ಬೆಂಗಳೂರು –
ಸಮುದಾಯದತ್ತ ಕಾರ್ಯಕ್ರಮದಲ್ಲಿಯೇ ಪಾಲಕರ ಸಭೆ ನಡೆಸಲು ಅನುಮತಿ ಕೋರಿಕೆ ಒಂದೇ ದಿನ ಅಂತರದಲ್ಲಿ ಎರಡೆರೆಡು ಸಭೆ ಮಾಡುವ ಬದಲಿಗೆ ಶಿಕ್ಷಕರಿಗೆ ಹೊರೆ ತಪ್ಪಿಸಲು ಮುಂದಾದ ಅಧಿಕಾರಿಗಳು
ದಸರಾ ರಜೆಯನ್ನು ಮುಗಿಸಿಕೊಂಡು ಸಧ್ಯ ರಾಜ್ಯದೆಲ್ಲೆಡೆ ಶಾಲೆಗಳು ಪುನಃ ಆರಂಭಗೊಂ ಡಿದ್ದು ಈ ನಡುವೆ ಶಿಕ್ಷಣ ಇಲಾಖೆಯ ಮೇಲಾ ಧಿಕಾರಿಗಳ ಸೂಚನೆಯ ಹಿನ್ನಲೆಯಲ್ಲಿ ಪ್ರತಿ ನಾಲ್ಕನೇಯ ಶನಿವಾರ ನಡೆಯುವ ಪಾಲಕರ ಸಭೆಯನ್ನು ಮುಂದೂಡುವಂತೆ ಸೂಚನೆಯನ್ನು ನೀಡಲಾಗಿದೆ.
ಹೌದು ದಿನಾಂಕ: 31-10-2023 ರಂದು ನಡೆಯುವ ಸಮುದಾಯದತ್ತ ಶಾಲಾ ಕಾರ್ಯ ಕ್ರಮ ಇರಲಿದ್ದು ಹೀಗಾಗಿ ಪ್ರತಿ ನಾಲ್ಕನೇ ಶನಿವಾರ ನಡೆಯುವ ಪಾಲಕರ ಸಭೆಯನ್ನು ಮೂಂದೂಡಿ ಸಮುದಾಯದತ್ತ ಕಾರ್ಯ ಕ್ರಮದಲ್ಲಿಯೇ ಈ ಒಂದು ಪಾಲಕರ ಸಭೆಯನ್ನು ನಡೆಸಲು ಸೂಚನೆಯನ್ನು ನೀಡಲಾಗಿದೆ.
ಇಲಾಖೆಯ ಆಯುಕ್ತರ ಪತ್ರದ ಸೂಚನೆಯ ಹಿನ್ನಲೆಯಲ್ಲಿ ಈ ಒಂದು ಆದೇಶವನ್ನು ಮಾಡ ಲಾಗಿದೆ. ಸಭೆಯನ್ನು ಒಂದೇ ದಿನದ ಅಂತರದಲ್ಲಿ ಎರಡು ಬಾರಿ ಮಾಡುವ ಬದಲಾಗಿ ಸಮುದಾಯ ದತ್ತ ಶಾಲಾ ಕಾರ್ಯಕ್ರಮದಲ್ಲಿಯೇ ಪಾಲಕರ ಸಭೆಯನ್ನು ನಡೆಸಲು ಅನುಮತಿಸಬೇಕೆಂದು ಕೋರಲಾಗಿದ್ದು ಹೀಗಾಗಿ ಅನುಮತಿ ನೀಡುತ್ತಾ ರಾ ಇಲ್ಲವೊ ಎಂಬೊದನ್ನು ಕಾದು ನೋಡಬೇಕಿದೆ
ಅನಿಲಕುಮಾರ ಸುದ್ದಿ ಸಂತೆ ನ್ಯೂಸ್ ಬೆಂಗಳೂರು……