ಬೆಂಗಳೂರು –
ಶೀಘ್ರದಲ್ಲೇ 20 ಸಾವಿರ ಶಿಕ್ಷಕರ ನೇಮಕಾತಿ – ಶಿಕ್ಷಕರ ವರ್ಗಾವಣೆ,ಅತಿಥಿ ಶಿಕ್ಷಕರ ನೇಮಕಾತಿ ನೂರೆಂಟು ಸಮಸ್ಯೆಗಳ ನಡುವೆ ಮತ್ತೆ ಶಿಕ್ಷಕರ ನೇಮಕಾತಿಗೆ ಆರಂಭಗೊಂಡ ಪ್ರಕ್ರಿಯೆ
ಯಾರಿಗೂ ಯಾವ ಇಲಾಖೆಗೂ ಇಲ್ಲದ ಸಮಸ್ಯೆಗಳ ನಡುವೆ ಶಿಕ್ಷಕರಿಗೆ ಸಾಕಷ್ಟು ಸಮಸ್ಯೆ ಗಳಿದ್ದು ಇದೇಲ್ಲದರ ನಡುವೆ ಮತ್ತೆ 20 ಸಾವಿರ ಶಿಕ್ಷಕರ ನೇಮಕಾತಿಗೆ ಮತ್ತೊಂದು ಸಿದ್ದತೆ ನಡೆದಿದೆ ಹೌದು ಈ ಒಂದು ವಿಚಾರವನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿಯಾದ ಗುಡ್ ನ್ಯೂಸ್ ನ್ನು ಈ ಮೂಲಕ ನೀಡಿದ್ದಾರೆ.
ಶೀಘ್ರವೇ 20 ಸಾವಿರ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನವನ್ನು ಮಾಡಲಾಗುತ್ತಿದೆ ಎಂದಿ ದ್ದಾರೆ.ಇದರೊಂದಿಗೆ ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿಯಾದ ಭರ್ಜರಿ ಗುಡ್ ನ್ಯೂಸ್ ಸಿಕ್ಕಿದ್ದು ಶೀಘ್ರವೇ ಸರ್ಕಾರ 20 ಸಾವಿರ ಶಿಕ್ಷಕರ ನೇಮಕಾ ತಿಗೆ ಅರ್ಜಿ ಆಹ್ವಾನಿಸಲಿದೆ.ಈ ಕುರಿತು ಸುದ್ದಿಗಾ ರರ ಜೊತೆ ಮಾತನಾಡಿದ ಸಚಿವ ಮಧು ಬಂಗಾ ರಪ್ಪ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಇನ್ನೂ 20 ಸಾವಿರ ಶಿಕ್ಷಕರ ನೇಮಕಕ್ಕೆ ಮುಖ್ಯಮಂತ್ರಿ ಅವರ ಬಳಿ ಚರ್ಚಿಸಲಾಗಿದೆ.
ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಶೀಘ್ರವೇ ಅರ್ಜಿ ಆಹ್ವಾನಿಸಲಾಗುತ್ತದೆ ಎಂದರು ಈ ಹಿಂದೆ ಕರೆದಿರುವ 13,500 ಶಿಕ್ಷಕರ ನೇಮ ಕಾತಿ ಪ್ರಕ್ರಿಯೆ ಸಧ್ಯ ಅಂತಿಮ ಹಂತದಲ್ಲಿದೆ ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇರುವ ಅಂದಾಜು 400 ರಿಂದ 500 ಹುದ್ದೆಗಳ ನೇಮ ಕಾತಿ ಮಾತ್ರ ತಡವಾಗಿದೆ.ಇದು ಶೀಘ್ರದಲ್ಲೇ ಇತ್ಯರ್ಥವಾಗುತ್ತೆ
ಉಳಿದ 13 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಿ ಸ್ಥಳ ನಿಯುಕ್ತಿಗೊಳಿಸ ಲಾಗುವುದು ಎಂದರು.ಇನ್ನೂ ಇದು ಒಂದು ವಿಚಾರವಾದರೆ ಇನ್ನೂ ಪ್ರಮುಖವಾಗಿ ರಾಜ್ಯ ದಲ್ಲಿ ಸಧ್ಯ ಶಿಕ್ಷಕರು ವರ್ಗಾವಣೆ ವಿಚಾರ ಸೇರಿ ದಂತೆ ಸಾಕಷ್ಟು ಪ್ರಮಾಣದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದು ಇವುಗಳನ್ನು ಒಂದಿಷ್ಟು ಪರಿ ಹಾರ ಮಾಡಿ ನಂತರ ನೇಮಕಾತಿ ಪ್ರಕ್ರಿಯೆ ಆರಂಭ ಮಾಡಬಹುದಿತ್ತು ಎಂಬ ಮಾತುಗಳನ್ನು ರಾಜ್ಯದ ಶಿಕ್ಷಕರು ಹೇಳುತ್ತಿದ್ದಾರೆ.
ಅಷ್ಟೊಂದು ಅವಸರ ಏನಿತ್ತು ಎಂದು ಪ್ರಶ್ನೆ ಯನ್ನು ಮಾಡಿದ್ದು ಏನೇನು ಮಾಡ್ತಾರೆ ಶಿಕ್ಷಣ ಸಚಿವರು ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..