ಮಾರ್ಚ್ 30 ರಂದು ರಂಗ ಭೂಪತಿ ಪ್ರಶಸ್ತಿ ಪ್ರಧಾನ ಸಮಾರಂಭ – ಶ್ರೀಪಾದ ಭಟ್ ಅವರಿಗೆ ಪ್ರಶಸ್ತಿ ಗೌರವ ಸರ್ವರಿಗೂ ಆಮಂತ್ರಣ ನೀಡಿದ್ದಾರೆ ರಾಜಕುಮಾರ ಮಡಿವಾಳರ…..

Suddi Sante Desk
ಮಾರ್ಚ್ 30 ರಂದು ರಂಗ ಭೂಪತಿ ಪ್ರಶಸ್ತಿ ಪ್ರಧಾನ ಸಮಾರಂಭ – ಶ್ರೀಪಾದ ಭಟ್ ಅವರಿಗೆ ಪ್ರಶಸ್ತಿ ಗೌರವ ಸರ್ವರಿಗೂ ಆಮಂತ್ರಣ ನೀಡಿದ್ದಾರೆ ರಾಜಕುಮಾರ ಮಡಿವಾಳರ…..

ಧಾರವಾಡ

ಮಾರ್ಚ್ 30 ರಂದು ರಂಗ ಭೂಪತಿ ಪ್ರಶಸ್ತಿ ಪ್ರಧಾನ ಸಮಾರಂಭ – ಶ್ರೀಪಾದ ಭಟ್ ಅವರಿಗೆ ಪ್ರಶಸ್ತಿ ಗೌರವ ಸರ್ವರಿಗೂ ಆಮಂತ್ರಣ ನೀಡಿದ್ದಾರೆ ರಾಜಕುಮಾರ ಮಡಿವಾಳರ ಹೌದು

ಹಲವು ವರ್ಷಗಳ ಕಾಲ ಪತ್ರಿಕಾ ರಂಗದಲ್ಲಿ ಅನುಪಮ ಸೇವೆ ಸಲ್ಲಿಸುವುದರ ಜತೆ ಕವಿ, ನಾಟಕಕಾರ,ನಟ,ನಿರ್ದೇಶಕರಾಗಿ,ಆಕಾಶವಾಣಿ, ರಂಗಭೂಮಿ, ಸಿನಿಮಾ, ಜನಸಮುದಾಯ ಅತಿ ಇಷ್ಟದ ಮಾಧ್ಯಮಗಳ ಮೂಲಕ ಸಮಾಜಕ್ಕೆ ಸಾತ್ವಿಕ ಮನರಂಜನೆ ನೀಡಿ,ಮೂರು ದಶಕಗ ಳಿಗೂ ಹೆಚ್ಚು ಕಾಲ ಒಂದಿಡಿ ತಲೆಮಾರನ್ನ ತಮ್ಮ ಬರಹದ ಮೂಲಕ ಪ್ರಭಾವಿಸಿದವರು ಗೋಪಾಲ ವಾಜಪೇಯಿ ಅವರು.

ಉತ್ತರ ಕರ್ನಾಟಕದ ಗಟ್ಟಿ ಆಡುಭಾಷೆಯಲ್ಲಿ ಸಾಹಿತ್ಯ ಕೃಷಿ ಮಾಡಿದ ಅವರು, ರಂಗಭೂಮಿಗೆ ನೀಡಿದ ಕೊಡುಗೆ ಅಪಾರ. ಅದೇನೋ ಕಾರಣಕ್ಕೆ ಅವರು ಅಜ್ಞಾತರಾಗಿಯೇ ಉಳಿದರು. ಮುಖ್ಯ ವಾಹಿನಿಗೆ ಬರಲಿಲ್ಲ. ಅವರಿಗೆ ದಕ್ಕಬೇಕಾದ ಗೌರವವೂ ದೊರೆಯಲಿಲ್ಲ.

