This is the title of the web page
This is the title of the web page

Live Stream

[ytplayer id=’1198′]

June 2025
T F S S M T W
 1234
567891011
12131415161718
19202122232425
2627282930  

| Latest Version 8.0.1 |

State News

ಶಾಲಾ ಶಿಕ್ಷಣ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗಾಗಿ ನೇಮಕಾತಿ ಅಧಿಸೂಚನೆ – ಶಿಕ್ಷಕರು,ಸಿಆರ್ ಪಿ,ಬಿಆರ್ ಪಿ,ಸೇರಿದಂತೆ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ…..

ಶಾಲಾ ಶಿಕ್ಷಣ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗಾಗಿ ನೇಮಕಾತಿ ಅಧಿಸೂಚನೆ – ಶಿಕ್ಷಕರು,ಸಿಆರ್ ಪಿ,ಬಿಆರ್ ಪಿ,ಸೇರಿದಂತೆ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ…..
WhatsApp Group Join Now
Telegram Group Join Now

ಬೆಂಗಳೂರು

ಶಾಲಾ ಶಿಕ್ಷಣ ಇಲಾಖೆಯಲ್ಲಿ ವಿವಿಧ ಹುದ್ದೆ ಗಳಿಗಾಗಿ ನೇಮಕಾತಿ ಅಧಿಸೂಚನೆ  ಶಿಕ್ಷಕರು,ಸಿಆರ್ ಪಿ,ಬಿಆರ್ ಪಿ,ಸೇರಿದಂತೆ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

ಶಾಲಾ ಶಿಕ್ಷಣ ಇಲಾಖೆಯಲ್ಲಿ ಹಲವು ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನವನ್ನು ಮಾಡಲಾಗಿದೆ. ಹೌದು ರಾಜ್ಯ ಪ್ರಾಥಮಿಕ,ಪ್ರೌಢಶಾಲಾ ಸಹ ಶಿಕ್ಷಕರ ಮತ್ತು ಮುಖ್ಯ ಶಿಕ್ಷಕರು ತತ್ಸಮಾನ ವೃಂದದ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯಲ್ಲಿ ನೇಮ ಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ.

ಹೌದು 2023-24ನೇ ಸಾಲಿನ ರಾಜ್ಯ ಪ್ರಾಥಮಿಕ, ಪ್ರೌಢಶಾಲಾ ಸಹ ಶಿಕ್ಷಕರ ಮತ್ತು ಮುಖ್ಯ ಶಿಕ್ಷಕರು ತತ್ಸಮಾನ ವೃಂದದ ಹುದ್ದೆ ಭರ್ತಿಗೆ ಅರ್ಜಿ ಆಹ್ವಾ ನಿಸಲಾಗಿದೆ.ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದ ಸಿಆರ್​ಪಿ,ಬಿಆರ್​ಪಿ, ಶಿಕ್ಷಣ ಸಂಯೋಜಕರು ಮತ್ತು ತಾಂತ್ರಿಕ ಸಹಾಯಕರ ಹುದ್ದೆಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. ಅಧಿಸೂಚನೆ.

ಹುದ್ದೆ ವಿವರ: ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯಲ್ಲಿ ಆಹ್ವಾನಿಸಿರುವ ಹುದ್ದೆ ಮಾಹಿತಿ ಇಲ್ಲಿದೆ.
ಕ್ಲಸ್ಟರ್​ ಸಂಪನ್ಮೂಲ ವ್ಯಕ್ತಿಗಳು (ಸಿಆರ್​ಪಿ)
ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು
ತಾಂತ್ರಿಕ ಸಹಾಯಕರು
ಶಿಕ್ಷಣ ಸಂಯೋಜನಕರು
ಶಿಕ್ಷಣ ಸಂಯೋಜಕರು
ಕ್ಷೇತ್ರ ಸಂಪನ್ಮೂಲ ವ್ಯಕ್ತಿ
ಶಿಕ್ಷಣ ಸಂಯೋಜಕರು
ತಾಂತ್ರಿಕ ಸಹಾಯಕರು

ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ
ಸಹಾಯಕ ಯೋಜನಾ ಸಮನ್ವಯಾಧಿಕಾರಿ
ವಿಷಯ ಪರಿವೀಕ್ಷಕರು ಮತ್ತು ವಿಭಾಗೀಯ ಸಹ ನಿರ್ದೇಶಕರು ಸಹಾಯಕ, ನಿರ್ದೇಶಕ
ವಿದ್ಯಾರ್ಹತೆ – ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಅನುಸಾರ ವಿದ್ಯಾರ್ಹತೆಯನ್ನು ಹೊಂದಿರಬೇಕು.

ಕರ್ನಾಟಕ ಪ್ರೌಢಶಾಲಾ ಸಹಶಿಕ್ಷಕ/ ಟಿಜಿಟಿ ವೃಂದದಲ್ಲಿ ಅಥವಾ ಸಹ ಶಿಕ್ಷಕರಾಗಿ 10 ವರ್ಷಗಳ ಕಾಲ ಸೇವಾ ಅನುಭವ ಹೊಂದಿರ ಬೇಕು. ಅಭ್ಯರ್ಥಿಗಳು ಪ್ರಸ್ತುತ ಹುದ್ದೆ ಮತ್ತು ಸ್ಥಳದಲ್ಲಿ ಕನಿಷ್ಠ 3 ವರ್ಷಗಳ ಸೇವೆಯನ್ನು ಪೂರೈಸಿರಬೇಕು. ಪ್ರಸ್ತುತ ತಾಂತ್ರಿಕ ಸಹಾಯಕರ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರು

ಕೂಡ ಲಿಖಿತ ಪರೀಕ್ಷೆಗೆ ಹಾಜರಾಗುವುದು ಕಡ್ಡಾಯವಾಗಿದೆ.ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ 55 ವರ್ಷ ಮೀರಿರಬಾರದು.ಅರ್ಜಿ ಸಲ್ಲಿಕೆ ಪ್ರಕ್ರಿಯೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕ ನಿಗದಿಯಾಗಿ ರುವುದಿಲ್ಲ.

ಹುದ್ದೆಯ ಸಂಪೂರ್ಣ ಅಧಿಸೂಚನೆ ಓದಿ, ಅರ್ಥೈಸಿಕೊಂಡು ಮುಂದುವರೆಯಬೇಕಿದೆ‌ ಆಯ್ಕೆ ಪ್ರಕ್ರಿಯೆ ಅಭ್ಯರ್ಥಿಗಳು ಲಿಖಿತ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗು ವುದು.ಈ ಹುದ್ದೆಗೆ ಡಿಸೆಂಬರ್​ 18ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ ಆಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಡಿಸೆಂಬರ್​ 30 ಆಗಿದೆ.

ಈ ಹುದ್ದೆಗಳಿಗೆ ಫೆಬ್ರವರಿಗೆ 4 ಮತ್ತು 5ರಂದು ಲಿಖಿತ ಪರೀಕ್ಷೆ ನಡೆಸಲಾಗುವುದು.ಈ ಹುದ್ದೆ ಕುರಿತು ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಹಾಗೂ ಇನ್ನಿತರ ವಿವರಗಳಿಗೆ schooleducation.kar.nic.in ಭೇಟಿ ನೀಡಬಹುದಾಗಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..


Google News

 

 

WhatsApp Group Join Now
Telegram Group Join Now
Suddi Sante Desk