದ ರಿಂದ ಕೂಡಲೇ ಇದನ್ನು ತೆರವುಗೊಳಿಸಿ ವರ್ಗಾವಣೆ ಪ್ರಕ್ರಿಯೆ ಮುಂದುವರಿಸಲು ಸರ್ಕಾರವು ಪ್ರಯತ್ನಿಸುತ್ತಿದೆ ಎಂದರು.