ಬೆಂಗಳೂರು –
ಜಮೀನು ಅತಿಕ್ರಮಣ ಪ್ರವೇಶ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ದೂರಿನ ಸಂಬಂಧ ತನಿಖೆ ನಡೆಸಲು 10 ಲಕ್ಷ ರೂ.ಲಂಚ ಕೇಳಿದ್ದ ಚಿಕ್ಕಜಾಲ ಠಾಣೆ ಇನ್ಸ್ಪೆಕ್ಟರ್ ರಾಘವೇಂದ್ರ ಭ್ರಷ್ಟಾಚಾರ ನಿಗ್ರಹ ದಳಕ್ಕೆ ನಿನ್ನೆ ಸಿಕ್ಕಿಬಿದ್ದಿದ್ದರು.ನಗರದ ಚಿಕ್ಕಜಾಲ ಠಾಣೆ ವ್ಯಾಪ್ತಿಯ ನಿವಾಸಿಯೊಬ್ಬರು ತಮ್ಮ ಜಮೀನಿಗೆ ಅಕ್ರಮವಾಗಿ ಪ್ರವೇಶ ಮಾಡಿದ ಕೆಲವರು ಅಲ್ಲಿ ಅಳವಡಿಸಿದ್ದ ಬೋರ್ಡ್ ಗಳನ್ನು ಕಿತ್ತು ಹಾಕಿದ್ದರು ಎಂದು ಅವರು ದೂರು ನೀಡಿದ್ದರು.
ಈ ಸಂಬಂಧ ಇನ್ಸ್‍ಪೆಕ್ಟರ್ 10 ಲಕ್ಷ ರೂ. ಲಂಚದ ಬೇಡಿಕೆ ಮುಂದಿಟ್ಟು 8 ಲಕ್ಷ ರೂ. ಪಡೆದು ನಂತರ ಉಳಿದ 2 ಲಕ್ಷಕ್ಕೆ ಒತ್ತಾಯಿಸಿದ್ದರು.ಈ ಬಗ್ಗೆ ಜಮೀನು ಮಾಲೀಕರು ಎಸಿಬಿಗೆ ದೂರು ನೀಡಿದ್ದರು ಇನ್ಸ್ಪೆಕ್ಟರ್ ರಾಘವೇಂದ್ರ ಅವರು ಖಾಸಗಿ ವ್ಯಕ್ತಿ ಯಾದ ರಾಘವೇಂದ್ರ ಎಂಬುವವರಿಂದ 2 ಲಕ್ಷ ಲಂಚದ ಹಣ ಪಡೆಯುವಾಗ ಇಂದು ಎಸಿಬಿ ಅಧಿಕಾರಿಗಳು ನಡೆಸಿದ ದಾಳಿ ವೇಳೆ ಸಿಕ್ಕಿಬಿದ್ದಿ ದ್ದಾರೆ.ಇನ್ಸ್‍ಪೆಕ್ಟರ್ ರಾಘವೇಂದ್ರ ಅವರ ಜತೆ ಖಾಸಗಿ ವ್ಯಕ್ತಿಯನ್ನು ಕೂಡ ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಇನ್ಸ್ಪೆಕ್ಟರ್ ಒಬ್ಬರು ಎಸಿಬಿ ಬಲೆಗೆ ಬಿದ್ದಿರುವುದು ಕುತೂಹಲ ಕೆರಳಿಸಿದ್ದು ಇನ್ನೂ ಈ ಈಗಾಗಲೇ ಇನ್ಸ್ಪಕ್ಟರ್ ಅವರನ್ನು ವಶಕ್ಕೆ ತಗೆದುಕೊಂಡಿರುವ ಎಸಿಬಿ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರು ಮಾಡಿ ಜೈಲಿಗೆ ಕಳಿಸಿದ್ದಾರೆ.