ಪಂಚಮಿ ಹಬ್ಬಕ್ಕೆ ಬರತೇನಿ ಎಂದಿದ್ದ PSI ಅವಿನಾಶ್ ಹಬ್ಬ ಬರುವ ಮುಂಚೆ ಮರಳಿ ಬಾರದ ಲೋಕಕ್ಕೆ – ರಾಜ್ಯದ ತುಂಬೆಲ್ಲಾ ಸ್ನೇಹಿತರೊಂದಿಗೆ ಕಣ್ಣೀರಾಕುತ್ತಿ ದ್ದಾರೆ ಕುಟುಂಬಸ್ಥರು…..

Suddi Sante Desk

ಬೀದರ್ –

ಹೌದು ಇದಕ್ಕೆ ತಾಜಾ ಉದಾಹರಣೆ ಭೀಕರ ಅಪಘಾತ ದಲ್ಲಿ ಇಡೀ ರಾಜ್ಯವೇ ಮೂವರು ಪೊಲೀಸ್ ಅಧಿಕಾರಿ ಗಳನ್ನು ಕಳೆದುಕೊಂಡ ಚಿತ್ರಣ ಬದುಕು ಎಲ್ಲವೂ ಅವನಿಂ ದಲೇ.ಈಗ ಅವನಿಂದಲೇ ಎಲ್ಲವೂ ಮುಗಿದು ಹೋಗಿದೆ. ಬದುಕಿನ ಅರ್ಧ ದಾರಿಯಲ್ಲೇ ಬಿಟ್ಟು ಹೋದೆಯಲ್ಲೋ ಮಗ ಎಂದು ತಂದೆಯ ಗೋಳಾಟ. ಅಣ್ಣ ಪಂಚಮಿ ಹಬಕ್ಕೆ ಬರುತ್ತೇನೆಂದು ಹೇಳಿದವನು ಮರಳಿ ಮನೆಗೆ ಬರಲಿಲ್ಲ ಬಂದಿದ್ದು ಸಾವಿನ ಸುದ್ದಿ ಇದು ತಂಗಿಯ ಆಕ್ರಂದನದ ಮಾತು ಅಣ್ಣ ಎಲ್ಲಿ ಅದಿಯೋ ನಿನ್ನ ಕಣ್ತುಂಬ ನೋಡಬೇಕೆಂದು ತಂಗಿಯ ಆಕ್ರಂದನ ಮಗ ನಿನ್ನ ಜೊತೆ ಒಂದು ಬಾರಿ ಮಾತನಾಡುವೆ ಅನ್ನುವ ತಾಯಿ ರೋಧನೆ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ ಊರಿಗೆ ಊರೇ ಮೌನವಾಗಿ ನಿಂತಿದೆ ಇದು ಚಿತ್ತೂರಿನಲ್ಲಿ ನಡೆದ ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ಶಿವಾಜಿನಗರ ಪಿಎಸ್‌ಐ ಅವಿನಾಶ್ ಅವರ ಮನೆ ಹಾಗೂ ಊರಿನ ಸದ್ಯದ ಪರಿಸ್ಥಿತಿ.

ಒಂದೆ ಒಂದು ಬಾರಿಯಾದ್ರು ನನ್ನ ಜೊತೆ ಮಾತಾಡು ಅಂತಾ ತಾಯಿಯ ಗೋಳಾಟ ಮಗ ಎಲ್ಲಿ ಹೋದಿಯೋ ಅಂತಾ ತಂದೆಯ ರೋದನೆ ಕಂಡ ಕನಸು ನುಚ್ಚು ನೂರಾ ಯಿತು ಅಂತ ಕುಟುಂಬದ ಆಕ್ರಂದನ ನಂಗೆ ನನ್ನ ಅಣ್ಣ ಬೇಕು ಒಂದೇ ಒಂದು ಬಾರಿ ನನ್ನ ಜೊತೆ ಮಾತಾಡಿದ್ರೆ ಸಾಕು ಅಂತಾ ಗೋಳಾಡುತ್ತಿರುವ ತಂಗಿ.ಮಗ ನಾಲ್ಕು ದಿನಗಳ ಹಿಂದೆ ಮಾತನಾಡಿದ್ದಿಲ್ಲೋ ಅನ್ನುವ ಅಮ್ಮ ಪಂಚಮಿ ಹಬ್ಬಕ್ಕೆ ಬರುವುದಾಗಿ ಹೇಳಿಹೋಗಿದ್ದ ಆದ್ರೆ ಬಂದದ್ದು ಅವನ ಸಾವಿನ ಸುದ್ದಿ.ಆದ್ರೆ ಈ ರೀತಿಯಾಗಿ ಹೊಗುತ್ತಾನೆಂದು ಅಂದುಕೊಂಡಿರಲಿಲ್ಲ ಮಗ ಎಲ್ಲಿ ನೀನು ಅಂತಾ ತಾಯಿಯ ರೋದನೆ ಮುಗಿಲು ಮುಟ್ಟಿದ ಕುಟುಂಬದ ಆಕ್ರಂದನ

