ಸದ್ದಿಲ್ಲದೇ ನಡೆಯುತ್ತಿತ್ತು ಪುನೀತ್ ರಾಜಕುಮಾರನ ಸಮಾಜ ಸೇವೆ – ಒಂದೇ ಎರಡೇ ಲೆಕ್ಕಕ್ಕೆ ಇಲ್ಲದಷ್ಟು ಇವರ ಸಮಾಜ ಸೇವೆ…..

Suddi Sante Desk

ಬೆಂಗಳೂರು –

ಕೇವಲ ತೆರೆಯ ಮೇಲೆ ನಾಯಕ ನಟವಾಗಿ ಮಿಂಚೊದು ಅಭಿನಯ ಮಾಡೊದು ಅಷ್ಟೇ ಅಲ್ಲದೇ ಸಾಮಾಜಿಕ ಜವಾಬ್ದಾರಿ ಏನು ಎಂಬೊದನ್ನು ತೋರಿಸಿಕೊಟ್ಟವರು ಪುನೀತ್ ರಾಜ್ ಕುಮಾರ್ ಹೌದು.ತೆರೆಯ ಮೇಲೆ ನಾಯಕನಾಗಿ ಮಿಂಚಬಹುದು.ಆದರೆ ಅದೇ ಆದರ್ಶ ವನ್ನು ನಿಜ ಜೀವನದಲ್ಲಿ ಅಳವಡಿಸಿಕೊಳ್ಳುವುದು ಸುಲಭದ ಮಾತಲ್ಲ.ಆದರೆ ನಮ್ಮನ್ನು ಅಗಲಿದ ನಟ ಪುನೀತ್‌ ರಾಜ್‌ಕುಮಾರ್‌ ನಿಜಜೀವನದಲ್ಲಿಯೂ ನಾಯಕನೇ ಆಗಿದ್ದರು.

ಹೆಚ್ಚು ಪ್ರಚಾರ ಬೇಡವೇ,ಮೌನವಾಗಿ ಇವರು ಮಾಡುತ್ತಿದ್ದ ಸಮಾಜ ಸೇವೆಗೆ ಲೆಕ್ಕವೇ ಇಲ್ಲದಷ್ಟು.ಇವೆಲ್ಲಾ ಈಗ ಬೆಳಕಿಗೆ ಬಂದಿವೆ.ಸದ್ಯ 26 ಅನಾಥಾಶ್ರಮ 45 ಉಚಿತ ಶಾಲೆ 16 ವೃದ್ಧಾಶ್ರಮ 19 ಗೋಶಾಲೆ ಇಷ್ಟೆಲ್ಲಾ ತಮ್ಮ ಖರ್ಚಿನಲ್ಲಿ ನಡಿಸಿಕೊಂಡು ಸುಮಾರು ವರ್ಷಗಳಿಂದ ಬರುತ್ತಿದ್ದರು.

ಇಷ್ಟೇ ಅಲ್ಲದೇ ಸಿನಿಮಾದಿಂದ ಪಡೆದ ಸಂಭಾವನೆಯ ಒಂದು ಭಾಗವನ್ನು ವೃದ್ಧಾಶ್ರಮಗಳಿಗೆ ವಿನಿಯೋಗಿಸಿದ್ದರು ಎನ್ನಲಾಗಿದೆ.ಕೆಲವು ಚಿತ್ರಗಳಿಗೆ ಹಿನ್ನೆಲೆ ಗಾಯಕರಾಗಿ ಇವರು ಹಾಡಿದ್ದು ಅದರಿಂದ ಬಂದಿರುವ ಸಂಭಾವನೆ ಯನ್ನು ಕೂಡ ಸಮಾಜ ಸೇವೆಗೆ ವಿನಿಯೋಗಿಸುತ್ತಿದ್ದರು ಇಷ್ಟಕ್ಕೇ ಇವರ ಸೇವೆ ನಿಂತಿರಲಿಲ್ಲ.

ಬದಲಿಗೆ ಸುಮಾರು 1800 ಮಕ್ಕಳ ಸಂಪೂರ್ಣ ಶಿಕ್ಷಣ ವನ್ನು ಇವರು ವಹಿಸಿಕೊಂಡಿದ್ದರು.ಮೈಸೂರಿನಲ್ಲಿರುವ ಶಕ್ತಿ ಧಾಮ ಹೆಸರಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ವ್ಯವಸ್ಥೆ ನೋಡಿ ಕೊಳ್ಳುತ್ತಿದುದು ಇದೇ ನಟ.ಈ ಮೂಲಕ ಯಾವ ನಟರೂ ಮಾಡದ ಅದ್ಭುತ ಎನಿಸುವ ಸಮಾಜ ಕಾರ್ಯದಲ್ಲಿ ತೊಡ ಗಿಸಿಕೊಂಡಿದ್ದರು ಪುನೀತ್‌.

ಇವರು ನಟಿಸಿದ್ದ ‘ರಾಜಕುಮಾರ’ ಚಿತ್ರದ ಒಟ್ಟಾರೆ ಸಂದೇಶ ಹೆತ್ತವರನ್ನು ಪ್ರೀತಿಸಬೇಕು.ವೃದ್ಧಾಶ್ರಮಗಳಗೆ ಕಳಿಸಬಾ ರದು ಎಂದಿತ್ತು.ಸೂಪರ್‌ಹಿಟ್‌ ಆಗಿದ್ದ ಈ ಚಿತ್ರದಂತೆಯೇ ತಮ್ಮ ಬದುಕಿನುದ್ದಕ್ಕೂ ನಡೆದುಕೊಂಡವರು ಈ ರಾಜ ಕುಮಾರ.ಆದರೆ ಈ ಬಗ್ಗೆ ಪ್ರಚಾರ ಬಯಸದೇ ಎಲ್ಲಿಯೂ ಬಹಿರಂಗವಾಗಿ ಸೇವೆಯ ಕುರಿತು ಹೇಳಿಕೊಳ್ಳದ್ದು ಇವರ ವಿಶೇಷತೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.