ಬೆಂಗಳೂರು –
ಮಹಾಮಾರಿ ಕೋವಿಡ್ ನಿಂದಾಗಿ ರಾಜ್ಯದಲ್ಲಿ ಶಿಕ್ಷಕ ರ ಸಾವಿನ ಸಂಖ್ಯೆ ಕಡಿಮೆಯಾಗಿದೆ.ಇದೊಂದು ತುಂಬಾ ಸಂತೋಷದ ವಿಚಾರವಾಗಿದ್ದು ಆದರೂ ಕೂಡಾ ರಾಜ್ಯದಲ್ಲಿಂದು ಇಬ್ಬರು ಹಿರಿಯ ಶಿಕ್ಷಕರು ಸಾವಿಗೀಡಾಗಿದ್ದಾರೆ. ಹೌದು ಮಹಾಮಾರಿಗೆ ಗುಲ್ಬ ರ್ಗ ಜಿಲ್ಲೆಯಲ್ಲಿ ಇಬ್ಬರು ಮಹಾನ್ ಆದರ್ಶವಾದಿ ಶಿಕ್ಷಕರು ಸಾವಿಗೀಡಾಗಿದ್ದಾರೆ.ಹೌದು ಕೇರಕನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳಾ ದ ಸೈಬಣ್ಣ ಜಮಾದಾರ್ ಕೋವಿಡ್ ನಿಂದಾಗಿ ನಿಧನರಾಗಿದ್ದಾರೆ.ಮೊನ್ನೆ ಮೊನ್ನೆಯಷ್ಟೇ ಭಡ್ತಿಯನ್ನು ಪಡೆದುಕೊಂಡು ಹೆಡ್ ಮಾಸ್ಟರ್ ಆಗಿದ್ದರು ಇವರು ಯಾವಾಗಲೂ ತಲೆಯ ಮೇಲೊಂದು ಗಾಂಧಿ ತಾತನ ಟೋಪಿ ಹಾಕಿಕೊಂಡು ಆದರ್ಶ ಗಾಂಧಿ ವಾದಿಯಾಗಿದ್ದರು.ಕಳೆದ ಮೂರು ನಾಲ್ಕು ದಿನಗಳ ಹಿಂದೆ ಇವರಿಗೆ ಸೋಂಕು ಕಾಣಿಸಿಕೊಂಡಿತ್ತು ಆಸ್ಪಗೆ ಗೆ ದಾಖಲಾಗಿದ್ದ ಇವರು ಚಿಕಿತ್ಸೆ ಫಲಿಸದೇ ಸಾವಿಗೀ ಡಾಗಿದ್ದಾರೆ.

ಕಲ್ಮೇಶ್ ನಿಂಬರ್ಗಿ ಹಿರೇಜೇವರಗಿಯ ಖಾಸಗಿ ಅನುದಾನಿತ ಶಾಂತಲಿಂಗೇಶ್ವರ ಪ್ರೌಢ ಶಾಲೆಯ ಇಂಗ್ಲೀಷ್ ಶಿಕ್ಷಕರಾಗಿದ್ದರು.ಕಳೆದ ಹದಿನೈದು ವರ್ಷ ಗಳಿಂದ ತಾಲ್ಲೂಕಿನ ಇಂಗ್ಲೀಷ್ ಸಂಪನ್ಮೂಲ ಶಿಕ್ಷಕರ ರಾಗಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು. 45 ವಯಸ್ಸಿನ ಈ ಒಂದು ಶಿಕ್ಷಕರು ಕೋವಿಡ್ ನಿಂದಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಇನ್ನೂ ಮೃತರಾದ ಗಾಂಧಿವಾದಿ ಸಂಪನ್ಮೂಲ ಶಿಕ್ಷಕ ರಿಗೆ ನಾಡಿನ ಮೂಲೆ ಮೂಲೆಗಳಿಂದ ಶಿಕ್ಷಕರು ಭಾವ ಪೂರ್ಣ ನಮನ ಸಲ್ಲಿಸಿದ್ದಾರೆ.

ಬಸವರಾಜ ನಿಂಬರಗಿ,ಗಾಂಧೀ ದಪ್ಪೇದಾರ, ಸಂಗಣ್ಣ ಮ್ಯಾಳೇಶಿ,ಚಿತ್ರಶೇಖರ ದೇಗಲಿಮಡಿ, ಹನಮಂತ ಬೂದಿಹಾಳ ಇನ್ನೂ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸರ್ವ ಸದಸ್ಯರಾದ,ಎಲ್ ಐ ಲಕ್ಕಮ್ಮನವರ, ಶರಣ ಬಸವ ಬನ್ನಿಗೊಳ, ಸಂಗಮೇಶ ಕನ್ನಿನಾಯ್ಕರ್, ಎಸ್ ಎಫ್ ಪಾಟೀಲ, ರವಿ ಬಂಗೇನವರ, ಅಕ್ಬರ ಅಲಿ ಸೋಲಾಪೂರ, ರಾಜುಸಿಂಗ್ ಹಲವಾಯಿ, ಚಂದ್ರಶೇಖರ ಶೆಟ್ರು, ನಾರಾಯಣಸ್ವಾಮಿ, ಕೆ ಎಮ್ ಮುನವಳ್ಳಿ, ಎಸ್ ಎ ಜಾಧವ, ಎಸ್ ಎಫ್, ಧನಿ ಗೊಂಡ, ರುಸ್ತಂ ಕನವಾಡೆ,ಬಿ ವಿ ಪ್ರೇಮಾವತಿ, ಕೀರ್ತಿವತಿ ವಿ ಎನ್, ಜೆ ಟಿ ಮಂಜುಳಾ,ಸೀಮಾ ನಾಯಕ,ಭಾರತಿ ಭಂಡಾರಿ, ಮಂಜುಳಾ ಬಾಗಲೂ ರು,ನಾಗವೇಣಿ,ಇಂದಿರಾ.ಮುಕಾಂಬಿಕಾ ಭಟ್. ನಾಗರತ್ನ,ಲಕ್ಷ್ಮೀದೇವಮ್ಮ, ಎಂ ವಿ,ಕುಸುಮಾ ಎಸ್ ಹೊಳೆಯಣ್ಣನವರ,ಬಿ ವಿ ಅಂಗಡಿ ,ಜಗದೀಶ್ ಬೋಳಸೂರ, ಅಶೋಕ ಸಜ್ಜನ, ಸೇರಿದಂತೆ ಹಲವ ರು ಸಂತಾಪವನ್ನು ಸೂಚಿಸಿದ್ದಾರೆ ಅಲ್ಲದೇ ಮೃತ ಕುಟುಂಬಕ್ಕೆ ಕೂಡಲೇ ರಾಜ್ಯ ಸರ್ಕಾರ ಕರೋನಾ ವಾರಿಯರ್ಸ್ ಅಂತಾ ಸೂಕ್ತ ಪರಿಹಾರ ನೀಡುವಂತೆ ಒತ್ತಾಯವನ್ನು ಮಾಡಿದರು