ವಿಜಯನಗರ –
ರಾಜ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಬೆನ್ನಲ್ಲೇ ರಾಜ್ಯದಲ್ಲಿ ಆಕ್ರೋಶ ಭುಗಿಲೆದ್ದಿದೆ.ಹೌದು ಸಚಿವ ಆನಂದ್ ಸಿಂಗ್ ಉಸ್ತುವಾರಿ ಬದಲಾವಣೆ ವಿಚಾರದಲ್ಲಿ ಅವರ ಅಭಿಮಾನಿಗಳು ಆಪ್ತರು ಸಿಡಿದೆದ್ದಿದ್ದಾರೆ ಅತ್ತ ಉಸ್ತುವಾರಿ ಪಟ್ಟಿ ಹೊರ ಬೀಳುತ್ತಿದ್ದಂತೆ ಇತ್ತ ಹೊಸಪೇಟೆ ಯಲ್ಲಿ ಆನಂದ್ ಸಿಂಗ್ ಅಭಿಮಾನಿಗಳಿಂದ ದಿಢೀರ್ ಪ್ರತಿಭಟನೆ ಮಾಡಿದರು

ನಗರದ ಪುನೀತ್ ರಾಜಕುಮಾರ್ ಸರ್ಕಲ್ ನಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಿದರು.ಪ್ರತಿಭಟನಾ ಸ್ಥಳಕ್ಕೆ ಸಿನಿಮೀಯ ರೀತಿಯಲ್ಲಿ ಆಗಮಿಸಿದ ಸಚಿವ ಆನಂದ್ ಸಿಂಗ್ ಅಭಿಮಾನಿಗಳು ಟೈರ್ ಗೆ ಬೆಂಕಿ ಹಚ್ಚಿದ್ದು ಕಂಡು ಆಕ್ರೋಶವನ್ನು ವ್ಯಕ್ತಪಡಿಸಿದರು.ಫೈರ್ ಇಂಜಿನ್ ತರಿಸಿ ಬೆಂಕಿ ನಂದಿಸಿ ಇವೆಲ್ಲಾ ತಾಂತ್ರಿಕ ಸಮಸ್ಯೆಗಳು ನಾನು ಒಪ್ಪಿದ ನಂತರವೇ ಉಸ್ತುವಾರಿ ಬದಲಾವಣೆ ಆಗಿದೆ ಎಂದರು
ಎಲ್ಲವನ್ನೂ ಹೊರಗಡೆ ಹೇಳುವ ಹಾಗಿಲ್ಲ ಎಂದು ಅಭಿಮಾ ನಿಗಳನ್ನು ಸಂತೈಸಿದರು ಸಚಿವ ಆನಂದ್ ಸಿಂಗ್.ನಂತರ ತಹಸೀಲ್ದಾರ್ ಕಚೇರಿವರೆಗೆ ಸಚಿವರ ಹಿಂದೆಯೇ ಬಂದರು ಅಭಿಮಾನಿಗಳು.ನಾನು ಕೆಲವೊಂದನ್ನು ತಮ್ಮ ಬಳಿ ಹೇಳಲು ಆಗಲ್ಲ ಎಂದಾಗ ಉದ್ದೇಶವ ಪೂರ್ವಕವಾಗಿಯೇ ನಿಮ್ಮ ಬದಲಾವಣೆ ಆಗಿದೆ ಎಂದ ಅಭಿಮಾನಿಗಳು