ಹುಬ್ಬಳ್ಳಿ –
ಆಯುಕ್ತರ ಮುಂದೆ DTTP ಅಧಿಕಾರಿಗಳ, ಸಿಬ್ಬಂದಿಗಳ ಬಗ್ಗೆ ಚಾಡಿ ಚುಚ್ಚಿದ ಪಂಡಿತರು – ಚಾಡಿ ಚುಚ್ಚುವ ಪಂಡಿತರ ಬಗ್ಗೆ ಹುಷಾರಾಗಿರಿ ಆಯುಕ್ತರೇ……ಪಂಡಿತರ ಪುರಾಣ ಮುಂದುವರೆಯಲಿದೆ…..
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ DTTPಯಲ್ಲಿ ಏನು ನಡಿತಾ ಇದೆ ಏನೇನು ಆಗುತ್ತಿದೆ ಇದನ್ನು ಸಂಪೂರ್ಣವಾಗಿ ಕಂಟ್ರೋಲ್ ಮಾಡುವವರು ಯಾರು ಎಲ್ಲವೂ ಪಾಲಿಕೆಯ ಆವರಣದಲ್ಲಿ ಚರ್ಚೆಯಾಗುತ್ತಿದೆ.ಅದರಲ್ಲೂ ಇಲ್ಲಿನ ಇಬ್ಬರು ಪಂಡಿತರು ಈ ಒಂದು DTTP ಯಲ್ಲಿ ತಾವು ನಡಿದಿದ್ದೆ ದಾರಿ ತಾವು ಮಾಡಿದ್ದೇ ಪೈನಲ್ ತಾವು ಆಡಿದ್ದೇ ಆಟ ಎಂದುಕೊಂಡು ಬಾಸ್ ಗಳಾಗಿ ಮೆರೆಯುತ್ತಿದ್ದಾರೆ.
ಇಲ್ಲಿಗೆ ಯಾರೇ ಹೊಸದಾಗಿ ಬಂದರೆ ಸಾಕು ಬಾಸ್ ಮೂಲಕ ಹೊಸದೊಂದು ತಂತ್ರವನ್ನು ಎಣೆಯುತ್ತಾರೆ ಹೀಗಿರುವಾಗ ಆಗಾಗ್ಗೆ ಆಯುಕ್ತರ ಮುಂದೆ ಹೋಗುವ ಪಂಡಿತರು DTTPಯಲ್ಲಿನ ಕೆಲವರ ಬಗ್ಗೆ ಅದರಲ್ಲೂ ಇತ್ತೀಚಿಗಷ್ಟೇ ಬಂದ ವರ ಬಗ್ಗೆ ಆಯುಕ್ತರಿಗೆ ಅವರು ಹಾಗೇ ಇವರು ಹೀಗೆ ಎನ್ನುತ್ತಾ ಕಿವಿಯಲ್ಲಿ ಏನೇನು ಹೇಳುತ್ತಿ ದ್ದಾರೆ
ಹೀಗೆ ಹೇಳುತ್ತಾ ಹೇಳುತ್ತಾ ತಮ್ಮ ಬೆಳೆಯನ್ನು ಬೆಯಿಸಿಕೊಳ್ಳುವ ಇವರ ಕುತಂತ್ರಿ ಬುದ್ದಿಯ ದುರ್ವಾಸನೆ ಪಾಲಿಕೆಯ ತುಂಬೆಲ್ಲಾ ಗಬ್ಬೇದ್ದು ನಾರುತ್ತಿದೆ.ಕೆಲವರು ಅವರಿವರ ಬಗ್ಗೆ ಆಯುಕ್ತರ ಮುಂದೆ ಚಾಡಿ ಚುಚ್ಚಿ ತಮ್ಮ ಬೆಳೆಯನ್ನು ಬೆಯಿಸಿ ಕೊಳ್ಳಲು ಏನೇನು ಹೇಳಿದರೆ ಇನ್ನೂ ಪಂಡಿತರಿ ಬ್ಬರು ಕೂಡಾ ತಮ್ಮ ಬಾಸ್ ನಂತೆಯೇ ಚಾಡಿ ಚುಚ್ಚುವುದನ್ನು ಆರಂಭ ಮಾಡಿಕೊಂಡಿದ್ದಾರೆ.
ಸರಳ ಸಜ್ಜನಿಕೆಯ ಅಧಿಕಾರಿಯಾಗಿರುವ ಪಾಲಿಕೆಯ ಆಯುಕ್ತರಿಗೆ ಏನೇನು ಹೇಳಿ ಅವರಿವರ ಬಗ್ಗೆ ಕೆಟ್ಟ ಕೆಟ್ಟದಾಗಿ ಹೇಳುತ್ತಾ ತಮ್ಮ ಬೆಳೆಯನ್ನು ಬೆಯಿಸಿಕೊಳ್ಳುತ್ತಿರುವ ಪಂಡಿತರ ಮಾತನ್ನು ಆಯುಕ್ತರು ನಂಬುತ್ತಾರೆ ನಂಬುವ ಮುನ್ನ ಈ ಒಂದು ಬಗ್ಗೆ ಆಯುಕ್ತರೇ ಎಚ್ಚರವಾ ಗಿರಿ
ಇನ್ನೂ DTTPಯಲ್ಲಿನ ಸಿಬ್ಬಂದಿಗಳೇ ಅಧಿಕಾರಿ ಗಳೇ ನೀವು ಕೂಡಾ ಹುಷಾರಾಗಿರಿ ಪಂಡಿತರು ಎಲ್ಲೇಲ್ಲಿ ಕುಳಿತುಕೊಂಡು ಎಲ್ಲೇಲ್ಲಿ ಇದ್ದುಕೊಂಡು ತಾವು ಬಚಾವ್ ಆಗಲು ಏನೇನು ಮಾಡ್ತಾರೆ ಎಂಬೊದನ್ನು ಸೂಕ್ಷ್ಮವಾಗಿ ಗಮನಿಸಿ ಇನ್ನೂ ಇತ್ತ ಇದನ್ನು ಪಾಲಿಕೆಯ ಸದಸ್ಯರು ಮೇಯರ್ ಆಯುಕ್ತರು ಕೂಡಾ ಗಂಭೀರವಾಗಿ ಪರಿಗಣಿಸಿ
ಪಂಡಿತರ ಇಂತಹ ಕಾರ್ಯಗಳಿಗೆ ಕಡಿವಾಣ ಹಾಕಬೇಕಿದೆ ಇಲ್ಲವಾದರೆ ಪ್ರತಿಷ್ಠಿತ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಾನ ಮರ್ಯಾದೆ ಬೀದಿ ಬೀದಿಗಳಲ್ಲಿ ಹರಾಜಾಗಲಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……