ಹುಬ್ಬಳ್ಳಿ –
ಹುಬ್ಬಳ್ಳಿ ಧಾರವಾಡ ಪೊಲೀಸ್ ಪೊಲೀಸ್ ಆಯುಕ್ತರ ವ್ಯಾಪ್ತಿಯಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯ ಉಪ ಪೊಲೀಸ್ ಆಯುಕ್ತರಾಗಿ ರಾಮರಾಜನ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿಯಾಗಿ ಕೃಷ್ಣಕಾಂತ ಕರ್ತವ್ಯದಲ್ಲಿದ್ದರು.ಅವರನ್ನು ಈಗಾಗಲೇ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಣಾಧಿಕಾರಿಯಾಗಿದ್ದು ಹೆಚ್ಚುವರಿಯಾಗಿ ಕಾನೂನು ಮತ್ತು ಸುವ್ಯವಸ್ಥೆಯ ಹೆಚ್ಚುವರಿ ಡಿಸಿಪಿ ಹುದ್ದೆಯನ್ನು ನೀಡಲಾಗಿತ್ತು. ಸಧ್ಯ ಈ ಒಂದು ಹುದ್ದೆಗೆ ರಾಮರಾಜನ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಹೊಸ ಆದೇಶವನ್ನು ಹೊರಡಿಸಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ ರಾಮರಾಜನ್ ಅವರನ್ನು ಓಓಡಿ ಮೇಲೆ ನಿಯೋಜನೆ ಮಾಡಲಾಗಿದೆ.

ಸಧ್ಯ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್ ನಲ್ಲಿ ಇರುವ ಡಿಸಿಪಿ ಕಾನೂನು ಸುವ್ಯವಸ್ಥೆ ಹುದ್ದೆ ಖಾಲಿ ಇದ್ದು ಅದನ್ನು ಧಾರವಾಡದ ಪೊಲೀಸ್ ವರಿಷ್ಠಾಧಿಕಾರಿ ಕ್ರಷ್ಣಕಾಂತ ಅವರು ಪ್ರಭಾರಿ ಆದೇಶದ ಮೇರೆಗೆ ನಿರ್ವಹಣೆ ಮಾಡುತ್ತಿದ್ದರು.ಈಗ ಹೊಸದಾಗಿ ಓಓಡಿ ಆದೇಶದ ಮೇರೆಗೆ ನಿಯುಕ್ತರಾದ ಕೆ ರಾಮರಾಜನ್ ಅವರು ತಮಿಳುನಾಡಿನವರಾಗಿದ್ದು 2017 ನೇ IPS ಅಧಿಕಾರಿಯಾಗಿದ್ದಾರೆ.ಸಧ್ಯ ಇವರನ್ನು ಓಓಡಿ ಆದೇಶದ ಮೇರೆಗೆ ಸರ್ಕಾರ ಇವರನ್ನು ಹುಬ್ಬಳ್ಳಿ ಧಾರವಾಡ ಕಾನೂನು ಸುವ್ಯವಸ್ಥೆಗೆ ಡಿಸಿಪಿ ಯಾಗಿ ಸರ್ಕಾರ ಆದೇಶವನ್ನು ಹೊರಡಿಸಿದ್ದು ಈ ಒಂದು ಹುದ್ದೆಗೆ ಹೆಚ್ಚುವರಿ ಹುದ್ದೆಯಲ್ಲಿದ್ದ ಕೃಷ್ಣಕಾಂತ ಇನ್ನೂ ಒಂದು ಹುದ್ದೆ ಮಾತ್ರನಿರ್ವಹಿಸಲಿದ್ದಾರೆ.
