ಕಲಬುರಗಿ –
ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ನಂತರ ಅದು ಸಕ್ಸಸ್ ಆದ ಖುಷಿಗೆ ಗ್ರೂಪ್ ಪೊಟೊವನ್ನು ತೆಗಸಿಕೊಂಡ ಟೀಮ್ ಫೋಟೊ ವೊಂದು ಇದೀಗ ವೈರಲ್ ಆಗಿದೆ.
ಇಲ್ಲಿಯ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗ್ರೂಪ್ ಪೋಟೊವನ್ನು ತೆಗೆಸಿಕೊಳ್ಳಲಾಗಿತ್ತು.ಇದು ಒಂದು ಐತಿಹಾಸಿಕ ದಿನ ಎಂದು ಹೇಳಿ ಪೋಟೋ ತೆಗೆಸಿಕೊಂಡಿ ದ್ದರು ಅಕ್ರಮದ ಪ್ರಮುಖ ಆರೋಪಿಯಾಗಿರುವ ಬಿಜೆಪಿ ಮುಖಂಡೆ ದಿವ್ಯಾ ಹಾಗರಗಿ ಮತ್ತು ಅವರ ತಂಡ. ಅಕ್ರಮ ದಲ್ಲಿ ಭಾಗಿಯಾಗಿದ್ದ ಜ್ಞಾನ ಜ್ಯೋತಿ ಶಾಲೆಯ ಮೇಲ್ವಿಚಾರ ಕರಿಗೆ ನಾಲ್ಕು ಸಾವಿರ ಹೆಚ್ಚಿಗೆ ಹಣ ನೀಡಿರುವ ಆರೋಪ ದಿವ್ಯಾ ಅವರ ಮೇಲಿದೆ.ಅಕ್ರಮದಲ್ಲಿ ಭಾಗಿಯಾಗಿದ್ದ ಉಳಿದವರಿಗೆ ಸೇರಬೇಕಾಗಿದ್ದ ಪಾಲು ಸಂದಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಪೋಟೊ ತೆಗೆಸಿಕೊಂಡು ಸಂತಸ ಪಟ್ಟಿ ದ್ದರು
ಹೌದು ಎಂಬ ಮಾಹಿತಿಯನ್ನು ತನಿಖೆಯಿಂದ ಪೊಲೀಸರು ಪತ್ತೆ ಮಾಡಿದ್ದು ಇನ್ನೂ ಈ ಫೋಟೋದಲ್ಲಿ ಸಿಐಡಿಯಿಂದ ಬಂಧಿತರಾಗಿರುವ ಸಿಪಿಐ ಆನಂದ್ ಮೇತ್ರಿ ಇದೇ ಪ್ರಕರಣ ದಲ್ಲಿ ಅಮಾನತಾಗಿರು ಡಿವೈಎಸ್ಪಿ ಆರ್ ಆರ್ ಹೊಸಮನಿ, ಇನ್ಸ್ಪೆಕ್ಟರ್ ದೀಲಿಪ್ ಸಾಗಾರ್ ಕೂಡ ದಿವ್ಯಾ ಜೊತೆಗೆ ಪೊಟೊಗೆ ಪೋಸ್ ಕೊಟ್ಟಿದ್ದಾರೆ.ಈ ಅಕ್ರಮ ಪ್ರಕರಣ ದಲ್ಲಿ ಆರೋಪಿಯಾಗಿರುವ ಜ್ಞಾನ ಜ್ಯೋತಿ ಶಾಲೆಯ ಹೆಡ್ ಮಾಸ್ಟರ್ ಕಾಶಿನಾಥ್ ಅವರನ್ನೂ ಪೋಟೋದಲ್ಲಿ ಕಾಣಬ ಹುದು.ಇದರ ಜೊತೆ ಶಾಲೆಯ ಸಿಬ್ಬಂದಿ,ಹೋಮ್ ಗಾರ್ಡ್ ಗಳು ಫೋಟೋದಲ್ಲಿ ಇದ್ದಾರೆ.