ಧಾರವಾಡ –
2022 ರ ಜನವರಿಯಲ್ಲಿ ಕೇಂದ್ರ ಕಾರಾಗೃಹದಲ್ಲಿರುವ ಬಂದಿಗಳ ಪೈಕಿ ಐದು ಜನ ಜೀವಾವಧಿ ಶಿಕ್ಷಾ ಬಂದಿಗಳನ್ನು ಸನ್ನಡತೆ ಆಧಾರದ ಮೇಲೆ ಅವಧಿಪೂರ್ವ ಬಿಡುಗಡೆ ಮಾಡಲು ಸ್ಥಾಯಿ ಸಲಹಾ ಮಂಡಳಿಯು ಶಿಫಾರಸ್ಸು ಮಾಡಿತ್ತು.ಈ ಶಿಫಾರಸ್ಸನ್ನು ಸರ್ಕಾರ ಸಮ್ಮತಿಸಿದ ಮೇರೆಗೆ ಇಂದು ಕೇಂದ್ರ ಕಾರಾಗೃಹದಲ್ಲಿದ್ದ ಐದು ಜನ ಜೀವಾವಧಿ ಶಿಕ್ಷಾ ಬಂದಿಗಳನ್ನು ನಿಯಮಾನುಸಾರ ಬಿಡುಗಡೆಗೊಳಿಸ ಲಾಯಿತು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುಷ್ಪಲತ ಸಿ.ಎಂ ಹಾಗೂ ಕೇಂದ್ರ ಕಾರಾಗೃಹ ಅಧೀಕ್ಷಕ ಎಂ.ಎ. ಮರಿಗೌಡ ಬಿಡುಗಡೆಯಾದ ವರಿಗೆ ಮುಂದಿನ ಜೀವನ ಸಾಗಿಸಲು ಮಾರ್ಗದರ್ಶನ ನೀಡಿ ಕಾನೂನು ಮಾಹಿತಿಗಳನ್ನು ಒದಗಿಸಿದರು.
ಬಿಡುಗಡೆಯಾದವರ ವಿವರ ನಯಾಜ ಅಲಿಯಾಸ್ ನಯಾಜುಲ್ಲಾ ಮೌಲಾಸಾಬ, ಶಿವಮೊಗ್ಗ,ಮುನ್ನಾ ಅಲಿಯಾಸ್ ಸೈಯದ್‍ಖಾದರ್ ಶಿವಮೊಗ್ಗ, ಶಂಕರ್ಯಾ ಅಲಿಯಾಸ್ ಆಂಧ್ರ ಪರಶ್ಯಾ ನವಲಗುಂದ ಸೆಟಲ್‍ಮೆಂಟ್ ಹುಬ್ಬಳ್ಳಿ, ಹನುಮಂತಪ್ಪ ರಾಮಚಂದ್ರಪ್ಪ ದೊಡ್ಡಮನಿ, ಮಂಟೂರು ಹುಬ್ಬಳ್ಳಿ, ಸಕ್ರಪ್ಪ ಅಲಿಯಾಸ್ ಶಂಕ್ರಪ್ಪ ಲಮಾಣಿ, ಹುಲಿಕಟ್ಟಿ ತಾಂಡಾ ಕಲಘಟಗಿ.