ಬೆಂಗಳೂರು –
ಡಿಕೆಶಿ ವಿರುದ್ಧ ಬಳಸಿದ್ದ ಅವಾಚ್ಯ ಶಬ್ದವನ್ನು ರಮೇಶ್ ಜಾರಕಿಹೊಳಿ ಹಿಂದಕ್ಕೆ ಪಡೆದಿದ್ದಾರೆ. ಸದಾಶಿವನಗರ ನಿವಾಸದ ಮತ್ತೊಮ್ಮೆ ಮಾಧ್ಯಮದ ವರ ಜೊತೆ ಮಾತನಾಡಿದ ಅವರು ಡಿಕೆಶಿ ವಿರುದ್ಧ ಕೆಟ್ಟ ಪದ ಬಳಕೆ ಮಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸು ತ್ತೇನೆ ಎಂದು ಸ್ಪಷ್ಟಪಡಿಸಿದರು
ಡಿ.ಕೆ.ಶಿವಕುಮಾರ್ ವಿರುದ್ಧ ಬಳಸಿದ ಕೆಟ್ಟ ಪದ ವನ್ನು ವಾಪಸ್ ಪಡೆಯುತ್ತೇನೆ.ಮುಜುಗರದಿಂದ ಅಂತಹ ಪದಗಳನ್ನು ಬಳಕೆ ಮಾಡಿದ್ದೇನೆ ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.
ಇನ್ನೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಗ್ಗೆ ಅವಾಚ್ಯ ಪದ ಬಳಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಯುವ ಮೋರ್ಚಾ ಸದಸ್ಯರು ರಮೇಶ್ ಜಾರಕಿ ಹೊಳಿ ಸದಾಶಿವನಗರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು