ತುಮಕೂರು –
ಇದೊಂದು ಪೊಲೀಸ್ ಅಧಿಕಾರಿಯನ್ನು ಪೊಲೀಸರೇ ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ಮಾಡಿ ಬಂಧಿಸಿದ ಪ್ರಕರಣ.ಹೌದು ಪ್ರಕರಣವೊಂದರಲ್ಲಿ ಸಾರ್ವಜನಿಕರೊಬ್ಬರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪಿಎಸ್ ಐ ರೊಬ್ಬರ ಹಣ ಬೇಡಿಕೆ ಕುರಿತಂತೆ ಎಸಿಬಿ ಗೆ ದೂರನ್ನು ನೀಡಿದ್ದರು.
ದೂರಿನ ಹಿನ್ನಲೆಯಲ್ಲಿ ಕಾರ್ಯಾಚರಣೆ ಬಂದ ಎಸಿಬಿ ಟೀಮ್ ನೋಡಿದ ಪಿಎಸ್ಐ ಹಣ ಪಡೆಯುವಾಗ ಸ್ಥಳ ದಿಂದ ಎಸ್ಕೇಫ್ ಆಗಿದ್ದಾರೆ.ಓಡೊಡಿ ಹೋಗುತ್ತಿರುವಾಗ ದಾರಿ ಮಧ್ಯದಲ್ಲಿ ಪೊಲೀಸ್ ಇಲಾಖೆಯ ಸಮವಸ್ತ್ರವನ್ನು ಕಳಚಿ ಎಸೆದು ಹೋಗಿದ್ದರು. ಆದರೂ ಇವರನ್ನು ಬಿಡದ ಎಸಿಬಿ ಅಧಿಕಾರಿಗಳು ಬೆನ್ನತ್ತಿ ಹಿಡಿದು ಅವರಿಗೆ ಹೊಸ ಡ್ರೇಸ್ ಕೊಡಿಸಿಕೊಂಡು ಕರೆದುಕೊಂಡು ಬಂದಿದ್ದಾರೆ.
ಹೌದು ಇಂಥಹದೊಂದು ಘಟನೆ ತುಮಕೂರಿನಲ್ಲಿ ನಡೆದಿದೆ.ಗುಬ್ಬಿ ತಾಲೂಕು ಸಿ.ಎಸ್.ಪುರ ಠಾಣೆಯ ಪಿಎಸ್‌ಐ ಸೋಮಶೇಖರ್ ಮತ್ತು ಮುಖ್ಯಪೇದೆ ನಯಾಜ್ ಅಹಮದ್ ಸ್ಥಳೀಯರೊಬ್ಬರ ಕೌಟುಂಬಿಕ ಕಲಹ ಪ್ರಕರಣ ಬಗೆಹರಿಸಲು ₹28 ಸಾವಿರ ಬೇಡಿಕೆ ಇಟ್ಟಿದ್ದರು.ಈ ಹಿಂದೆ ಚಂದ್ರಣ್ಣ ಎಂಬುವವರಿಂದ ಮುಂಗಡವಾಗಿ 12 ಸಾವಿರ ಹಣ ಪಡೆದಿದ್ದ ಪೊಲೀಸರು ಇಂದು ಬಾಕಿ 16 ಸಾವಿರ ಪಡೆಯುವಾಗ ತುಮಕೂರು ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇನ್ನೂ ಎಸಿಬಿ ಅಧಿಕಾರಿಗಳ ಈ ಒಂದು ದಾಳಿಯಿಂದ ತಪ್ಪಿಸಿಕೊಳ್ಳಲು ಸೋಮಶೇಖರ್ ಅಧಿಕಾರಿಗಳು ಊಟ ಮಾಡುತ್ತಿದ್ದ ಸಮಯದಲ್ಲಿ ಮೊಬೈಲ್ ಫೋನ್ ಸಮೇತ ಠಾಣೆಯಿಂದ ಕಾಲ್ಕಿತ್ತಿದ್ದಾರೆ.ಇನ್ನೂ ಈ ಒಂದು ಸಮಯ ದಲ್ಲಿ ಊಟವನ್ನು ಬಿಟ್ಟು ಎದ್ದೋ ಬಿದ್ದೋ ಎಂಬಂತೆ ಪಿಎಸ್ಐ ಬೆನ್ನು ಹತ್ತಿದ ಎಸಿಬಿ ಅಧಿಕಾರಿಗಳು ಸಿ.ಎಸ್ ಪುರ ಸಮೀಪದ ಜನ್ನೇನಹಳ್ಳಿ ಬಳಿ ಬಂಧಿಸಿದ್ದಾರೆ.ಈ ಒಂದು ಸಮಯದಲ್ಲಿ ದಾರಿಯಲ್ಲಿ ಓಡೋಡಿ ಹೋಗು ವಾಗ ದಾರಿ ಮಧ್ಯದಲ್ಲಿ ಪಿಎಸ್ಐ ಸೋಮಶೇಖರ್ ನಡು ದಾರಿಯಲ್ಲಿಯೇ ಯೂನಿಫಾರ್ಮ್ ಬಿಚ್ಚಿ ಗದ್ದೆಗೆ ಎಸೆದು ಅರೆ ಬೆತ್ತಲಾಗಿ ಓಡಿದ್ದರು.
ಆದರೂ ಛಲ ಬಿಡದ ಎಸಿಬಿ ಅಧಿಕಾರಿಗಳು ಅವರನ್ನು ಬಂಧಿಸಿ ಹೊಸ ಬಟ್ಟೆ ಕೊಡಿಸಿ ಠಾಣೆಗೆ ಕರೆತಂದಿದ್ದಾರೆ ಸಧ್ಯ ಎಸ್ಕೇಫ್ ಆಗಿದ್ದ ಖತರ್ನಾಕ್ ಪಿಎಸ್ ಐ ಅವರನ್ನು ಬೆನ್ನತ್ತಿ ಕರೆದುಕೊಂಡು ಬಂದು ವಶಕ್ಕೆ ತಗೆದುಕೊಂಡಿರುವ ಎಸಿಬಿ ಅಧಿಕಾರಿಗಳು ಮುಂದಿನ ಕ್ರಮವನ್ನು ಕೈಗೊಂಡಿ ದ್ದಾರೆ.ಒಟ್ಟಾರೆ ಏನೇ ಆಗಲಿ ಆರೋಪಿಗಳನ್ನು ಹಿಡಿದು ಕೊಂಡು ಬಂದು ಜೈಲಿಗೆ ಅಟ್ಟುತ್ತಿದ್ದ ಪಿಎಸ್ಐ ಸಾಹೇಬರು ಚಳ್ಳೇ ಹಣ್ಣು ತಿನಿಸಿ ಎಸ್ಕೇಪ್ ಆಗಲು ಪ್ಲಾನ್ ಠುಸ್ ಆಗಿದೆ