ಕೋಲಾರ –
ಅಕ್ರಮವಾಗಿ ಪಡಿತರ ಅಕ್ಕಿಯನ್ನು ದಾಸ್ತಾನು ಮಾಡಿದ ಹಿನ್ನಲೆಯಲ್ಲಿ ಕೋಲಾರದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾ ರಿಗಳು ದಾಳಿ ಮಾಡಿದ್ದಾರೆ.ಹೌದು ಬೆಂಗಳೂರಿನಿಂದ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಕಳ್ಳ ಸಂತೆಯಲ್ಲಿ ಸಾಗಾಟ ಮಾಡುತ್ತಿದ್ದ ಮಾಹಿತಿಯನ್ನು ಪಡೆದ ಅಧಿ ಕಾರಿಗಳು ಬೆಂಗಳೂರಿನಿಂದ ಸೀನಿಮಿಯ ರೀತಿಯ ಲ್ಲಿ ದಾಳಿ ಮಾಡಿದ್ದಾರೆ.

ಪಿ.ಆರ್.ಎಸ್ ರೈಸ್ ಮಿಲ್ ಮೇಲೆ ಈ ಒಂದು ದಾಳಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಮಾಡಿದ್ದಾರೆ. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ನೇರಳೆಕೆರೆ ಬಳಿ ಈ ಒಂದು ರೈಸ್ ಮಿಲ್ ಇದೆ. ಆಹಾರ ಇಲಾಖೆ ಜಂಟಿ ನಿರ್ದೇಶಕ ಪರಮಶಿವಯ್ಯ ನೇತೃತ್ವದಲ್ಲಿ ಈ ಒಂದು ದಾಳಿ ನಡೆದಿದೆ.

ಪಡಿತರ ಅಕ್ಕಿ ಸಾಗಾಟ ಹಾಗೂ ದಾಸ್ತಾನು ಮಾಡಿ ರುವ ದೂರಿನ ಮೇಲೆ ಈ ಒಂದು ದಾಳಿಯನ್ನು ಮಾಡಲಾಗಿದೆ. ಬಂಗಾರಪೇಟೆ ರವಿ ಎಂಬುವರಿಗೆ ಈ ಒಂದು ರೈಸ್ ಮಿಲ್ ಸೇರಿದೆ.ಆಹಾರ ಇಲಾಖೆ, ಕಂದಾಯ ಇಲಾಖೆ ಹಾಗೂ ಪೊಲೀಸ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂವನ್ನು ಹೂಡಿ ದ್ದಾರೆ.

ಹಲವು ವರ್ಷಗಳಿಂದ ಬಂಗಾರಪೇಟೆಯಲ್ಲಿ ನಡೆ ಯುತ್ತಿರುವ ರೈಸ್ ಮಾಫಿಯಾವನ್ನು ಸಧ್ಯ ದಾಳಿ ಯಿಂದ ಪತ್ತೆ ಮಾಡಿದ್ದು ಸ್ಥಳದಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದು ಪರಿಶೀಲನೆಯನ್ನು ಮಾಡ್ತಾ ಇದ್ದಾರೆ.

