ತುಮಕೂರು –
ಕರ್ನಾಟಕದ ಪ್ರಶ್ನೆಪತ್ರಿಕೆ ಡೀಲ್ ಕಿಂಗ್‌ಪಿನ್ ಎನಿಸಿ ಕೊಂಡಿದ್ದ ಆರೋಪಿಯೊಬ್ಬ ಕೋವಿಡ್ ಸೋಂಕಿ ನಿಂದಾಗಿ ಕೊನೆಯುಸಿರೆಳೆದಿದ್ದಾನೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆ ಕಾಗ್ಗೆರೆ ಮೂಲದ ಶಿವಕುಮಾರ್(65) ಸಾವನ್ನಪ್ಪಿದ ಕಿಂಗ್‌ಪಿನ್ ಆಗಿದ್ದಾರೆ.ಆತ SSLC, PUC ಪೊಲೀ ಸ್ ಎಕ್ಸಾಂಗಳ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುತ್ತಿದ್ದ ಎನ್ನುವ ಆರೋಪ ಇವರ ಮೇಲಿತ್ತು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾ ಗಿದ್ದ ಆತ ವಿಚಾರಣೆಯನ್ನು ಎದುರಿಸುತ್ತಿದ್ದರು

ಶಿವಕುಮಾರ್ ಗೆ ಕಳೆದ ಕೆಲ ದಿನಗಳ ಹಿಂದೆ ಕೊರೊನಾ ದೃಢವಾಗಿತ್ತು.ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ತೀವ್ರ ಉಸಿರಾಟದ ಸಮಸ್ಯೆಯಿಂದ ಆತ ಇಂದು ಸಾವನ್ನಪ್ಪಿದ್ದಾನೆ