ದಾವಣಗೆರೆ –
ಮನೆ ಬಿಟ್ಟು ಓಡಿ ಬಂದಿದ್ದ ಪ್ರೇಮಿಗಳ ಮದುವೆಯನ್ನು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಮಾಡಿಸಿದ್ದಾರ. ಖದ್ದು ತಾವೇ ಮುಂದೆ ನಿಂತುಕೊಂಡು ಇಬ್ಬರನ್ನು ಮದುವೆ ಮಾಡಿಸಿದರು.

ಹೊನ್ನಾಳಿ ತಾಲೂಕಿನ ಕುಂಕುವ ಗ್ರಾಮದ ಭೂಮಿಕಾ ಮತ್ತು ಶಿವಕುಮಾರ್ ಜೋಡಿಗೆ ಮದುವೆಯನ್ನು ಶಾಸಕರು ಮಾಡಿಸಿದ್ದಾರೆ.

ಹೊನ್ನಾಳಿಯ ಹಿರೇಕಲ್ಮಠದಲ್ಲಿ ಇಬ್ಬರಿಗೆ ಮದುವೆ ಮಾಡಿಸಿದರು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರು.ಮನೆಯಲ್ಲಿ ಮದುವೆಗೆ ವಿರೋಧ ಮಾಡಿದ ಹಿನ್ನಲೆಯಲ್ಲಿ ಮನೆ ಬಿಟ್ಡು ಬಂದಿದ್ದರು ಪ್ರೇಮಿಗಳು.

ನವಜೋಡಿಗೆ ಅಕ್ಷತೆ ಹಾಕಿ ಮುಂದೆ ನಿಂತು ಮದುವೆ ಮಾಡಿದರು ಶಾಸಕರು.ಬಳಿಕ ಇಬ್ಬರ ಮನೆಯವರಿಗೆ ವಿಷಯ ತಿಳಿಸಿ ಮಕ್ಕಳಿಗೆ ಆಶೀರ್ವದಿಸಿ ಕೆಲವೊಂದಿಷ್ಟು ಬುದ್ದಿಮಾತು ಹೇಳಿದರು ರೇಣುಕಾಚಾರ್ಯ.

ಕೆಲವು ದಿನಗಳಿಂದ ಇಬ್ಬರು ಪ್ರೀತಿಸುತ್ತಿದ್ದರು ಭೂಮಿಕಾ ಮತ್ತು ಶಿವಕುಮಾರ್ ಜೋಡಿ. ಮದುವೆಗೆ ಮನೆಯಲ್ಲಿ ವಿರೋಧ ಹಿನ್ನಲೆ ಮನೆ ಬಿಟ್ಟು ಬಂದಿದ್ದರು ಇಬ್ಬರು.
ಇಂದು ಸ್ವತಃ ಮುಂದೆ ನಿಂತು ಮದುವೆ ಮಾಡಿಸಿ ಶುಭ ಹಾರೈಸಿದರು ರೇಣುಕಾಚಾರ್ಯ ಅವರೊಂದಿಗೆ ಅವರ ಆಪ್ತರು ಬೆಂಬಲಿಗರು ಈ ಒಂದು ವಿಶೇಷ ಮದುವೆಗೆ ಸಾಕ್ಷಿಯಾದರು.