ಧಾರವಾಡ –
ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರು ಪಾಲಿಕೆಯ ಸದಸ್ಯರೊಂದಿಗೆ ಕೊಳಿಕೇರಿಗೆ ಭೇಟಿ ಸಮಸ್ಯೆ ಆಲಿಸಿ ಸ್ಥಳದಲ್ಲಿಯೇ ಪರಿಹಾರ ಆಯು ಕ್ತರಿಗೆ ಸಾಥ್ ನೀಡಿದ ಪಾಲಿಕೆಯ ಸದಸ್ಯರಾದ ನಿತಿನ ಇಂಡಿ,ಶಂಕರ ಶೆಳಕೆ,ರತ್ನಾಬಾಯಿ ನಾಝರೆ…..ಹೌದು
ಧಾರವಾಡದ ಕೋಳಿಕೇರಿಯಲ್ಲಿನ ಹೂಳನ್ನು ತಗೆಯಲಾಗುತ್ತಿದೆ.ಕೆರೆಯಲ್ಲಿನ ಹೂಳನ್ನು ಸ್ವಚ್ಚಗೊಳಿಸುವ ಕಾರ್ಯ ಜೋರಾಗಿದ್ದು ಈ ಒಂದು ಕೆಲಸದಿಂದಾಗಿ ಕೆರೆಯ ಸುತ್ತಮುತ್ತಲಿನ ಸಾರ್ವಜನಿಕರಿಗೆ ನಿವಾಸಿಗಳಿಗೆ ಒಂದಿಷ್ಟು ಧೂಳಿ ನಿಂದ ಸಮಸ್ಯೆಯೊಂದಿಗೆ ತೊಂದರೆಯಾಗುತ್ತಿದೆ.
ಹೀಗಾಗಿ ಈ ಒಂದು ಸಮಸ್ಯೆ ಕುರಿತಂತೆ ಸಾರ್ವ ಜನಿಕರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರಿಗೆ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಿಗೆ ದೂರು ನೀಡಿ ದ್ದಾರೆ.ಸಮಸ್ಯೆ ದೂರು ಗಮನಕ್ಕೆ ಬರುತ್ತಿದ್ದಂತೆ ಪಾಲಿಕೆಯ ಆಯುಕ್ತರಾದ ಡಾ ಈಶ್ವರ ಉಳ್ಳಾ ಗಡ್ಡಿಯವರು ಪಾಲಿಕೆಯ ಆರೋಗ್ಯ ಸ್ಥಾಯಿ ಅಧ್ಯಕ್ಷರಾದ ನಿತಿನ ಇಂಡಿಯವರೊಂದಿಗೆ ತುರ್ತಾಗಿ ಕೋಳಿಕೆರಿಗೆ ಭೇಟಿ ನೀಡಿ ಸಾರ್ವಜ ನಿಕರ ಸಮಸ್ಯೆಗೆ ಸ್ಪಂದಿಸಿದ್ದಾರೆ.
ಹೌದು ಸಾರ್ವಜನಿಕರ ದೂರಿನ ಮೇರೆಗೆ ಕೋಳಿಕೇರಿಗೆ ಭೇಟಿ ನೀಡಿದ ಪಾಲಿಕೆ ಆಯುಕ್ತರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಈ ಹಿಂದೆ ಉಚಿತವಾಗಿ ಕೋಳಿಕೇರಿಯ ಹೂಳನ್ನು ಅಕ್ಕ ಪಕ್ಕದ ರೈತರು ತೆಗೆದುಕೊಂಡು ಹೋಗಲು ಅಧಿಸೂಚನೆ ನೀಡಿದ್ದರು.ಈ ಒಂದು ಮೇರೆಗೆ ಹೂಳನ್ನು ಟ್ರ್ಯಾಕ್ಟರ್ ಟ್ರೇಲರ್ ನಲ್ಲಿ ತೆಗೆದುಕೊಂಡ ಹೋಗುವಾಗ ಮಣ್ಣು ರಸ್ತೆಯಲ್ಲಿ ಚೆಲ್ಲಿ ರಸ್ತೆಯಲ್ಲಿ ಸಂಚರಿಸಲು ತೊಂದರೆಯುಂ ಟಾಗುತ್ತಿತ್ತು ಹಾಗೂ ಧೂಳಿನಿಂದ ತೊಂದರೆ ಅನುಭವಿಸುತ್ತಿದ್ದ ಸಾರ್ವಜನಿಕರ ದೂರಿನ ಮೇರೆಗೆ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ನಿತಿನ್ ಇಂಡಿ ಮತ್ತು ಪಾಲಿಕೆಯ ಸದಸ್ಯರಾದ ಶಂಕರ ಶೆಳಕೆ,ಶ್ರೀಮತಿ ರತ್ನಾಬಾಯಿ ನಾಝರೆ ಹಾಗೂ ಸಾರ್ವಜನಿಕರ ಜೊತೆ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು.
