ಬೆಂಗಳೂರು –
PSI ಸೈಯದ್ ತನ್ವೀರ್ ಅಮಾನತು – ಗೃಹ ಸಚಿವರ ಸೂಚನೆಯಂತೆ ಪೊಲೀಸ್ ಅಧಿಕಾರಿ ಅಮಾನತು ಹೌದು ರಾಮನಗರದಲ್ಲಿ ವಕೀಲರ ವಿರುದ್ಧ ಸುಳ್ಳು ಪ್ರಕರಣ ದಾಖಲು ವಿಚಾರ ಕುರಿತಂತೆ ಐಜೂರು ಪೊಲೀಸ್ ಠಾಣೆಯ ಪಿಎಸ್‌ಐ ಸೈಯದ್ ತನ್ವೀರ್ ನ್ನು ಅಮಾನತು ಮಾಡಲಾಗಿದೆ.ಹೌದು ವಕೀಲರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ ಆರೋಪದ ಮೇಲೆ ನಗರದ ಐಜೂರು ಪೊಲೀಸ್ ಠಾಣೆ ಪಿಎಸ್‌ಐ ಸಯ್ಯದ್ ತನ್ವೀರ್ ಹುಸೇನ್ ಅವರನ್ನು ಅಮಾನತು ಮಾಡಿರುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ವಿಧಾನಸಭೆಯ ಅಧಿವೇಶನದಲ್ಲಿ ಈ ಒಂದು ವಿಚಾರವನ್ನು ಹೇಳಿದರು.ಜೊತೆಗೆ ಇಡೀ ಘಟನೆಗೆ ಕಾರಣವಾದ ವಕೀಲ ಚಾನ್ ಪಾಷ ವಿರುದ್ಧ ಕ್ರಮದ ಭರವಸೆ ನೀಡಿದರು.ಪಿಎಸ್‌ಐ ಅಮಾ ನತಿಗೆ ಪಟ್ಟು ಹಿಡಿದು 10 ದಿನಗಳಿಂದ ವಕೀಲರು ನಡೆಸುತ್ತಿದ್ದ ಹೋರಾಟಕ್ಕೆ ಜಯ ಸಿಕ್ಕಿದೆ. ಸಚಿವರು ಈ ವಿಷಯವನ್ನು ಹೇಳುತ್ತಿದ್ದಂತೆ ರಾಮನಗರದಲ್ಲಿ ಧರಣಿ ನಿರತ ವಕೀಲರು ಸಂಭ್ರಮಾಚರಿಸಿದರು.40 ವಕೀಲರ ವಿರುದ್ಧ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ವಕೀಲರು ಸಂಘದ ಆವರಣದಲ್ಲಿ ಫೆ. 12ರಿಂದ ಪಿಎಸ್‌ಐ ಅಮಾನತಿಗಾಗಿ ಧರಣಿ ಶುರು ಮಾಡಿದ್ದರು ತಮ್ಮ ಬೇಡಿಕೆ ವಾರವಾದರೂ ಸ್ಪಂದನೆ ಸಿಗದಿದ್ದರಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಫೆ.19ರಿಂದ ಅಹೋರಾತ್ರಿ ಧರಣಿ ಆರಂಭಿಸಿದ್ದರು.
ದಿನದಿಂದ ದಿನಕ್ಕೆ ತೀವ್ರತೆ ಪಡೆದುಕೊಂಡಿದ್ದ ಹೋರಾಟವು, ರಾಜ್ಯದ ಗಮನ ಸೆಳೆದಿತ್ತು. ಜೆಡಿಎಸ್ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿಯ ವಿರೋಧ ಪಕ್ಷದ ನಾಯಕ ಆರ್. ಅಶೋಕ, ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ಅವರು ವಕೀಲರ ಧರಣಿ ನಿರತ ವಕೀಲರನ್ನು ಭೇಟಿ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು.ವಿಧಾನಸಭೆ ಅಧಿವೇಶ ನದಲ್ಲಿ ಹೋರಾಟದ ವಿಷಯ ಪ್ರಸ್ತಾಪವಾಗಿ ಪಿಎಸ್‌ಐ ಅಮಾನತಿಗೆ ಒತ್ತಡ ಕೇಳಿಬಂದಿತ್ತು.
ಹೋರಾಟದ ಕಾವು ಹೆಚ್ಚುತ್ತಿರುವುದನ್ನು ಗಮನಿಸಿದ ಸಚಿವರು, ಕಡೆಗೂ ಪಿಎಸ್‌ಐ ತನ್ವೀರ್ ಅವರನ್ನು ಅಮಾನತು ಮಾಡಿದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..