ಚಿಂತಾಮಣಿ –
ಹೌದು ಮಾಜಿ ವಿಧಾನ ಪರಿಷತ್ ಸಭಾಪತಿ ಸಾರ್ವಜನಿಕ ಜೀವನದಲ್ಲಿ ಮತ್ತೊಮ್ಮೆ ಹೀರೋ ಆಗಿದ್ದಾರೆ ಅದು ಪೊಲೀಸರ ಕಾರ್ಯ ವೈಖರಿಯ ಕೆಲಸದಿಂದಾಗಿ.ನಡುರಸ್ತೆಯಲ್ಲಿ ನಿಂತು ವಾಹನ ಗಳನ್ನು ತಡೆದು ದಂಡ ವಿಧಿಸುತ್ತಿದ್ದ ಚಿಂತಾಮಣಿ ನಗರ ಠಾಣಾ ಪೊಲೀಸರಿಗೆ ಮಾಜಿ ಸ್ಪೀಕರ್ ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದ ಶಾಸಕ ರಮೇಶ್ ಕುಮಾರ್ ಚಳಿ ಬಿಡಿಸಿದ್ದಾರೆ

ಶುಕ್ರವಾರ ನಗರ ಠಾಣಾ ಎಸ್‌ಐ ಮುಕ್ತಿಯಾರ್ ತಮ್ಮ ಸಿಬ್ಬಂದಿಯೊಂದಿಗೆ ತಾಲೂಕಿನ ಮಾಡಿಕೇರಿ ಕ್ರಾಸ್‌ನಲ್ಲಿ ವಾಹನಗಳನ್ನು ತಡೆದು ದಂಡ ವಿಧಿಸುತ್ತಿದ್ದುರು ಈ ವೇಳೆ ಶ್ರೀನಿವಾಸಪುರದಿಂದ ಬೆಂಗಳೂರಿನ ಕಡೆ ಬಂದ ರಮೇಶ್ ಕುಮಾರ್ ರವರು ತಮ್ಮ ವಾಹನ ನಿಲ್ಲಿಸಿ ಬಂದು ದಂಡ ವಸೂಲಿ ಮಾಡುತ್ತಿದ್ದ ಪೋಲಿಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ದಂಡ ವಸೂಲಿ ಮಾಡ ದಂತೆ ತರಾಟೆಗೆ ತೆಗೆದುಕೊಂಡರು

ಮೊನ್ನೆಯಲ್ಲಾ ಗೃಹ ಮಂತ್ರಿಗಳು ಆದೇಶ ಮಾಡಿ ದ್ದಾರೆ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ ದಂಡ ಹಾಕಬೇಡಿ ಎಂದು ನೀವೇಕೆ ಹಾಕುತ್ತೀರ ನಿಮ್ಮ ಮಕ್ಕಳಿಗೆ ಹೇಗೆ ಒಳ್ಳೆಯದು ಆಗೋದಿಲ್ಲ ಏನು ಡಾಕ್ಯುಮೆಂಟ್ಟ್ ಚೆಕ್ ಮಾಡ್ತೀರ ನೀವು ನಾಚಿಕೆ ಯಾಗ ಬೇಕು ನಿಮಗೆ.

ಮಿನಿಸ್ಟರ್ ಮೊನ್ನೆತಾನೆ ಬಾಯಿಬಡ್ಕೊಂಡು ಹೇಳ್ತಾನೆ ನೀವು ಏನು ಮಾಡುವುದು ನಿಮ್ಮ ಮಕ್ಕಳಿಗೆ ಹೇಗೆ ಒಳ್ಳೆಯದು ಆಗೊದು ಎಂದು ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು.
ಈ ವೇಳೆ ಉತ್ತರಿಸಿದ ಎಎಸ್‌ಐ ಮುಕ್ತಿಯಾರ್ ರವರು ಹೆಲ್ಮೆಟ್ ಹಾಕದೆ ಇರುವವರನ್ನು ಮತ್ತು ದಾಖಲೆಗಳು ಇಲ್ಲದವರನ್ನು ಪರಿಶೀಲನೆ ಮಾಡುತ್ತಿದ್ದೆವೆ ಸಾರ್ ಇನ್ನು ಮಾಡಲ್ಲ ಎಂದು ವಾಪಸ್ಸಾದರು.

ಇನ್ನು ಪೊಲೀಸ್ ರನ್ನು ತರಾಟೆಗೆ ತೆಗೆದುಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ರಮೇಶ್ ಕುಮಾರ್ ರವರ ಆಡಳಿತ ವೈಖರಿಗೆ ಜನ ಮೆಚ್ಚುಗೆ ವ್ಯಕ್ತವಾಗಿದೆ.