ಇದೇ ವೇಳೆ ಆಯುಕ್ತರು ಮಾತನಾಡಿ ಮಣ್ಣು ಸಾಗಾಣಿಕೆಗಾರರು ಟ್ರ್ಯಾಕ್ಟರ್ ಟ್ರೇಲರ್ ಮೂಲಕ ಮಣ್ಣು ಸಾಗಾಣಿಕೆ ಮಾಡುವ ಮೊದಲು ಮಣ್ಣನ್ನು ಕವರ್ ಮಾಡಿಕೊಂಡು ಹಾಗೂ ಟ್ರೇಲರ್ ಪಕ್ಕದಲ್ಲಿ ತಗಡಿನ ಸೀಟನ್ನು ಹಾಕಿ ಕೊಂಡು ವೈಜ್ಞಾನಿಕವಾಗಿ ಮಣ್ಣನ್ನು ಸಾಗಾಣಿಕೆ ಮಾಡುವಂತೆ ಮತ್ತು ಮುಂದೆ ಮಣ್ಣು ಸಾಗಾಣಿಕೆ ಮಾಡುವಾಗ ರಸ್ತೆಯಲ್ಲಿ ಚೆಲ್ಲದಂತೆ ಎಚ್ಚರ ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಹಾಗೂ ರಸ್ತೆಯಲ್ಲಿ ಚೆಲ್ಲಿರುವ ಮಣ್ಣನ್ನು ತಕ್ಷಣ ತೆರವುಗೊಳಿಸಿ ರಸ್ತೆಯನ್ನು ಸ್ವಚ್ಚಗೊಳಿಸುವಂತೆ ಸೂಚನೆ ನೀಡಿದರು. ಸ್ಥಳದಲ್ಲಿ ಹಾಜರಿದ್ದ ವಲಯ ಸಹಾಯಕ ಆಯುಕ್ತರಿಗೆ ನಿರ್ದೇಶನ ನೀಡಿದರು.ವಲಯ ಸಹಾಯಕ ಆಯುಕ್ತರಾದ ಸಂತೋಷ್ ಯರಂಗಳಿ,ಕಾರ್ಯನಿರ್ವಾಹಕ ಅಭಿಯಂತರಾದ ಆನಂದ್ ಝಳಕಿ,ಆರೋಗ್ಯ ನಿರೀಕ್ಷಕರು ಹಾಗೂ ಸಾರ್ವಜನಿಕರು ಸ್ಥಳದಲ್ಲಿ ಹಾಜರಿದ್ದರು.
ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿದ ಪಾಲಿಕೆಯ ಆಯುಕ್ತರಾದ ಡಾ ಈಶ್ವರ ಉಳ್ಳಾಗಡ್ಡಿ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ನಿತಿನ ಇಂಡಿ ಪಾಲಿಕೆಯ ಸದಸ್ಯರಾದ ಶಂಕರ ಶೆಳಕೆ,ಶ್ರೀಮತಿ ರತ್ನಾಬಾಯಿ ನಾಝರೆ ಹಾಗೂ ಅಧಿಕಾರಿಗಳಿಗೆ ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದು ಕಂಡು ಬಂದಿತು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..