ವಿಜಯನಗರ –
ಕರೊನಾ ವಾರಿಯರ್ ನನ್ನು ಮಹಾಮಾರಿ ಕರೊನಾ ಬಲಿ ಪಡೆದುಕೊಂಡ ಘಟನೆ ವಿಜಯನಗರ ಜಿಲ್ಲೆ ಯಲ್ಲಿ ನಡೆದಿದೆ.ಇಂದು ನಿವೃತ್ತಿ ಹೊಂದಬೇಕಾಗಿದ್ದ ಪಿಎಸ್ಐ ಕರೊನಾಗೆ ಬಲಿಯಾಗಿದ್ದಾರೆ. ಹೊಸಪೇ ಟೆಯ ಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ಯಲ್ಲಪ್ಪ ಕದ್ರಳ್ಳಿ(60) ಕರೊನಾದಿಂದ ಮೃತಪಟ್ಟ ಪಿಎಸ್ಐ ಆಗಿದ್ದಾರೆ.

ಇಂದು ಸೇವೆಯಿಂದ ನಿವೃತ್ತಿ ಹೊಂದಬೇಕಿತ್ತು. ಆದರೆ ನಿವೃತ್ತಿ ದಿನವೇ ಇವರು ನಿಧನರಾಗಿದ್ದಾರೆ. ಕೊಪ್ಪಳದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಯಾಗದೇ ಸಾವಿಗೀಡಾಗಿದ್ದಾರೆ.ಕಳೆದ 38 ವರ್ಷ ಗಳಿಂದ ಸೇವೆ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿ ಸುತ್ತಿದ್ದರು