ದೇವದುರ್ಗ –
ಸರ್ಕಾರಿ ಶಾಲೆಗಳಲ್ಲಿ ಅನಧಿಕೃತ ಗೈರಾಗುತ್ತಿದ್ದ ಐದು ಜನ ಶಿಕ್ಷಕರಿಗೆ ಮೂರು ಭಾರಿ ನೋಟಿಸ್ ಜಾರಿ ಗೊಳಿಸಿದರೂ ಅವರಿಂದ ಸ್ಪಷ್ಟ ಉತ್ತರ ಬಾರದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಅಂತಿಮ ನೋಟಿಸ್ ಜಾರಿ ಮಾಡಿದ್ದು ಈಗಾಗಲೇ ಅಂತಿಮ ನೋಟಿಸ್ ಜಾರಿ ಮಾಡಿ ಎರಡು ವಾರ ಗತಿಸಿದರೂ ಉತ್ತರ ಬಾರದ ಕಾರಣ ಸೇವೆಯಿಂದ ವಜಾಗೊಳಿಸಲು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಪ್ರಸ್ತಾವನೆ ಕಳುಹಿಸಲಾಗಿದೆ.ಹೌದು ಇಂಥದೊಂದು ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನಲ್ಲಿ ನಡೆದಿದೆ.

ಹೌದು ಪಟ್ಟಣದ ಯಲ್ಲಾಲಿಂಗ ಕಾಲೋನಿ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ತಬುಸಮ್ 2015 ರಲ್ಲೇ ಅನಧಿಕೃತವಾಗಿ ಗೈರಾಗಿದ್ದಾರೆ.2011-12ನೇ ಸಾಲಿನಲ್ಲಿ ಬಿಎಡ್ ಪದವಿ ಮಾಡಲು ಹೋಗಿದ್ದರು. 2014 ರಲ್ಲಿ ವೇತನ ರಹಿತ ರಜೆ ಹೋಗಿದ್ದು 2015 ರಿಂದ ಅನಧಿಕೃತವಾಗಿ ಗೈರಾಗಿದ್ದಾರೆ.2008 ರಲ್ಲಿ ಸೇವೆ ಸೇರಿದ್ದು ಒಂದೂವರೆ ವರ್ಷ ಮಕ್ಕಳಿಗೆ ಪಾಠ ಮಾಡಿದ್ದು ಈಗ ನೆನಪು ಮಾತ್ರ.ಪಲಕನಮರಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಟಿಜಿಟಿ ಶಿಕ್ಷಕ ಶಿವುಕುಮಾರ ಟಿ.ಎಸ್ 2015 ರಿಂದ ಗೈರಾಗಿದ್ದಾರೆ.ಗಾಣಧಾಳ ಸರಕಾರಿ ಶಾಲೆಯ ಶಿಕ್ಷಕ ಸಿದ್ದಲಿಂಗ 2011ರಿಂದ ಅನಧಿಕೃತವಾಗಿ ಗೈರಾಗಿ ದ್ದಾರೆ.ಆರೇರದೊಡ್ಡಿ ಶಾಲಾ ಶಿಕ್ಷಕ ಮೋತಿರಾಮ ರಾಠೊಡ್ 2019 ರಿಂದ ಗೈರಾಗಿದ್ದಾರೆ.ಇನ್ನೂ ಇತ್ತ ಕ್ಷೇತ್ರ ಸಂಪನ್ಮೂಲ ಕೇಂದ್ರದ ಬಿಐಇಆರ್‌ಟಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕಿ ಸರಿತಾ 2017ರಿಂದ ಅನಧಿಕೃತ ಗೈರಾಗಿದ್ದಾರೆ. ಹೀಗಾಗಿ ಇದನ್ನೆಲ್ಲವನ್ನು ಗಂಭೀರವಾಗಿ ಪರಿಗಣಿಸಿ ಇಲಾಖೆಯ ಅಧಿಕಾರಿಗಳು ಈಗ ಅಮಾನತು ಮಾಡಲು ಪ್ರಸ್ತಾವನೆಯನ್ನು ಕಳಿಸಿದ್ದಾರೆ.