ಧಾರವಾಡ –
ಧಾರವಾಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಲ್ಯಾಣ ಅಧಿಕಾರಿಗಳ ಕಚೇರಿಯಲ್ಲಿ ಕುರ್ಚಿಗಾಗಿ ಗುದ್ದಾಟ ಜೋರಾಗಿದೆ.ಹೌದು ಸಧ್ಯ ಕರ್ತವ್ಯದಲ್ಲಿದ್ದ ಡಾ ಪಾಟೀಲ ಶಶಿ ಅವರ ನೇಮ ಕಾತಿ ಪ್ರಶ್ನೆ ಮಾಡಿ ಈ ಹಿಂದೆ ಇದ್ದ ಡಾ ಬಸನಗೌಡ ಕರಿಗೌಡರ ನ್ಯಾಯಾಲಯದ ಮೆಟ್ಟಿಲು ಹ್ತತಿದ್ದು ಇವರಂತೆ ಆದೇಶ ಬಂದಿದ್ದು ಈ ಒಂದು ಆದೇಶದ ಬೆನ್ನಲ್ಲೇ ಶುಕ್ರವಾರ ಸಂಜೆ ಡಾ ಬಸನಗೌಡ ಕರಿಗೌಡರ ಕಚೇರಿಗೆ ಆಗಮಿಸಿ ಅಧಿಕಾರವನ್ನು ವಹಿಸಿಕೊಂಡರು
ಇದರ ಬೆನ್ನಲ್ಲೇ ಎಂದಿನಂತೆ ಕಚೇರಿಗೆ ಆಗಮಿಸಿ ನಂತರ ಜಿಲ್ಲಾ ಪಂಚಾಯತ್ ನಲ್ಲಿ ಸಭೆ ಯಲ್ಲಿ ಪಾಲ್ಗೊಳ್ಳಲು ಡಾ ಶ್ರೀಮತಿ ಪಾಟೀಲ ಶಶಿ ಅವರು ತೆರಳಿದರು.ಸಭೆಯನ್ನು ಮುಗಿಸಿಕೊಂಡು ಸಂಜೆ ಕಚೇರಿಗೆ ಆಗಮಿಸಿದರು.ಇದರ ನಡುವೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ ಸುರೇಶ ಇಟ್ನಾಳ್ ಡಾ ಬಸನಗೌಡ ಕರಿಗೌಡರ ಅವರಿಗೆ ನೀವು ಸರ್ಕಾರದಿಂದ ಆದೇಶ ವೊಂದನ್ನು ತಗೆದುಕೊಂಡು ಬಂದು ನಂತರ ಕರ್ತವ್ಯ ಮಾಡಿಕೊಳ್ಳಿ ಹೀಗೆ ಮಾಡಿದ್ದು ತಪ್ಪು ನಿಮ್ಮ ಮೇಲೆ ಶಿಸ್ತು ಕ್ರಮವನ್ನು ಕೈಗೊಳ್ಳು ವುದಾಗಿ ಪತ್ರವನ್ನು ನೊಟೀಸ್ ನೀಡಿದ್ದಾರೆ
ಇನ್ನೂ ಇತ್ತ ಸಂಜೆ ಕಚೇರಿಗೆ ಆಗಮಿಸಿದ ಶ್ರೀಮತಿ ಡಾ ಪಾಟೀಲ ಶಶಿ ಅವರು DHO ಕುರ್ಚಿ ಮೇಲೆ ಕುಳಿತುಕೊಂಡಿದ್ದ ಕರಿಗೌಡರ ಅವರಿಗೆ ಜಿಲ್ಲಾ ಪಂಚಾಯತ ಸಿಇಒ ಅವರು ಹೇಳಿದ್ದಾರೆ ಕುರ್ಚಿ ಯನ್ನು ಬಿಟ್ಟು ಕೊಡಿ ಎಂದು ಕೇಳಿದರು ಇಲ್ಲ ನ್ಯಾಯಾಲಯದ ಆದೇಶ ಬಂದಿದ್ದು ನಾನು ಸಧ್ಯ ಅಧಿಕಾರವನ್ನು ವಹಿಸಿಕೊಂಡಿದ್ದು ಕುರ್ಚಿಯನ್ನು ಬಿಟ್ಟುಕೊಡೊದಿಲ್ಲ ಎಂದು ಹೇಳಿದರು.ಸರಿ ಎಂದುಕೊಂಡು ಸಹಿಯನ್ನು ಮಾಡಲು ಹಾಜ ರಾತಿ ಪುಸ್ತಕವನ್ನು ತಗೆದಾಗ ಡಾ ಪಾಟೀಲ ಶಶಿ ಅವರ ಹೆಸರಿನ ಮುಂದೆ ಡಾ ಬಸನಗೌಡ ಕರಿಗೌಡರ ಸಹಿ ಮಾಡಿದ್ದು ಇದನ್ನು ನೋಡಿದ ಡಾ ಶ್ರೀಮತಿ ಪಾಟೀಲ ಶಶಿ ಅವರು ಗರಂ ಆಗಿ ಅದರ ಒಂದು ಪೊಟೊ ವನ್ನು ತಗೆದುಕೊಂಡು ನಂತರ ಅಲ್ಲಿಂದ ಕೆಳಗಡೆ ತೆರಳಿ ಕೆಲವೊಂದಿಷ್ಟು ದಾಖಲೆ ಗಳಿಗೆ ಸಹಿಯನ್ನು ಮಾಡಿ ಸಿಬ್ಬಂದಿಗಳೊಂದಿಗೆ ಸಭೆಯನ್ನು ಮಾಡಿದರು.
ಇನ್ನೂ ಇವೆಲ್ಲದರ ನಡುವೆ ಜಿಲ್ಲಾ ಮಟ್ಟದ ಅಧಿಕಾರಿಗಳ ವರ್ಗಾವಣೆಯ ವಿಚಾರದಲ್ಲಿ ಹೀಗ್ಯಾಕೆ ಆಗುತ್ತಿದೆ ಎಂಬ ವಿಚಾರ ಕುರಿತಂತೆ ಜಿಲ್ಲೆಯ ಜನಪ್ರತಿನಿಧಿಗಳು ಇದನ್ನು ಗಂಭೀರ ವಾಗಿ ಪರಿಗಣಿಸಬೇಕು ಇಲ್ಲವಾದರೆ ಕುರ್ಚಿಗಾಗಿ ಗುದ್ದಾಟ ಜೋರಾಗುತ್ತಿದ್ದು ಇತ್ತ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಅಧಿಕಾರಿಗಳು ನಮಗೆ ಯಾರು ಡಿಹೆಚ್ಒ ಎಂಬ ಗೊಂದಲ ಉಂಟಾ ಗುತ್ತದೆ
ಚಕ್ರವರ್ತಿ ಸುದ್ದಿ ಸಂತೆ ನ್ಯೂಸ್ ಹಿರಿಯ ವರದಿಗಾರರು