ದೆಹಲಿ –
ಕೇಂದ್ರ ಸಚಿವ ಸಂಪುಟ ವಿಸ್ತರಣೆ ಹಿನ್ನಲೆಯಲ್ಲಿ ಹೈಕಮಾಂಡ್ ಸೂಚನೆಯಂತೆ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ತಮ್ಮ ಸ್ಥಾನಕ್ಕೆ ರಾಜೀ ನಾಮೆಯನ್ನು ನೀಡಿದ್ದಾರೆ.ಇಂದು ವಿಸ್ತರಣೆಯಾಗ ಲಿರುವ ಸಚಿವ ಸಂಪುಟದಲ್ಲಿ 43 ಜನರು ನೂತನ ವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕ್ಯಾಬಿನೇ ಟ್ ಸೇರಲಿದ್ದು ಹೀಗಾಗಿ ಕೆಲವು ಹಿರಿಯ ಸಚಿವರಿಗೆ ಪಕ್ಷದ ಹೈಕಮಾಂಡ್ ರಾಜೀನಾಮೆಗೆ ಸೂಚನೆ ಯನ್ನು ನೀಡಿದೆ.
ಹೀಗಾಗಿ ಕೆಲವೊಂದಿಷ್ಟು ಹಿರಿಯ ಸಚಿವರು ಅಂದರೆ ನಾಲ್ಕು ಜನರು ತಮ್ಮ ಸ್ಥಾನಕ್ಕಾಗಿ ರಾಜೀ ನಾಮೆಯನ್ನು ನೀಜಿದ್ದಾರೆ ಹೀಗಾಗಿ ಹಿರಿಯರು ಕೇಂದ್ರದಲ್ಲಿ ಶಿಕ್ಷಣ ಸಚಿವ ಸ್ಥಾನದಲ್ಲಿದ್ದ ರಮೇಶ್ ಪೋಖ್ರಿಯಾಲ್ ಅವರು ರಾಜೀನಾಮೆಯನ್ನು ನೀಡಿದ್ದಾರೆ. ಹಿರಿಯರು ಆಗಿದ್ದರು ಕೂಡಾ ಯುವಕ ರಂತೆ ಸಾಕಷ್ಟು ಪ್ರಮಾಣದಲ್ಲಿ ಓಡಾಡಿಕೊಂಡು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೊಸ ಹೊಸ ಬದಲಾವಣೆಗಳನ್ನು ಮಾಡುತ್ತಿದ್ದರು. ಇದ ರೊಂದಿಗೆ ಉತ್ತಮವಾಗಿ ಯಾವುದೇ ವಿವಾದ ವಿಲ್ಲದೇ ಕೆಲಸವನ್ನು ರಮೇಶ್ ಪೋಖ್ರಿಯಾಲ್ ಕೆಲಸ ಮಾಡುತ್ತಿದ್ದರು. ಇತ್ತೀಚಿಗಷ್ಟೇ ಕೋವಿಡ್ ಸೋಂಕು ಕಾಣಿಸಿಕೊಂಡು ಆಸ್ಪತ್ರೆಯಿಂದ ಗುಣ ಮುಖರಾಗಿ ಬಂದ ಮೇಲೆ ಮತ್ತಷ್ಟು ಉತ್ಸಾಹಿಯಾ ಗಿದ್ದರು. ಸಧ್ಯ ಹೈಕಮಾಂಡ್ ಸೂಚನೆಯಂತೆ ಇವರು ಕೇಂದ್ರದ ಶಿಕ್ಷಣ ಸಚಿವ ಸ್ಥಾನಕ್ಕಾಗಿ ರಾಜೀ ನಾಮೆಯನ್ನು ನೀಡಿದ್ದು ಈ ಒಂದು ಹುದ್ದೆಯನ್ನು ಮತ್ತೆ ಯಾರು ವಹಿಸಿಕೊಳ್ಳುತಾರೆ ಎಂಬುದನ್ನು ಕಾದು ನೋಡಬೇಕು.