ಹುಬ್ಬಳ್ಳಿ –
ಮತ್ತೊಂದು ಮಹಾನ್ ಕಾರ್ಯಕ್ಕೆ ಕೈ ಹಾಕಿದ ರಜತ್ ಉಳ್ಳಾಗಡ್ಡಿಮಠ – “ಹಸಿರೇ ನಮ್ಮೆಲ್ಲರ ಉಸಿರು” ಎನ್ನುತ್ತಾ ಕಡಿಮೆ ಜಾಗದಲ್ಲಿ ಜಪಾನ್ ಮಾದರಿಯ ಕಾಡು ನಿರ್ಮಾಣ ಅನುಷ್ಠಾನ ಮಾಡಿದ ಯುವ ಮುಖಂಡ ಹೌದು
ಸದಾ ಒಂದಿಲ್ಲೊಂದು ಸಾಮಾಜಿಕ ಕಾರ್ಯಗಳ ಮೂಲಕ ತಮ್ಮನ್ನು ತಾವು ತೋಡಗಿಸಿಕೊಂಡಿ ರುವ ಕಾಂಗ್ರೇಸ್ ಪಕ್ಷದ ಯುವ ಮುಖಂಡ ರಜತ್ ಉಳ್ಳಾಗಡ್ಡಿಮಠ ಈಗ ಮತ್ತೊಂದು ಮಹಾನ್ ಕಾರ್ಯಕ್ಕೆ ಕೈ ಹಾಕಿದ್ದಾರೆ.ಹೌದು ದಿನದಿಂದ ದಿನಕ್ಕೆ ಹುಬ್ಳಳ್ಳಿ ಬೆಳೆಯುತ್ತಿದೆ ಅಭಿವೃದ್ದಿಯ ನೆಪದಲ್ಲಿ ನಗರದಲ್ಲಿ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಗಿಡ ಮರಗಳನ್ನು ಮಾರಣ ಹೋಮ ಮಾಡಲಾಗಿದೆ.
ಹೀಗಾಗಿ ರಜತ್ ಉಳ್ಳಾಗಡ್ಡಿಮಠ ನಗರದ ಸೌಂದರ್ಯಕರಣಗೊಳಿಸಲು ಮುಂದಾಗಿದ್ದಾರೆ .ವಿಶೇಷವಾಗಿ ಕಡಿಮೆ ಜಾಗದಲ್ಲಿ ಹುಬ್ಬಳ್ಳಿಯಲ್ಲಿ ಹೊಸದೊಂದು ಕಾರ್ಯವನ್ನು ರಜತ್ ಉಳ್ಳಾಗಡ್ಡಿಮಠ ಮಾಡುತ್ತಿದ್ದಾರೆ.ಅತ್ಯಂತ ಕಡಿಮೆ ಜಾಗದಲ್ಲಿ ಅರಣ್ಯವನ್ನು ಬೆಳೆಸುವ ಜಪಾನ್ ಮಾದರಿಯ ಮಿಯಾವಾಕಿ ಕಾಡು ನಿರ್ಮಾಣಕ್ಕೆ ಕೈ ಹಾಕಿದ್ದಾರೆ.
ರಜತ್ ಉಳ್ಳಾಗಡ್ಡಿಮಠ ಫೌಂಡೇಶನ್ ಹಾಗೂ ದುರ್ಗಾ ಡೆವಲಪರ್ಸ್ ಮತ್ತು ಪ್ರಮೋಟರ್ಸ್ ಸಂಸ್ಥೆ ಈ ಒಂದು ವಿಶೇಷವಾದ ಕಾರ್ಯಕ್ಕೆ ಕೈ ಜೋಡಿಸಿದ್ದು ಹುಬ್ಬಳ್ಳಿಯಲ್ಲಿ ಈ ಕಾಡು ಬೆಳೆಸುವ ಕಾರ್ಯ ಆರಂಭವಾಗಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿಯ ಹಸಿರೀಕರಣದ ರಜತ್ ಅವರು ಕನಸಿನ ಯೋಜನೆಗೆ ನಿಮ್ಮೆಲ್ಲರ ಸಹಕಾರ, ಬೆಂಬಲ ಹಾಗೂ ಹಾರೈಕೆ ಇರಲಿ ಎಂದು ಯುವ ಮುಖಂಡ ರಜತ್ ಉಳ್ಳಾಗಡ್ಡಿ ಮಠ ಅವರು ಕೋರಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..