ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಆರಂಭವಾಗಲಿದೆ ಹೊಸ ಯೋಜನೆ – 4245 ಶಾಲೆಗಳಲ್ಲಿ ಏಕ ಕಾಲದಲ್ಲಿ ಆರಂಭವಾಗಲಿದೆ ರಾಣಿ ಲಕ್ಷ್ಮೀಬಾಯಿ ಅತ್ಮ ರಕ್ಷಣಾ ಕಾರ್ಯಕ್ರಮ…..

Suddi Sante Desk

ಬೆಂಗಳೂರು –

ಹೆಣ್ಣು ಮಕ್ಕಳ ಸ್ವರಕ್ಷಣೆಗಾಗಿ ಕರಾಟೆಯನ್ನು ಇನ್ಮುಂದೆ ಪ್ರೌಢಶಾಲಾ ಮತ್ತು ಪಿಯು ವಿದ್ಯಾರ್ಥಿನಿಯರಿಗೂ ಕಲಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.ಹೌದು ಸಮಗ್ರ ಶಿಕ್ಷಣ ಕರ್ನಾಟಕ ವು 2021-22ನೇ ಸಾಲಿನಲ್ಲಿ ರಾಜ್ಯದ 4245 ಸರ್ಕಾರಿ ಪ್ರೌಢಶಾಲೆ ಹಾಗೂ 441 ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿನಿಯರಿಗೆ ರಾಣಿ ಲಕ್ಷ್ಮೀ ಬಾಯಿ ಆತ್ಮ ರಕ್ಷಣಾ ಪ್ರಶಿಕ್ಷಣ್ ಎಂಬ ಕಾರ್ಯಕ್ರಮದಡಿ ಸ್ವರಕ್ಷ ಣಾ ಕೌಶಲಗಳ ತರಬೇತಿ ನೀಡುವುದರ ಮೂಲಕ ಅವರಲ್ಲಿ ಸ್ವರಕ್ಷಣಾ ಕೌಶಲಗಳ ಸಾಮರ್ಥ್ಯ ಬೆಳೆಸಲು ನಿರ್ಧರಿಸಿ ಆರಂಭ ಮಾಡಲು ಮುಂದಾಗಿದೆ

ರಾಜ್ಯದ ಸರ್ಕಾರಿ ಪ್ರೌಢಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಯರಿಗೆ ವಾರಕ್ಕೆ 2 ಅವಧಿಯಂತೆ ತಿಂಗಳಿಗೆ 8 ಅವಧಿ ಯಂತೆ ಒಟ್ಟು 20 ಅವಧಿಗಳ ತರಬೇತಿ ನೀಡುವುದು ತರಬೇತಿಯನ್ನು ಶಾಲಾ-ಕಾಲೇಜುಗಳ ಮುಖ್ಯಸ್ಥರ ನೇತೃತ್ವ ದಲ್ಲಿ ಸ್ಥಳೀಯ ಸಂಪನ್ಮೂಲ ತರಬೇತಿದಾರರಿಂದ ನೀಡು ವುದು.ಅದೇ ರೀತಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ,ಎನ್ ಸಿಸಿ ಹಾಗೂ ಇತರ ಸಂಘ- ಸಂಸ್ಥೆಗಳ ನೆರವಿನಿಂದ ವಿದ್ಯಾರ್ಥಿನಿಯರಿಗೆ ಕೌಶಲಗಳ ಬಗ್ಗೆ ಮಾಹಿತಿ ನೀಡಬೇಕೆಂದು ಇಲಾಖೆ ತಿಳಿಸಿದೆ.

ತರಬೇತಿದಾರನನ್ನು ಆಯ್ಕೆ ಮಾಡುವ ವೇಳೆ ವಿದ್ಯಾರ್ಹತೆ ಪ್ರಮಾಣಪತ್ರ ಪರಿಶೀಲಿಸಿ,ಸದ್ವರ್ತನೆ ತರಬೇತುದಾರರನ್ನು ಆಯ್ಕೆ ಮಾಡಬೇಕು ಎಂದು ಸೂಚನೆ ನೀಡಿದೆ. ತರಬೇತು ದಾರರಿಗೆ ಪ್ರತಿ ಅವಧಿಗೆ 200 ರೂ.ಗಳಂತೆ 200 ಅವಧಿಗೆ 4,000 ರೂ.ಗೌರವಧನ ನೀಡುವುದು.ಯೋಜನೆ ಅನು ಷ್ಠಾನ ಮಾಡಿರುವುದನ್ನು ಪೋಟೋ ಸಹಿತ ಮಾಹಿತಿ ಯನ್ನು ಶಿಕ್ಷಣ ಇಲಾಖೆಗೆ ಕಳುಹಿಸಬೇಕೆಂದು ಸೂಚನೆ ನೀಡಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.