ಕಲಬುರಗಿ –
ಗೊಂದಲದ ನಡುವೆ ಸದ್ದಿಲ್ಲದೇ ಕೊನೆಗೂ ಶಿಕ್ಷಕರ ಭಡ್ತಿ ಪ್ರಕ್ರಿಯೇ ಆರಂಭವಾಗಿದೆ.ಹೌದು ಕಲಬುರಗಿ ಜಿಲ್ಲೆಯ ಶಿಕ್ಷಕರ ಬಡ್ತಿಗಾಗಿ ತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಕಟಿಸಲಾಗಿದ್ದು ಆಕ್ಷೇಪಣೆಗಳನ್ನು ಆಹ್ವಾನಿ ಸಲಾಗಿದೆ.
ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಗೀತ ಶಿಕ್ಷಕರುಗಳ ಪೈಕಿ ಪ್ರಚಲಿತ ವೃಂದ ಹಾಗೂ ನೇಮಕಾತಿ ನಿಯಮ ಗಳಲ್ಲಿ ನಿಗದಿಪಡಿಸಲಾದ ವಿದ್ಯಾರ್ಹತೆ ಹೊಂದಿದ ಶಿಕ್ಷಕರಿಗೆ ಪ್ರೌಢ ಶಾಲಾ ಸಂಗೀತ ಶಿಕ್ಷಕರು ಗ್ರೇಡ್-2 ಹುದ್ದೆಗೆ ಬಡ್ತಿ ನೀಡಲು ಮೂಲ ವೃಂದ, ಕಲ್ಯಾಣ ಕರ್ನಾಟಕ ಪ್ರದೇಶ ಸ್ಥಳೀಯ ವೃಂದ ಹಾಗೂ ಉಳಿದ ಮೂಲ ವೃಂದದ ಪ್ರತ್ಯೇಕವಾದ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ
www.ddpikalaburagi.in ವೆಬ್‍ಸೈಟ್‍ದಲ್ಲಿ ಪ್ರಕಟಿಸಲಾಗಿದೆಯಂತೆ.
ಸಂಬಂಧಪಟ್ಟ ಶಿಕ್ಷಕರು ಸದರಿ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಗಮನಿಸಿ ಈ ಜೇಷ್ಠತಾ ಪಟ್ಟಿಯಲ್ಲಿ ನಮೂದಿಸಿರುವ ವಿವರಗಳ ಕುರಿತು ಹಾಗೂ ಯಾವುದಾದರೂ ಶಿಕ್ಷಕರ ಹೆಸರು ಬಿಟ್ಟು ಹೋದಲ್ಲಿ ಸೇರಿಸಲು ಪೂರಕ ದಾಖಲೆಗಳೊಂದಿಗೆ 2021ರ ಜೂನ್ 19 ರೊಳಗಾಗಿ ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಆಕ್ಷೇಪಣೆ ಸಲ್ಲಿಸಬೇಕು.ನಿಗದಿಪಡಿಸಿದ ಅವಧಿಯ ನಂತರ ಬಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗು ವದಿಲ್ಲ ಎಂದು ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಆಡಳಿತ) ತಿಳಿಸಿದ್ದಾರೆ.