This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

State News

ವೇಶ್ಯಾವಾಟಿಕೆ ಜಾಲ ಪತ್ತೆ – ಮಹಿಳೆಯರನ್ನು ವಿದೇಶದಿಂದ ಕಳ್ಳ ಸಾಗಾಣಿಕೆ ಮೂಲಕ ಕರೆ ತರುತ್ತಿದ್ದ ಖತರ್ನಾಕ್ ಖದೀಮರು ಅಂದರ್ ಮೂವರು ಬಂಧನ – ಇಬ್ಬರು ಮಹಿಳೆಯರ ರಕ್ಷಣೆ…..

WhatsApp Group Join Now
Telegram Group Join Now

ಬೆಂಗಳೂರು –

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸಿಸಿಬಿ ಪೊ ಲೀಸರು ಭರ್ಜರಿ ಕಾರ್ಯಾಚರಣೆ ಮಾಡಿ ವೇಶ್ಯಾ ವಾಟಿಕೆ ಜಾಲವನ್ನು ಪತ್ತೆ ಹಚ್ಚಿದ್ದಾರೆ.ಹೌದು ವಿದೇಶ ದಿಂದ ಮಹಿಳೆಯರನ್ನು ಕಳ್ಳ ಸಾಗಾಣಿಕೆಯ ಮೂಲ ಕ ಸುಳ್ಳು ದಾಖಲೆಗಳನ್ನು ನೀಡಿ ಕರೆದುಕೊಂಡು ಬಂದು ನಗರದಲ್ಲಿ ಹೈಟೇಕ್ ಆಗಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾ ರೆ.

ಹೌದು ಬಾಂಗ್ಲಾ ಹಾಗೂ ಇತರ ದೇಶಗಳಿಂದ ಅಲ್ಲ ದೇ ಬೇರೆ ರಾಜ್ಯಗಳಿಂದ ಮಹಿಳೆಯರನ್ನು ಕಳ್ಳ ಸಾಗಾಣಿಕೆ ಮೂಲಕ ನಗರಕ್ಕೆ ಕರೆದುಕೊಂಡು ಬೆಂಗ ಳೂರಿನಲ್ಲಿ ವೇಶ್ಯಾವಾಟಿಕೆ ಜಾಲ ನಡೆಸುತ್ತಿದ್ದರು.

ಖಚಿತವಾದ ಮಾಹಿತಿಯನ್ನು ಪಡೆದುಕೊಂಡ ಸಿಸಿಬಿ ಪೊಲೀಸರು ಕಾರ್ಯಾಚರಣೆ ಮಾಡಿ ಪಶ್ಚಿಮಬಂ ಗಾಳ ರಾಜ್ಯದ ಮೂವರು ಪ್ರಮುಖ ಆರೋಪಿ ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಸಿಸಿಬಿಯ ಮಹಿಳಾ ಸಂರ ಕ್ಷಣಾ ದಳದ ಅಕಾರಿಗಳು ಮತ್ತು ಟೀಮ್ ಕಾರ್ಯಾ ಚರಣೆ ಮಾಡಿ ಮಹಾದೇವಪುರದ ಲಕ್ಷ್ಮೀಸಾಗರ ಲೇಔಟ್ ಮನೆಯ ಮೇಲೆ ದಾಳಿ ನಡೆಸಿದ್ದು ಪಶ್ಚಿಮ ಬಂಗಾಳ ರಾಜ್ಯದ ಮುರ್ಷಿದಬಾದ್ ಜಿಲ್ಲೆಯ ನೌಷ ದ್ ಅಲಿ ಅಲಿಯಾಸ್ ಅಸ್ಲಾಂ ಮೌಲಾ (55) ಫರ ಗಣ ಜಿಲ್ಲೆಯ ಸ್ವರೂಪ್ ನಗರದ ರಿಯಾಜುಲ್ ಶೇಖ್ (31), ಬಾರಶಾದ್ ಜಿಲ್ಲೆಯ ಸಮೀರ್ (40) ಅವರನ್ನು ಬಂಧಿಸಿದ್ದಾರೆ.ಆರೋಪಿಗಳು ಬೇರೆ ಕಡೆ ಗಳಿಂದ ಮಹಿಳೆಯರನ್ನು ಕರೆತಂದು ಮಹಾದೇವ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಾಡಿಗೆ ಮನೆ ಯಲ್ಲಿಟ್ಟು ವೇಶ್ಯಾವಾಟಿಕೆ ಜಾಲ ನಡೆಸುತ್ತಿದ್ದರು.

ನೌಷಾದ್ ಅಲಿ ವಿದೇಶಗಳಿಂದ ಕಳ್ಳಸಾಗಾಣಿಕೆ ಯಲ್ಲಿ ಕರೆತರುವ ಮಹಿಳೆಯರಿಗೆ ಸುಳ್ಳು ದಾಖಲೆ ಮೇಲೆ ಆಧಾರಕಾರ್ಡ್ ಹಾಗೂ ಇನ್ನಿತರ ಸ್ಥಳೀಯ ದಾಖಲೆಗಳನ್ನು ಮಾಡಿಸಿಕೊಡುತ್ತಿದ್ದ ಎಂದು ತಿಳಿದು ಬಂದಿದ್ದು ಸಧ್ಯ ಆರೋಪಿಗಳನ್ನು ಬಂಧನ ಮಾಡಿ ರುವ ಸಿಸಿಬಿ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.ಅಲ್ಲದೇ ಬಂಧಿತರಿಂದ 11 ಆಧಾರ ಕಾರ್ಡ್ ಹಾಗೂ ಗುರುತಿನ ಚೀಟಿಗಳನ್ನು ವಶಪಡಿಸಿ ಕೊಳ್ಳಲಾಗಿದೆ.ಇನ್ನೂ ಇಬ್ಬರು ಬಾಂಗ್ಲಾದೇಶದ ಮಹಿಳೆಯರನ್ನು ರಕ್ಷಿಸಿ ರಾಜ್ಯ ನಿಲಯಕ್ಕೆ ಪೊಲೀಸ ರು ಒಪ್ಪಿಸಿದ್ದಾರೆ


Google News

 

 

WhatsApp Group Join Now
Telegram Group Join Now
Suddi Sante Desk