ಬಳ್ಳಾರಿ –
ಬಳ್ಳಾರಿ: ಜಿಲ್ಲೆಯ ಮುನ್ಸಿಫಲ್ ಹೈಸ್ಕೂಲ್ ನ ಮುಖ್ಯ ಶಿಕ್ಷಕರೊಬ್ಬರು ಶಾಲೆ ಹೆಸರಿನ ಖಾತೆಯಲ್ಲಿದ್ದ 36.64 ಲಕ್ಷ ರೂಪಾಯಿಗಳನ್ನು ವೈಯಕ್ತಿಕ ಕೆಲಸಕ್ಕೆ ಬಳಸಿಕೊಂಡ ಪ್ರಕರಣ ಕುರಿತಂತೆ ಇಲಾಖೆ ಇದನ್ನು ಗಂಭೀರವಾಗಿ ತಗೆದುಕೊಂಡಿದ್ದು ಇಧರ ಬೆನ್ನಲ್ಲೇ ಮೇಲಾಧಿಕಾರಿಗಳ ಸೂಚನೆ ಹಿನ್ನಲೆಯಲ್ಲಿ ಬಿಇಓ ಅವರು ಮುಖ್ಯ ಶಿಕ್ಷಕರು ಮಾಡಿಕೊಂಡ ಹಣ ದುರ್ಬಳಕೆ ಕುರಿತಂತೆ ತನಿಖೆಯನ್ನು ಮಾಡಿ ವರದಿಯನ್ನು ಡಿಡಿಪಿಐ ಅವರಿಗೆ ಸಲ್ಲಿಕೆ ಮಾಡಿ ದ್ದಾರೆ.

ನಗರದ ಮುನ್ಸಿಪಲ್ ಹೈಸ್ಕೂಲ್ ಮುಖ್ಯ ಶಿಕ್ಷಕ ಮಹ ಮ್ಮದ್ ಪಿರಾನಾ ಎಂಬುವರು ಹಣ ದುರುಪಯೋಗ ಮಾಡಿಕೊಂಡ ಮುಖ್ಯ ಶಿಕ್ಷಕರಾಗಿದ್ದು ಮುನ್ಸಿಫಲ್ ಹೈಸ್ಕೂಲ್ ಗೆ 2020 ಮೇ 13 ರಿಂದ ಶಾಲೆ ಪ್ರಾಂಶುಪಾ ಲರಾಗಿ ನೇಮಕವಾದ್ದ ಮಹಮ್ಮದ್ ಪಿರಾನಾ ಶಾಲೆಯ ಖಾತೆಯಲ್ಲಿದ್ದ 36.64 ಲಕ್ಷ ರೂಪಾಯಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ.ಶಾಲೆಯ ಖಾತೆಯಲ್ಲಿ ಸದ್ಯ 64 ರೂಪಾಯಿ ಮಾತ್ರ ಉಳಿದಿದ್ದು.ಈ ಹಣದ ದುರ್ಬಳಕೆ ಕುರಿತಂತೆ ಸಮಗ್ರವಾಗಿ ತನಿಖೆಯನ್ನು ಮಾಡಿರುವ ಬಿಇಓ ಅವರು ವರದಿಯನ್ನು ಸಲ್ಲಿಸಿದ್ದಾರೆ.

ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಡಿಡಿಪಿಐಗೆ ವರದಿ ಸಲ್ಲಿಸಿದ್ದು ಮೇಲಾ ಧಿಕಾರಿಗಳ ಸೂಚನೆಯಂತೆ ಮುಖ್ಯಶಿ ಕ್ಷಕನ ವಿರುದ್ಧ ಈ ಮುಖ್ಯಶಿಕ್ಷಕ ಇದೇ ಮುನ್ಸಿಪಲ್ ಕಾಲೇಜಿನಲ್ಲಿಯೇ ಪದವಿ ಪೂರ್ವ ಶಿಕ್ಷಣ ಮುಗಿಸಿದ್ದಾರೆ ಎಂಬುದು ಗಮನಾರ್ಹವಾಗಿದ್ದು ಸಧ್ಯ ಬಿಇಓ ಅವರು ವರದಿಯನ್ನು ಸಲ್ಲಿಕೆ ಮಾಡಿದ್ದು ಡಿಡಿಪಿಐ ಮುಂದೆ ಯಾವ ಕ್ರಮವನ್ನು ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡ ಬೇಕಿದೆ.