ಅಂಥ ಅಪರೂಪದ ಪತ್ರಕರ್ತ, ನಾಟಕಕಾರ, ನಟ, ನಿರ್ದೇಶಕರನ್ನು ನೆನಪಿಸಿಕೊಳ್ಳುವ, ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶ ದಿಂದ ಧಾರವಾಡದ ಗೋವಾ ರಂಗ-ಸಂಗ ತಂಡ, ಆಟ-ಮಾಟ ಧಾರವಾಡ ಮತ್ತು ಬಹುರೂಪಿ ಬೆಂಗಳೂರು ಸಂಸ್ಥೆಗಳ ಸಹಯೋಗದಲ್ಲಿ ಪ್ರತಿವರ್ಷ ರಂಗಭೂಮಿಯಲ್ಲಿ ತೊಡಗಿಸಿಕೊಂ ಡಿರುವ, ಕೊಡುಗೆ ನೀಡಿರುವ ಪ್ರತಿಭಾವಂತರೊ ಬ್ಬರಿಗೆ ಗೋವಾ ಹೆಸರಿನಲ್ಲಿ “ರಂಗಭೂಪತಿ” ಪ್ರಶಸ್ತಿ ನೀಡಲು ನಿರ್ಧರಿಸಿದೆ.

ಪ್ರಸಕ್ತ ಸಾಲಿನ ಮೊದಲ ಪ್ರಶಸ್ತಿಯನ್ನು ಪ್ರತಿಭಾ ವಂತ ನಿರ್ದೇಶಕ ಶ್ರೀ ಶ್ರೀಪಾದ ಭಟ್ ಅವರಿಗೆ ನೀಡಲಾಗುತ್ತಿದ್ದು, ಪ್ರಶಸ್ತಿ ೫ ಸಾವಿರ ನಗದು, ಸ್ಮರಣಿಕೆ ಒಳಗೊಂಡಿದೆ.

ವಿಶ್ವರಂಗ ಭೂಮಿ ದಿನದ ಪ್ರಯುಕ್ತ, ಇದೇ ೩೦ ರಂದು ಸಂಜೆ ೬.೩೦ ಕ್ಕೆ ರಂಗಾಯಣ ಆವರಣ ದಲ್ಲಿರುವ ಪಂ.ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ, ಗೋಪಾಲ ವಾಜಪೇಯಿ ಅವರು ರಚಿಸಿದ ರಂಗ ಗೀತೆಗಳ ಹಬ್ಬ ಆಯೋಜಿಸಲಾಗಿದೆ.

ರಂಗಾಯಣ ಕಲಾವಿದ ರಾಘವ ಕಮ್ಮಾರ, ಹೂವಿನ ಹಡಗಲಿಯ ಶಶಿಧರ.ಕೆ.ಎಮ್, ರವಿ ಯಲ್ಲಪ್ಪನವರ್, ಪರಶುರಾಮ ನಾಗೋಜಿ ರಂಗಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ.

ಹಿರಿಯ ಸಾಹಿತಿ, ನಾಟಕಕಾರ ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಲಿದ್ದು, ಗೋಪಾಲ ವಾಜಪೇಯಿ ಕುಟುಂಬಸ್ತರು, ರಂಗಕರ್ಮಿ ಧನಂಜಯ ಕುಲಕರ್ಣಿ, “ಅವಧಿ ಈ-ಮ್ಯಾಗಜಿನ್” ಸಂಪಾದಕ ಜಿ,ಎನ್. ಮೋಹನ ರವಿ ಕುಲಕರ್ಣಿ ಉಪಸ್ಥಿತರಿರುತ್ತಾರೆ ಎಂದು ಗೋವಾ ರಂಗ ಸಂಗ ರಾಜಕುಮಾರ ಮಡಿವಾ ಳರ ತಿಳಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

ದಯವಿಟ್ಟು ಈ ಕಾರ್ಯಕ್ರಮಕ್ಕೆ ಅಗತ್ಯ ಪ್ರಚಾರ ನೀಡುವ ಮೂಲಕ ಸದಭಿರುಚಿಯ, ಸಹೃದಯಿ, ಸಾರ್ಥಕ ಕಾರ್ಯಕ್ರಮಕ್ಕೆ ತಾವು ಕೂಡಾ ಈ ಕಾರ್ಯಕ್ರಮದ ಭಾಗವಾಗಬೇಕು ಎನ್ನುವುದು ನಮ್ಮ ಅಪೇಕ್ಷೆ.

ಮುಖ್ಯಸ್ಥರು ರಾಜಕುಮಾರ ಮಡಿವಾಳರ
ಗೋವಾ ರಂಗ ಸಂಗ ತಂಡ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.