ಬೆಂಗಳೂರು –
ನೆರೆಯ ಬಾಂಗ್ಲಾದೇಶ ಮೂಲದ 23 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಈ ಸಂಬಂಧ ನಾಲ್ವರನ್ನು ರಾಮಮೂರ್ತಿ ನಗರ ಠಾಣಾ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಬಾಂಗ್ಲಾದೇಶದ ಸಾಗರ್, ಮುಹಮ್ಮದ್ ಬಾಬಾ ಶೇಕ್, ರಿದಾಯ್ ಬಾಬು ಹಾಗೂ ಹೈದರಾಬಾದಿನ ಹಕೀಲ್ ಎಂಬವರನ್ನು ಬಂಧಿಸಲಾಗಿದೆ.ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮತ್ತಿಬ್ಬರು ಆರೋಪಿಗಳಿಗಾಗಿ ಪೊಲೀಸರು ತನಿಖೆ ಶೋಧ ಮಾಡತಾ ಇದ್ದಾರೆ.
ಬೆಂಗಳೂರಿ ಗೆ ಬಂದಿದ್ದ ಆರೋಪಿಗಳು ರಾಮಮೂ ರ್ತಿನಗರದ ಎನ್‌ಆರ್‌ಔ ಲೇಔಟ್‌ನಲ್ಲಿ ವಾಸವಾಗಿ ದ್ದರು.ಸಂತ್ರಸ್ತೆ ಹಾಗೂ ಆರೋಪಿ ಮುಹಮ್ಮದ್ ಬಾಬಾ ಶೇಕ್ ಸಂಬಂಧಿಕರಾಗಿದ್ದು ರಿದಾಯ್ ಬಾಬು ಹಾಗೂ ಇತರರ ಜೊತೆ ಅಕ್ರಮವಾಗಿ ಭಾರತ ಕ್ಕೆ ಬಂದಿದ್ದರು.ಈ ಮಧ್ಯೆ ಯುವತಿಯನ್ನು ವೇಶ್ಯಾ ವಾ ಟಿಕೆಗೆ ದೂಡಿದ್ದರು ಎಂದು ಹೇಳಲಾಗಿದೆ.ಅದಕ್ಕೆ ಯುವತಿ ಒಪ್ಪದಿದ್ದಾಗ ದೌರ್ಜನ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ
ಆರೋಪಿಗಳೊಂದಿಗೆ ಮಹಿಳೆಯೊಬ್ಬಳು ಸೇರಿ ಕೊಂಡು ಐವರು ಯುವಕರು ಸಂತ್ರಸ್ತೆಗೆ ಲೈಂಗಿಕ ಮತ್ತು ದೈಹಿಕವಾಗಿ ದೌರ್ಜನ್ಯ ಎಸಗಿದ್ದಾರೆ. ಅಲ್ಲದೆ, ಅದನ್ನು ಚಿತ್ರೀಕರಿಸಿಕೊಂಡು ವೈರಲ್ ಮಾಡಿದ್ದಾರೆ. ಈ ವೀಡಿಯೊ ಬಾಂಗ್ಲಾದೇಶ ಸೇರಿ ಭಾರತದ ಈಶಾ ನ್ಯ ರಾಜ್ಯಗಳಲ್ಲಿ ವೈರಲ್ ಆಗಿತ್ತು. ಅಸ್ಸಾಂ ರಾಜ್ಯದ ಪೊಲೀಸರಿಂದ ವೀಡಿಯೊ ಕುರಿತು ತನಿಖೆ ನಡೆಸಿ ದಾಗ ಕೃತ್ಯದಲ್ಲಿ ಬಾಂಗ್ಲಾದೇಶದ ಪ್ರಜೆಗಳು ಭಾಗಿ ಯಾರುವುದು ಬೆಳಕಿಗೆ ಬಂದಿತ್ತು.
ಮತ್ತೊಂದೆಡೆ ಬಾಂಗ್ಲಾದೇಶದಲ್ಲಿಯೂ ವಿಡಿಯೋ ವೈರಲ್ ಆಗಿದ್ದು, ಸಂತ್ರಸ್ತೆ ಬಗ್ಗೆ ಮಾಹಿತಿ ಸಂಗ್ರಹಿಸಿ ಆಕೆಯ ಕುಟುಂಬ ಸದಸ್ಯರನ್ನು ಪತ್ತೆ ಹಚ್ಚಿದ್ದರು. ಆಗ ಆರೋಪಿ ಮುಹಮ್ಮದ್ ಬಾಬಾ ಶೇಕ್ ಜತೆ ಹೋಗಿದ್ದಾಗಿ ಮಾಹಿತಿ ಸಿಕ್ಕಿತ್ತು.ಬಳಿಕ ಟವರ್ ಲೋಕೇಷನ್ ಆಧರಿಸಿ ಮಾಹಿತಿ ಸಂಗ್ರಹಿಸಿದಾಗ ಭಾರತದಲ್ಲಿ ಆರೋಪಿಗಳು ಕೃತ್ಯ ಎಸಗಿರುವುದು ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ
ಇನ್ನೂ ಈ ಕೃತ್ಯವೆಸಗಿ ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ಆವಲಹಳ್ಳಿಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ. ಘಟನೆ ಬೆಳಕಿಗೆ ಬಂದ ಬೆನ್ನಲೇ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ಮುರುಗನ್, ಡಿಸಿಪಿ ಶರಣಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಅನಂತರ ನೇರವಾಗಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಈ ಬಗ್ಗೆ ಮಾಹಿತಿ ಸಿಕ್ಕ ಬಳಿಕ ಸಂದೀಪ್ ಪಾಟೀಲ್ ನೇತೃತ್ವದ ತಂಡ ಕಾರ್ಯಾ ಚರಣೆ ನಡೆಸಿದಾಗ ಆರೋಪಿಗಳು ಬೆಂಗಳೂರಿನ ರಾಮಮೂರ್ತಿನಗರ ಮತ್ತು ಆವಲಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿರುವುದು ಪತ್ತೆಯಾಗಿದೆ.