ನಿಂತ ನೆಲವೆ ಮೌನವಾಗಿ ಹೋಗಿದೆ.ನೆರದ ಜನರಲ್ಲಿ ಬರಿ ಕಣ್ಣಿರು ಊರಿಗೆ ಊರೆ ಮೌನವಾಗಿ ನಿಂತಿದೆ.ಈ ಎಲ್ಲಾ ಹೃದಯವಿದ್ರಾವಕ ದೃಶ್ಯಗಳು ಕಂಡು ಬಂದಿದ್ದು ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರೋಳಾವಾಡಿ ಗ್ರಾಮದಲ್ಲಿ.2017 ರ ಪಿಎಸ್‌ಐ ಬ್ಯಾಚ್ ನ ಅವಿನಾಶ್ ಯುನಿವರ್ಸಿಟಿ ಮತ್ತು ಪಿಣ್ಯ ಠಾಣೆಯಲ್ಲಿ ಪಿಎಸ್‌ಐ ಆಗಿ ಸೇವೆ ಸಲ್ಲಿಸಿ ಇತ್ತೀಚಿಗಷ್ಟೇ ಶಿವಾಜಿನಗರ ಠಾಣೆಗೆ ವರ್ಗವಾ ಗಿದ್ದರು.ಆದ್ರೆ ಗಾಂಜಾ ಗ್ಯಾಂಗ್ ಹಿಡಿಯಲು ಎಂಟು ಮಂದಿ ಸಿಬ್ಬಂದಿಗಳು ಕಾರಿನಲ್ಲಿ ಎರಡು ತಂಡಗಳಾಗಿ ಬೆಂಗಳೂರಿನಿಂದ ಆಂಧ್ರದ ಕಡೆಗೆ ಹೋಗುವಾಗ ಪೂತ ಲಪಟ್ಟು ತಾಲೂಕಿನ ಹಳ್ಳಿ ಯೊಂದರಲ್ಲಿ ನಸುಕಿನ ಜಾವ 3 ಗಂಟೆ ಸುಮಾರಿಗೆ ಭೀಕರ ರಸ್ತೆ ಅಪಘಾತದಲ್ಲಿ ಅವಿನಾಶ ಯಾದವ್ ಹಾಗೂ ಇನ್ನೊಬ್ಬ ಸಹೋದ್ಯೋಗಿ ಮೃತಪ ಟ್ಟಿದ್ದಾರೆ.

ಅವಿನಾಶ್ ಅವರ ತಂದೆ ಕಾಶಿನಾಥ ಯಾದವ ಸಹ ಪಿಎಸ್‌ಐ ಆಗಿ‌ ಕಳೆದ 31ಕ್ಕೆ ನಿವೃತ್ತಿ ಹೊಂದಿದ್ದರು. ಅವಿನಾಶ್ ಸಾವು ಕುಟುಂಬಸ್ಥರಿಗೆ ಬರಸಿಡಿಲು ಬಡಿದಂ ತಾಗಿದೆ.ಗ್ರಾಮದಲ್ಲಿ ನಿರವ ಮೌನ ಆವರಿಸಿದೆ.ಎಲ್ಲವೂ ಮುಗಿದು ಹೋಗಿದೆ.ಅವಿನಾಶನ ಉನ್ನತ ಹುದ್ದೆಗೆ ಸೇರ ಬೇಕು ಅನ್ನುವ ಕನಸು ಕೂಡಾ ನುಚ್ಚು ನೂರಾಗಿದೆಂದು ತಂದೆ ಗೋಳಾಡುತ್ತಿದ್ಧಾರೆ.

