ಚೆನ್ನೈ –
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂ ರು ಬಲು ಅಪರೂಪದ ಗೆಲುವು ದಾಖಲಿಸಿದೆ. ಐಪಿಎಲ್‌ನಲ್ಲಿ ಚಿಕ್ಕ ಟೋಟಲ್ ಅನ್ನು ಡಿಫೆಂಡ್ ಮಾಡಿ ಗೆದ್ದ ದಾಖಲೆಗೆ ಆರ್‌ಸಿಬಿ ಕಾರಣವಾಗಿದೆ ಹೌದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಬೆಂಗಳೂರಿಗೆ ಈ ಗೆಲುವು ಲಭಿಸಿದೆ.
ಚೆನ್ನೈ ನ ಎಂಎ ಚಿದಂಬರಂ ಸ್ಟೇಡಿಯಂ ನಲ್ಲಿ ನಡೆದ 6ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾ ಬಾದ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂ ರು ರೋಚಕ 6 ರನ್ ಜಯ ಗಳಿಸಿದೆ.
ಇದು ಸುಮಾರು 10 ವರ್ಷಗಳ ಬಳಿಕ ಆರ್‌ಸಿಬಿ ಕಡಿಮೆ ಟೋಟಲ್ ಅನ್ನು ಡಿಫೆಂಡ್ ಮಾಡಿ ಗೆದ್ದ ಸಾಧನೆಯಾಗಿದೆ.ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಆರ್‌ಸಿಬಿ, ನಾಯಕ ವಿರಾಟ್ ಕೊಹ್ಲಿ 33, ದೇವದತ್ ಪಡಿಕ್ಕಲ್ 11, ಸಹಬಾಝ್ ಅಹ್ಮದ್ 14, ಗ್ಲೆನ್ ಮ್ಯಾಕ್ಸ್‌ವೆಲ್ 59 (41), ವಾಷಿಂಗ್ಟನ್ ಸುಂದರ್ 8, ಕೈಲ್ ಜೇಮಿಸನ್ 12 ರನ್ ಸೇರ್ಪಡೆಯೊಂದಿಗೆ 20 ಓವರ್‌ಗೆ 8 ವಿಕೆಟ್ ಕಳೆದು 149 ರನ್ ಗಳಿಸಿತ್ತು.
ಈ ಒಂದು ಗುರಿಯನ್ನು ಬೆನ್ನಟ್ಟಿದ ಸನ್ ರೈಸರ್ಸ್ ಹೈದರಾಬಾದ್‌ನಿಂದ, ನಾಯಕ ಡೇವಿಡ್ ವಾರ್ನರ್ 54 (37), ಮನೀಶ್ ಪಾಂಡೆ 38, ಜೇಸನ್ ಹೋಲ್ಡ ರ್ 4, ರಶೀದ್ ಖಾನ್ 17 ರನ್ ಸೇರಿಸಿದರು ಎಸ್‌ಆರ್‌ಎಚ್ 20 ಓವರ್‌ಗೆ 10 ವಿಕೆಟ್ ನಷ್ಟದಲ್ಲಿ 143 ರನ್ ಗಳಿಸಿ 6 ರನ್‌ನಿಂದ ಸೋಲೊಪ್ಪಿಕೊಂಡಿ ತು
ಇದಕ್ಕೂ ಮುನ್ನ 2009ರಲ್ಲಿ ಆರ್‌ಸಿಬಿ ಇದೇ ರೀತಿ ಕಡಿಮೆ ಟೋಟಲ್ ಅನ್ನು ಡಿಫೆಂಡ್ ಮಾಡಿ ಗೆದ್ದಿತ್ತು. ಆವತ್ತು ರಾಜಸ್ಥಾನ್ ರಾಯಲ್ಸ್ ವಿರುದ್ಧ ಮೊದಲ ಇನ್ನಿಂಗ್ಸ್ ಆಡಿದ್ದ ಆರ್‌ಸಿಬಿ 20 ಓವರ್‌ಗೆ 8 ವಿಕೆಟ್ ಕಳೆದು 133 ರನ್ ಗಳಿಸಿತ್ತು. ಆದರೆ ಆರ್‌ಆರ್ 15.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 58 ರನ್ ಬಾರಿಸಿ 75 ರನ್‌ನಿಂದ ಸೋತಿತ್ತು