ಬೆಂಗಳೂರು –
ಸಧ್ಯ 5,000 ಶಿಕ್ಷಕರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು ಈಗಾಗಲೇ ನೇಮಕಾತಿ ಪಟ್ಟಿಯನ್ನು ಕೂಡಾ ಇಲಾಖೆ ಬಿಡುಗಡೆ ಮಾಡಿದ್ದು ಇದರ ನಡುವೆ ಮತ್ತೆ ಹೊಸದಾಗಿ 3 ಸಾವಿರಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿಗೆ ಸಿಇಟಿ ಪರೀಕ್ಷೆ ನಡೆಯಲಿದೆ ಹೌದು ಹುದ್ದೆಗಳ ಭರ್ತಿ ನಂತರ ಖಾಲಿ ಉಳಿಯುವ ಹುದ್ದೆಗಳಿಗೆ ಫೆಬ್ರವರಿಯಲ್ಲಿ ಮತ್ತೊಮ್ಮೆ ಸಿಇಟಿ ನಡೆಸಲು ಶಿಕ್ಷಣ ಇಲಾಖೆ ತೀರ್ಮಾನಿ ಸಿದೆ.
ಇದರಿಂದ ಶಿಕ್ಷಕರಾಗ ಬಯಸುವವರಿಗೆ ಮತ್ತೊಂದು ಅವಕಾಶ ಸಿಗಲಿದೆ.ಈಗ 15,000 ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ನಡೆದಿದ್ದು ಇನ್ನೂ ಮೂರು ಸಾವಿರ ಹುದ್ದೆಗಳು ಖಾಲಿ ಉಳಿಯುವ ಸಾಧ್ಯತೆ ಇದೆ.ಈ ಖಾಲಿ ಹುದ್ದೆಗಳ ನೇಮಕಾತಿಗೆ ಪುನಹ ಸಿಇಟಿ ನಡೆಸಲಾಗುವುದು.ಅಲ್ಲದೇ 15 ಸಾವಿರ ಶಿಕ್ಷಕರ ಹುದ್ದೆಗಳ ನೇಮಕಾತಿಗೆ ನಡೆದ ಸಿಇಟಿ ಯಲ್ಲಿ 54,342 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದು ವಿಷಯವಾರು,ಜಿಲ್ಲಾವಾರು, ಮೀಸಲಾತಿವಾರು ವಿಂಗ ಡಣೆ ಮಾಡಿದ ನಂತರ 3000 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳು ಇಲ್ಲದಂತಾಗಿದೆ.ಶಿಕ್ಷಣ ಇಲಾಖೆ ಖಾಲಿ ಯಾದ ಹುದ್ದೆಗಳ ಮಾಹಿತಿಯನ್ನು ಕ್ರೋಢೀಕರಿಸುತ್ತಿದೆ. ಸುಮಾರು 3000 ಹುದ್ದೆಗಳು ಖಾಲಿ ಉಳಿಯಲಿವೆ, ಈ ಹುದ್ದೆಗಳಿಗೆ ಫೆಬ್ರವರಿಯಲ್ಲಿ ಪುನಹ ಸಿಇಟಿ ನಡೆಸಲು ಇಲಾಖೆ ಪ್ಲಾನ್ ಮಾಡಿದ್ದು ಇನ್ನೂ ಇದು ಒಂದು ವಿಚಾರ ವಾದರೆ ಇನ್ನೂ ಪ್ರಮುಖವಾಗಿ ದಿನದಿಂದ ದಿನಕ್ಕೆ ಶಿಕ್ಷಕರ ವರ್ಗಾವಣೆ ವಿಚಾರ ಗಂಭೀರವಾಗುತ್ತಿದ್ದು ಒಮ್ಮೆಯಾ ದರೂ ಸ್ವಂತ ಜಿಲ್ಲೆಗೆ ಶಿಕ್ಷಕರು ವರ್ಗಾವಣೆ ವಿಚಾರ ನೆನೆಗುದಿಗೆ ಬೀಳುತ್ತಿದ್ದು ವಿಳಂಬವಾಗುತ್ತಿದ್ದು ಹೀಗಾಗಿ ನಾಡಿನ ಶಿಕ್ಷಕರು ಆತಂಕಗೊಂಡಿದ್ದಾರೆ.