ಇನ್ನೂ ಕಾಶಿನಾಥ್‌ ಲಕ್ಷ್ಮೀ ಬಾಯಿ ಯಾದವ ದಂಪತಿಗಳಿಗೆ ಮೂರು ಜನ ಗಂಡು ಮಕ್ಕಳು ಒಬ್ಬಳು ಹೆಣ್ಣು ಮಗಳು. ಅದರ ಮೂರನೆ ಮಗನೇ ಅವಿನಾಶ್‌ ಇವರ ತಾಯಿ ಲಕ್ಷ್ಮೀಬಾಯಿ ಅವರು ಅವಿನಾಶ್‌ ಚಿಕ್ಕವನಿರುವಾಗಲೇ ತಾಯಿಯನ್ನು ಕಳೆದುಕೊಂಡಿದ್ದರು.ತದನಂತರ ತಂದೆ ಅವಿನಾಶನನ್ನು ಹಾಸ್ಟೆಲ್‌ನಲ್ಲಿ ಇಟ್ಟು ಓದಿಸಿದ್ದರು ನಂತರ ತಂದೆ ಕಾಶಿನಾಥ ಅನಿತಾ ಅನ್ನುವರನ್ನು ಎರಡನೆ ಮದು ವೆಯಾದ್ರು ಹೀಗಿದ್ದರೂ ಕುಟುಂಬ ಚೆನ್ನಾಗಿ ನಡೆದಿತ್ತು.

ಅವಿನಾಶ 2017 ರಲ್ಲಿ ಪೊಲೀಸ್‌ ಹುದ್ದೆಗೆ ಸೇರಿದ್ದರು. ಇದೀಗ ಬೆಂಗಳೂರಿನ ಶಿವಾಜಿ ನಗರದ ಪೊಲೀಸ್‌ ಠಾಣೆ ಯಲ್ಲಿ ಪಿಎಸ್‌ಐ ಆಗಿ ಕಾರ್ಯನಿರ್ವಹಿಸುತ್ತಿದ್ರು. ಅವಿನಾಶ ಅವರು ತಮ್ಮ ತಂದೆಯನ್ನು ಚೆನ್ನಾಗಿ ನೋಡಿ ಕೊಳ್ಳುತ್ತೆನೆಂದು ಹೇಳಿದ್ದರಂತೆ.ಆದ್ರೆ ಇಂದು ಜೀವನದ ಸೇವೆ ಮುಗಿಸಿಯೇ ಹೋಗಿದ್ದಾನೆ.ಇನ್ನೂ ಏನು ಉಳಿದಿದೆ ಅಂತ ತಂದೆ ಕಣ್ಣಿರು ಹಾಕಿದ್ರು.

ಸ್ವಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು.ಮನೆಯ ಅಂಗಳದಲ್ಲಿಯೆ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆಯನ್ನು ಮಾಡಲಾಗಿತ್ತು ಅಣ್ಣ ಒಂದೆ ಒಂದು ಬಾರಿ ನನ್ನ ಜೊತೆ ಮಾತನಾಡೋ ಅನ್ನುವ ತಂಗಿಯ ಗೋಳಾಟ ಪಂಚಮಿ ಹಬ್ಬಕ್ಕೆ ಬರುತ್ತನೆಂದು ಹೇಳಿದವನು ಬಾರದ ಲೋಕಕ್ಕೆ ಹೋದಿಯಲ್ಲೋ ಅಣ್ಣ ನಾನು ಯಾರನ್ನು ಅಣ್ಣ ಎಂದು ಕರೆಯಲಿ ಅಣ್ಣ ಅಣ್ಣ ಎಲ್ಲವೂ ಮುಗಿದೆ ಹೋಯ್ತಲ್ಲೋ ಎಂದು ತಂಗಿಯ ಆಕ್ರಂದನ ಕಂಡು ಇಡಿ ಊರಿಗೆ ಊರೆ ಕಣ್ಣೀರು ಹಾಕಿತ್ತು.ಇತ್ತ ರಾಜ್ಯದ ತುಂಬೆಲ್ಲಾ ಪೊಲೀಸ್ ಇಲಾಖೆಯ ಆಪ್ತ ಸ್ನೇಹಿತರು ಸೇರಿದಂತೆ ಹಲವರು ಅವಿನಾಶ್ ಅವರ ಸಾವಿಗೆ ಕಣ್ಣೀರು ಹಾಕುತ್ತಾ ಕುಟುಂಬದ ದುಃಖ ದಲ್ಲಿ ಭಾಗಿಯಾಗಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.