ಜೂನ್ 10 ರಂದು ಧಾರವಾಡದಲ್ಲಿ ಕಳಸಾ ಬಂಡೂರಿಗಾಗಿ ಹೋರಾಟ – ಹೋರಾಟವನ್ನು ಬೆಂಬಲಿಸುವಂತೆ ಕರ್ನಾಟಕ ರಾಜ್ಯ ಪಕ್ಷಾತೀತ ರೈತ ಹೋರಾಟ ಸಮಿತಿಯ ರಾಜಶೇಖರ ಮೆಣಸಿನಕಾಯಿ ಕರೆ…..

Suddi Sante Desk
ಜೂನ್ 10 ರಂದು ಧಾರವಾಡದಲ್ಲಿ ಕಳಸಾ ಬಂಡೂರಿಗಾಗಿ ಹೋರಾಟ – ಹೋರಾಟವನ್ನು ಬೆಂಬಲಿಸುವಂತೆ ಕರ್ನಾಟಕ ರಾಜ್ಯ ಪಕ್ಷಾತೀತ ರೈತ ಹೋರಾಟ ಸಮಿತಿಯ ರಾಜಶೇಖರ ಮೆಣಸಿನಕಾಯಿ ಕರೆ…..

ಹುಬ್ಬಳ್ಳಿ

ಧಾರವಾಡದಲ್ಲಿ ಜೂನ್ 10 ರಂದು ಕಳಸಾ ಬಂಡೂರಿಗಾಗಿ ಹೋರಾಟ ಮಾಡಲಾಗುತ್ತಿದ್ದು ಈ ಒಂದು ಪ್ರತಿಭಟನೆ ಯನ್ನು ಬೆಂಬಲಿಸುವಂತೆ ಕರ್ನಾಟಕ ರಾಜ್ಯ ಪಕ್ಷಾತೀತ ರೈತ ಹೋರಾಟ ಸಮಿತಿ ಕರೆ ನೀಡಿದೆ ಹೌದು ಕಳಸಾ ಬಂಡೂರಿ‌ ಯೋಜನೆಗಾಗಿ ಆಗ್ರಹಿಸಿ ಜೂನ್ ೧೦ ರಂದು ಧಾರವಾಡದಲ್ಲಿ ರೈತರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲು ಕರ್ನಾಟಕ ರಾಜ್ಯ ಪಕ್ಷಾತೀತ ರೈತ ಹೋರಾಟ ಸಮಿತಿ ಆಶ್ರಯದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ನಗರದ ವಿಮಲೇಶ್ವರ ನಗರದಲ್ಲಿರುವ ಮಹಾಮನೆಯ ಆವರಣದಲ್ಲಿ ಸಂಘಟನೆಯ ಅಧ್ಯಕ್ಷ ಬಿ. ಎಂ. ಹನಸಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಪ್ರಕಟಿಸಲಾಯಿತು.ಈ ಸಂದರ್ಭದಲ್ಲಿ ಮಹಾ ವೇದಿಕೆಯ ಅಧ್ಯಕ್ಷ ಶಂಕರ್ ಅಂಬಲಿ ಮಾತನಾಡಿ, ಕಳಸಾ ಬಂಡೂರಿ ಹಾಗೂ ಮಹದಾಯಿ ನದಿ ಜೋಡಣೆ ಹೊರಾಟವು ಕಳೆದ ನಾಲ್ಕು ದಶಕಗಳಿಂದ ನಡೆಯು ತ್ತಿದ್ದು, ಆಳುವ ಸರಕಾರಗಳ ನಿರ್ಲಕ್ಷ್ಯದಿಂದ ತಟಸ್ಥ ಗೊಂಡಿರುತ್ತವೆ.

ಆದ ಕಾರಣ ಮತ್ತೆ ಈ ಹೋರಾಟಕ್ಕೆ ಜೀವ ತುಂಬುವ ನಿಟ್ಟಿನಲ್ಲಿ ಜೂನ್ 10 ರಂದು ಬೆಳಿಗ್ಗೆ 11 ಘಂಟೆಗೆ ಧಾರವಾಡ ನಗರದ ಕಲಾಭವನದಿಂದ ಕಳಸಾ ಬಂಡೂರಿ ಯೋಜನೆಗಾಗಿ ಒತ್ತಾಯಿಸಿ ರೈತ ಹಾಗೂ ಇನ್ನಿತರ ಪ್ರಗತಿಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ರೈತರ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.

ಅಂದು ಪಾದಯಾತ್ರೆಯ ಮೂಲಕ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಗುವುದು.ಆದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ರೈತ ಪ್ರತಿನಿಧಿಗಳು ಹೋರಾಟಕ್ಕೆ ಬೆಂಬಲಿಸಿ ಭಾಗವಹಿಸಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನ ಹೊಂದಿದ ಹಿರಿಯ ರೈತ ಮುಖಂಡ ದಿ. ಹೆಚ್. ಕೆ.ನಾಗರಹಳ್ಳಿ ಅವರ ಭಾವಚಿತ್ರಕ್ಕೆ ಹಾರ ಹಾಕಿ ಪೂಜೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಭೆಯಲ್ಲಿ ಮಹದಾಯಿಗಾಗಿ ಮಹಾ ವೇದಿಕೆಯ ಅಧ್ಯಕ್ಷ ಶಂಕರ ಅಂಬಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ವಿ. ವಿ. ಮಾಗನೂರ, ಶೇಖಣ್ಣ ಬೆಳಗೆರೆ, ನಿಂಗಪ್ಪ ದೇವಟಗಿ, ರಾಜಶೇಖರ್ ಮೆಣಸಿನಕಾಯಿ, ರಘುನಾಥ್ ನಡುವಿನಮನಿ, ಬಾಬಾಜಾನ್ ಮುಧೋಳ್ , ಪ್ರವೀಣ ಯರಗಟ್ಟಿ, ಮುತ್ತಣ್ಣ ಬಾಡಿನ, ಸುಭಾಷ್ ಇಂಗಳಗಿ, ದೇವೇಂದ್ರ ಗುಡಿಸಾಗರ್,

ಬಸಪ್ಪ ಹೋಳಿ, ಶಿವಾನಂದ ಕಿರೇ ಸೂರ, ಶ್ರೀಧರ್ ಕಣವಿ, ಶಿವಾನಂದ ಕೊಂಡಿಕೊಪ್ಪ, ಚೆನ್ನಪ್ಪ ಮೇಟಿ, ಹೇಮರೆಡ್ಡಿ ಇಮಾಮತಿ, ಉಮೇಶ್ ಕೆಂಭಾವಿ, ಸೇರಿದಂತೆ ಮುಂತಾದವರು ಆಗಮಿಸಿದ್ದರು, ಮುಖಂಡ ರಾಜಶೇಖರ್ ಮೆಣಸಿನಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿ‌ ಸ್ವಾಗತಿಸಿದರು. ಫಕೀರೇಶ ಬಕ್ಕಸದ ವಂದಿಸಿದರು.

ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.