ವಿಜಯಪುರ -ಬಿಎಲ್ ಒ ಕರ್ತವ್ಯ ದ ವಿರುದ್ಧ ಶಿಕ್ಷಕರು ಈಗ ಸಿಡಿದೆದ್ದಿದ್ದಾರೆ ಹೌದು ಈ ಒಂದು ಕರ್ತವ್ಯ ದಿಂದ ಶಿಕ್ಷಕರನ್ನು ಮುಕ್ತಗೊಳಿಸುವಂತೆ ಒತ್ತಾಯಿಸಿ ಈಗ ಶಿಕ್ಷಕರು ಪ್ರತಿಭಟನೆ ಮಾಡಿ ಈ ಕೂಡಲೇ ಬೇಡಿಕೆ ಈಡೇರಿಸುವಂತೆ ಒತ್ತಾಯ ಮಾಡಿದರು
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕಾ ಘಟಕ ಇಂಡಿ ವತಿಯಿಂದ ಶಿಕ್ಷಕರನ್ನು BLO ಕೆಲಸದಿಂದ ಕೈಬಿಡಬೇಕೆಂದು ಆಗ್ರಹಿಸಿ ತಹಶಿಲ್ದಾರರ ರವರಿಗೆ ಮನವಿ ಸಲ್ಲಿಸಲಾಯಿತು.
ಶಿಕ್ಷಕರಿಗೆ ಕರೆದಿದ್ದ BLO ಸಭೆಯನ್ನು ಬಹಿಸ್ಕರಿಸಿ ಎಲ್ಲ ಶಿಕ್ಷಕರು ಗೈರು ಉಳಿದರು.ಮುಂದಿನ ಆಗು ಹೋಗುಗಳಿಗೆ ಸಂಘಟನೆಯು ಶಿಕ್ಷಕರೊಂದಿಗೆ ಸದಾ ಇರುವುದು ಎಲ್ಲರೂ ಒಗ್ಗಟ್ಟಿನಿಂದ ಎದುರಿ ಸೋಣ ಎಂಬ ಸಂದೇಶವನ್ನು ರವಾನೆ ಮಾಡಲಾ ಯಿತು.
ಕರ್ನಾಟಕ ರಾಜ್ಯ ನೌಕರ ಸಂಘ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಇಂಡಿ ಘಟಕ ದಿಂದ ಈ ಒಂದು ಹೋರಾಟ ನಡೆಯಿತು.
ಸುದ್ದಿ ಸಂತೆ ನ್ಯೂಸ್ ವಿಜಯಪುರ…..