ಅನ್ಯಾಯ ಸರಿಪಡಿಸುವಂತೆ ಶಿಕ್ಷಣ ಸಚಿವರಿಗೆ ಮನವಿ ನೀಡಿದ PST ಶಿಕ್ಷಕರು – ಶಿಕ್ಷಕರಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದ ಶಿಕ್ಷಕರು‌‌‌‌‌‌…..

Suddi Sante Desk
ಅನ್ಯಾಯ ಸರಿಪಡಿಸುವಂತೆ ಶಿಕ್ಷಣ ಸಚಿವರಿಗೆ ಮನವಿ ನೀಡಿದ PST ಶಿಕ್ಷಕರು – ಶಿಕ್ಷಕರಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದ ಶಿಕ್ಷಕರು‌‌‌‌‌‌…..

ಶಿವಮೊಗ್ಗ

ರಾಜ್ಯದ ಸರಕಾರಿ ಪ್ರಾಥಮಿಕ ಶಾಲಾ ಪಿಎಸ್‌ಟಿ ನೂರಾರು ಶಿಕ್ಷಕರು ತಮಗಾಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ ಪಿಎಸ್ ಟಿ ಶಿಕ್ಷಕರು ಶಿಕ್ಷಣ ಸಚಿವರಿಗೆ ಮನವ  ಸಲ್ಲಿಸಿದರು ಹೌದು ಶಿವಮೊಗ್ಗದ ಸರ್ಕೀಟ್ ಹೌಸ್‌ನಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ ಜಿಲ್ಲಾ ಸಚಿವ ಮಧು ಬಂಗಾರಪ್ಪ ರಿಗೆ ಮನವಿ ಅರ್ಪಿಸಿದರು.

ರಾಜ್ಯ ಸರಕಾರವು 2016-17 ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಮೂಲ ವೃಂದವನ್ನು ಪಿಎಸ್‌ಟಿ ಮತ್ತು ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕ ಜಿಪಿಟಿ ಎಂಬ ಎರಡು ವೃಂದಗಳನ್ನು ಸೃಷ್ಟಿಸಿ ಅನ್ಯಾಯವೆಸಗಿದೆ. ಇದರಿಂದ 2016 ರ ಪೂರ್ವ ದಲ್ಲಿ 1 ರಿಂದ 7 ನೇ ತರಗತಿಗಳಿಗೆ ನೇಮಕವಾದ ಶಿಕ್ಷಕರಿಗೆ ಸೇವಾ ಹಿರಿತನಕ್ಕೆ ಧಕ್ಕೆಯಾಗಿದೆ.

ವರ್ಗಾವಣೆಯಲ್ಲಿ ಸ್ಥಳ ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಿಂದ ಮುಖ್ಯ ಶಿಕ್ಷಕ ವೃಂದಕ್ಕೆ ಬಡ್ತಿ ಹೊಂದಲು ಸಾಧ್ಯವಾಗುತ್ತಿಲ್ಲ. ಪ್ರಾಥಮಿಕ ಶಾಲಾ ಶಿಕ್ಷಕ ವೃಂದದಿಂದ ಪ್ರೌಢಶಾಲಾ ಸಹ ಶಿಕ್ಷಕ ವೃಂದಕ್ಕೆ ಬಡ್ತಿ ಹೊಂದಲು ಆಗುತ್ತಿಲ್ಲ ಆದ್ದರಿಂದ ಪ್ರಾಥಮಿಕ ಶಾಲಾ ಶಿಕ್ಷಕರ 2017 ರ ವೃಂದ ಮತ್ತು ನೇಮಕಾತಿ ಸಿ ಅಂಡ್ ಆರ್ ನಿಯಮ ಗಳನ್ನು 2016 ಕ್ಕೂ ಮುನ್ನ 1 ರಿಂದ 7 ನೇ ತರಗತಿಗೆ ನೇಮಕವಾದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪೂರ್ವಾನ್ವಯ ಮಾಡುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಡಿ.ಬಿ ರುದ್ರಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ವೈ.ಎನ್.ಶ್ರೀಧರಗೌಡ ನೇತೃತ್ವ ದಲ್ಲಿ ನೂರಾರು ಶಿಕ್ಷಕರು ಮನವಿ ಸಲ್ಲಿಸಿದರು.

ಸುದ್ದಿ ಸಂತೆ ನ್ಯೂಸ್ ಶಿವಮೊಗ್ಗ…..

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.