ಕಲಬುರಗಿ –
ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಸಂಬಂಧ ಸಿಐಡಿ ಅಧಿಕಾರಿಗಳು ಮತ್ತೆ ಇಬ್ಬರನ್ನು ಬಂಧಿಸಿದ್ದಾರೆ.ಮಹೇಶ ಹಿರೊಳ್ಳಿ ಹಾಗೂ ಸೈಫನ್ ಕರ್ಜಗಿ ಬಂಧಿತ ಆರೋಪಿಗಳು. ಪಿಎಸ್‌ಐ ಪರೀಕ್ಷೆ ಬರೆದಿದ್ದ ಇಸ್ಮಾಯಿಲ್ ಖಾದರ್ ಎಂಬಾತ ಪರಾರಿಯಾಗಿದ್ದು ಆತನ ಬಂಧನಕ್ಕೂ ಬಲೆ ಬೀಸಲಾಗಿದೆ.

ಇಸ್ಮಾಯಿಲ್ ಖಾದರ್ ಈಗಾಗಲೇ ಪೊಲೀಸ್ ಇಲಾಖೆ ಯಲ್ಲಿದ್ದು ಪಿಎಸ್‌ಐ ಪರೀಕ್ಷೆ ಬರೆದಿದ್ದ.ಆರ್.ಡಿ ಪಾಟೀಲ್ ಸಹಾಯದಿಂದ ಪರೀಕ್ಷೆಯಲ್ಲಿ ಅಕ್ರಮ ಎಸಗಿದ್ದ ಎನ್ನಲಾ ಗುತ್ತಿದೆ.ಇವರೆಲ್ಲರೂ ಅಫಜಲಪುರ ತಾಲೂಕಿನ ಕರ್ಜಗಿ ಮೂಲದವರಾಗಿದ್ದಾರೆ.ಬ್ಲೂಟೂತ್ ಕಿಂಗ್ ಪಿನ್ ಆರ್. ಡಿ ಪಾಟೀಲ್ ಗೆ ಆಪ್ತರಾಗಿದ್ದ ಆರೋಪಿಗಳು ಆತನ ಜೊತೆ ಗೂಡಿ ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ವಿಷಯ ಸಿಐಡಿ ತನಿಖೆಯಲ್ಲಿ ಬಯಲಾಗಿದೆ.ಬಂಧಿತ ಆರೋಪಿಗಳ ವಿರುದ್ಧ ಕಲಬುರಗಿಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಅಕ್ರಮ ಪ್ರಕರಣದಲ್ಲಿ ಈವರೆಗೆ ಬಂಧಿತರ ಸಂಖ್ಯೆ 41ಕ್ಕೆ ಏರಿಕೆ ಆಗಿದೆ.