ಬೆಂಗಳೂರು –
ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ದಿನಕ್ಕೊಂದು ಹೊಸ ಹೊಸ ತಿರುವು ಪಡೆದುಕೊಳ್ಳು ತ್ತಿದೆ. ದಿನದಿಂದ ದಿನಕ್ಕೆ ಮಾಜಿ ಸಚಿವರಿಗೆ ಸಂಕಷ್ಟ ಹೆಚ್ಚಾಗುತ್ತಿದೆ.ದಿನಕ್ಕೊಂದು ವಿಡಿಯೋ ಬಿಡುಗಡೆ ಮಾಡಿ ದೂರು ದಾಖಲು ಮಾಡಿರುವ ಯುವತಿ ಈಗ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರವೊಂದನ್ನು ಬರೆದಿದ್ದಾಳೆ.

ಸಿಡಿಯಲ್ಲಿರುವ ಯುವತಿ ಇದೀಗ ಹೈಕೋರ್ಟ್ ನ್ಯಾಯಾಧೀಶರಿಗೆ ಪತ್ರವೊಂದನ್ನು ಬರೆದಿದ್ದಾಳೆ. ರಮೇಶ್ ಜಾರಕಿಹೊಳಿ ವಿರುದ್ಧ ಹಲವಾರು ಗುರು ತರ ಆರೋಪಗಳನ್ನು ಮಾಡಿ ರಮೇಶ ಜಾರಕಿ ಹೊಳಿ ಪ್ರಭಾವಿ ವ್ಯಕ್ತಿಯಾಗಿದ್ದು, ನನಗೆ ಜೀವ ಬೆದರಿಕೆ ಹಾಕಿದ್ದಾರೆ. ನನ್ನ ಪಾಲಕರನ್ನು ಒತ್ತೆಯಾಗಿ ಟ್ಟುಕೊಂಡಿದ್ದಾರೆ. ಅವರಿಂದ ಬಲವಂತ ವಾಗಿ ಹೇಳಿಕೆ ಕೊಡಿಸಿದ್ದಾರೆ. ಪ್ರಕರಣವನ್ನು ಮುಚ್ಚಿಹಾಕ ಲು ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಈಗಾಗಲೆ ಹಲವಾರು ಸಾಕ್ಷಿಗಳನ್ನು ನಾಶಪಡಿ ಸಿದ್ದಾರೆ ಎಂದು ಆರೋಪಿಸಿದ್ದಾಳೆ.

ನಾನು ಸಂತ್ರಸ್ತೆಯಾಗಿದ್ದು, ತಮ್ಮ ಮಾರ್ಗದರ್ಶನ ದಲ್ಲೇ ತನಿಖೆ ನಡೆಸಬೇಕು. ಇಲ್ಲವಾದಲ್ಲಿ ನನಗೆ ನ್ಯಾಯ ಸಿಗುವುದಿಲ್ಲ ಎಂದು ಕೋರಿದ್ದಾಳೆ.

ಹೈಕೋರ್ಟ್ ನ್ಯಾಯಾಧೀಶರಿಗೆ ಇ ಮೇಲ್ ಮೂಲ ಕ ಪತ್ರವನ್ನು ಯುವತಿ ಕಳಿಸಿದ್ದಾರೆ.ಈ ಮಧ್ಯೆ, ಇಂದು ಬೆಳಗ್ಗೆ 10 ಗಂಟೆಗೆ ಎಸ್ಐಟಿ ಮುಂದೆ ಹಾಜರಾಗುವಂತೆ ರಮೇಶ ಜಾರಕಿಹೊಳಿಗೆ ನೋಟೀಸ್ ನೀಡಲಾಗಿದೆ. ವಿಚಾರಣೆಗೆ ಹಾಜರಾಗು ವಂತೆ ರಮೇಶ ಜಾರಕಿಹೊಳಿಗೆ ವಿನಂತಿಸಿದ್ದೇನೆ ಎಂದು ಸಹೋದರ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ಇದೀಗ ಹೈಕೊರ್ಟ್ ನ್ಯಾಯಾಧೀಶರಿಗೆ ಯುವತಿ ಸ್ವತಃ ಪತ್ರ ಬರೆದಿರುವುದರಿಂದ ಪ್ರಕರಣ ಇನ್ನಷ್ಟು ಗಂಭೀರವಾಗಿದೆ. ಇದೇ ವೇಳೆ ಇಂದು ಯುವತಿ ಸ್ವತಃ ಇಂದು ನ್ಯಾಯಾಧೀಶರ ಮುಂದೆ ಹಾಜರಾಗು ವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದ್ದು ಏನಾಗಲಿದೆ ಎಂಬುದು ಕುತೂಹಲ ಕೆರಳಿಸಿದೆ