ತುಮಕೂರು –
ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸದೇ ಹೋರಟಿದ್ದ KSRTC ಬಸ್ ನ್ನು ಅಡ್ಡಗಟ್ಟಿ ಶಿಕ್ಷಣ ಸಚಿವ ಸುರೇಶ್ ಕುಮಾರ ಕ್ಲಾಸ್ ತಗೆದುಕೊಂಡಿದ್ದಾರೆ. ಹೌದು ಇಂಥಹದೊಂದು ಘಟನೆ ತುಮಕೂರಿನಲ್ಲಿ ನಡೆದಿದೆ. ಬೆಳ್ಳಂ ಬೆಳಿಗ್ಗೆ ಶಾಲೆಗೆ ಸಾಕಷ್ಟು ಮಕ್ಕಳು ಶಾಲೆಗೆ ಹೊರಟಿದ್ದರು. ಈ ಒಂದು ಸಮಯದಲ್ಲಿ ಮಕ್ಕಳನ್ನು ನೋಡಿ ನೋಡಲಾರದಂತೆ ಹಾಗೇ ಬಸ್ ನ್ನು ಚಾಲಕ ನಿಲ್ಲಿಸಲಿಲ್ಲ ಇದನ್ನು ನೋಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ ಬಸ್ ನ್ನು ಅಡ್ಡಗಟ್ಟಿ ನಿಲ್ಲಿಸಿ ಸಖತ್ ಕ್ಲಾಸ್ ತಗೆದುಕೊಂಡಿದ್ದಾರೆ.
ಕೊರಟಗೆರೆ-ಬೆಂಗಳೂರು ರಸ್ತೆಯ ಐ.ಕೆ.ಕಾಲೋನಿ ಬಳಿ ಈ ಒಂದು ಘಟನೆ ನಡೆದಿದೆ. ಕಾರ್ಯಕ್ರಮ ನಿಮಿತ್ತ ಬೆಂಗಳೂರಿನಿಂದ ಮಧುಗಿರಿಗೆ ತೆರಳುತ್ತಿದ್ದ ಸಚಿವ ಸುರೇಶ್ ಕುಮಾರ್ ಇದನ್ನು ನೋಡಿ ಚಾಲಕನಿಗೆ ಕ್ಲಾಸ್ ತಗೆದುಕೊಂಡಿದ್ದಾರೆ.ಸಚಿವರ ಕ್ಲಾಸ್ ನಿಂದ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ಲಿಸದ ಚಾಲಕನಿಗೆ ಸಚಿವ ಸುರೇಶ್ ಕುಮಾರ್ ತರಾಟೆಗೆ ತಗೆದುಕೊಂಡರು.ಶಾಲಾ ವಿದ್ಯಾರ್ಥಿಗಳು ಕಾಯುತ್ತಿದ್ದರೂ ಬಸ್ ನಿಲ್ಲಿಸದೇ ತೆರಳಿದ ಚಾಲಕನಿಗೆ ಯಾಕೇ ನೀನು ಬಸ್ ನಿಲ್ಲಿಸಲಿಲ್ಲ ಎಂದರು. ಕಾರ್ಯಕ್ರಮಕ್ಕೆ ಹೊರಟಿದ್ದ ಸಚಿವರು ರಸ್ತೆ ಮಕ್ಕಳದಲ್ಲಿ ಬಸ್ ಗಾಗಿ ಕಾಯುತ್ತಿರುವುದನ್ನು ನೋಡಿ ತಮ್ಮಷ್ಟಕ್ಕೆ ತಾವು ಹೊಗದೆ ಮಕ್ಕಳು ನಿಂತುಕೊಂಡಿದ್ದನ್ನು ನೋಡಿ ಇದನ್ನ ಗಮನಿಸಿದ ಸುರೇಶ್ ಕುಮಾರ್,ಬಸ್ ಅಡ್ಡಗಟ್ಟಿ ಚಾಲನಿಗೆ ಕ್ಲಾಸ್ ತಗೆದುಕೊಂಡಿದ್ದಾರೆ.
ಹೆದ್ದಾರಿಯಲ್ಲಿ ಬಸ್ ನ್ನು ಅಡ್ಡಗಟ್ಟಿ ನಿಲ್ಲಿಸಿ ಚಾಲಕನನ್ನು ಕ್ಲಾಸ್ ತಗೆದುಕೊಂಡರು. ಅಲ್ಲದೇ ಬುದ್ದಿಮಾತು ಹೇಳಿ ಇನ್ಮುಂದೆ ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸುವಂತೆ ಚಾಲನಿಕೆ ಸೂಚನೆ ನೀಡಿ ಸ್ಥಳದಿಂದ ಶಿಕ್ಷಣ ಸಚಿವರು ಕಾರ್ಯಕ್ರಮಕ್ಕೆ ತೆರಳಿದರು. ಇನ್ನೂ ಸಚಿವರ ಈ ಒಂದು ಮಾನವೀಯತೆಯನ್ನು ನೋಡಿದ ಸಾರ್ವಜನಿಕರು ಬಸ್ ನಲ್ಲಿದ್ದ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದರು.