ಹಣಕ್ಕಾಗಿ ಸಾರ್ವಜನಿಕರನ್ನು ಪೀಡಿಸುತ್ತಿದ್ದ PSI ಅಮಾನತು…..

Suddi Sante Desk

ಕೋಲಾರ –

ಹಣಕ್ಕಾಗಿ ಸಾರ್ವಜನಿಕರನ್ನ ಪೀಡಿಸುತ್ತಿದ್ದ ಆರೋಪದ ಮೇಲೆ PSI ಒಬ್ಬರನ್ನು ಅಮಾನತು ಮಾಡಿದ ಘಟನೆ ಕೋಲಾರ ದಲ್ಲಿ ನಡೆದಿದೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ರಾಯಲಪಾಡು ಪೊಲೀಸ್ ಠಾಣೆ ಪಿಎಸ್ ಐ ಆಗಿದ್ದ ನರಸಿಂಹಯ್ಯ ಅಮಾನತ್ತಾದ ಅಧಿಕಾರಿ ಆಗಿದ್ದಾರೆ

ನರಸಿಂಹಯ್ಯ ಅಮಾನತ್ತಾದ ಸಬ್ ಇನ್ಸ್ ಪೆಕ್ಟರ್ ಆಗಿದ್ದು ಲಾಕ್ ಡೌನ್ ವೇಳೆ ಬೈಕ್ ಗಳನ್ನ ಸೀಜ್ ಮಾಡಿ ಸಾವಿರಾರು ರೂಪಾಯಿ ಹಣಕ್ಕಾಗಿ ಪೀಡಿಸು ತ್ತಿದ್ದರಂತೆ.ಅಲ್ಲದೆ ಇತ್ತೀಚೆಗೆ ಗ್ಯಾಂಬ್ಲಿಂಗ್ ಪ್ರಕರಣ ದಲ್ಲಿ ಸ್ಥಳೀಯರು ಎಸ್ಪಿಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಕೇಂದ್ರ ವಲಯದ ಐಜಿಪಿ ಚಂದ್ರ ಶೇಖರ್ ಅಮಾನತು ಮಾಡಿ ಆದೇಶವನ್ನು ಹೊರಡಿ ಸಿದ್ದಾರೆ.ಕೋಲಾರ ಎಸ್ಪಿ ಕಾರ್ತಿಕ್ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.