ಸಾರ್ವಜನಿಕರ ಸಮಸ್ಯೆ ಗೆ ಸ್ಪಂದಿಸಿದ ಮೇಯರ್ ಈರೇಶ ಅಂಚಟಗೇರಿ ಪಾಲಿಕೆಯ ಸದಸ್ಯ ನಿತೀನ್ ಇಂಡಿ – ಮೇಯರ್ ರೊಂದಿಗೆ ಟ್ಯಾಂಕ್ ಗೆ ತೆರಳಿ ನೀರು ಸರಬರಾಜು ಗೆ ಚಾಲನೆ ನೀಡಿ ತೊಂದರೆ ನೀಡಿದವರಿಗೆ ಖಡಕ್ ಎಚ್ಚರಿಕೆ ಸಂದೇಶ

Suddi Sante Desk
ಸಾರ್ವಜನಿಕರ ಸಮಸ್ಯೆ ಗೆ ಸ್ಪಂದಿಸಿದ ಮೇಯರ್ ಈರೇಶ ಅಂಚಟಗೇರಿ ಪಾಲಿಕೆಯ ಸದಸ್ಯ ನಿತೀನ್ ಇಂಡಿ – ಮೇಯರ್ ರೊಂದಿಗೆ ಟ್ಯಾಂಕ್ ಗೆ ತೆರಳಿ ನೀರು ಸರಬರಾಜು ಗೆ ಚಾಲನೆ ನೀಡಿ ತೊಂದರೆ ನೀಡಿದವರಿಗೆ ಖಡಕ್ ಎಚ್ಚರಿಕೆ ಸಂದೇಶ

ಧಾರವಾಡ

ಧಾರವಾಡ ನಗರಗಳಿಗೆ ನೀರು ಸರಬರಾಜು ಮಾಡುತ್ತಿರುವ ಗುತ್ತಿಗೆ ಆಧಾರಿತ  ನೌಕರರು, ಕಳೆದ ಎರಡು ದಿನಗಳಿಂದ ಧರಣಿ ನಿರತರಾಗಿ ರುವ  ಹಿನ್ನೆಲೆಯಲ್ಲಿ ಧಾರವಾಡ ನಗರದ ನಾಗರಿಕರಿಗೆ ನೀರಿನ ಸಮಸ್ಯೆ ಉಂಟಾಗಿದೆ ಈ ಒಂದು ಸಮಸ್ಯೆ ಯನ್ನು ತಿಳಿದ ಪಾಲಿಕೆಯ ಮೇಯರ್ ಈರೇಶ ಅಂಚಟಗೇರಿ ಪಾಲಿಕೆಯ ಸದಸ್ಯ ನಿತಿನ್ ಇಂಡಿ ಧಾರವಾಡ ದಲ್ಲಿ ವಾರ್ಡ್ ಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಯನ್ನು ಆಲಿಸಿದರು.

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಹಾಪೌರರಾದ ಈರೇಶ ಅಂಚಟಗೇರಿ ಮತ್ತು ಪಾಲಿಕೆಯ ಸದಸ್ಯ ನಿತಿನ್ ಇಂಡಿ ಅವರು ಧಾರವಾಡದ ಮುರುಘಾಮಠದ ಮೃತ್ಯುಂಜಯ ನಗರದ ನೀರಿನ ಟ್ಯಾಂಕ್ ಗೆ ಭೇಟಿ ನೀಡಿ ಎಲ್ & ಟಿ ನ ಅಧಿಕಾರಿಗಳಿಗೆ ನಾಗರಿಕರಿಗೆ ನೀರಿನ ಅವ್ಯವಸ್ಥೆ ಆಗದಂತೆ ನೋಡಿಕೊಳ್ಳಲು ತಾವೇ ಧಾವಿಸಿದ್ದು ಕಂಡು ಬಂದಿತು

ಪರ್ಯಾಯ ಗುತ್ತಿಗೆ ಆಧಾರಿತ ವಾಲ್ ಮನ್ ನೌಕರರನ್ನು ನೇಮಿಸಿಕೊಂಡರು ನೀರಿನ ಸರಬ ರಾಜನ್ನು ಯಥಾ ಸ್ಥಿತಿ ಕಾಪಾಡಿಕೊಳ್ಳುವುದರ ಬಗ್ಗೆ  ನೀರು ಸರಬರಾಜು ಚಾಲನೆ ನೀಡಿದರು. ಹಾಗೂ ಕಚೇರಿಗೆ ಸಂಬಂಧ ಪಡೆದಿರುವ ಯಾರೇ ಬಂದು ನೀರು ಸರಬರಾಜು ಕೆಲಸಕ್ಕೆ ತೊಂದರೆ ಮಾಡಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಪಾಲಿಕೆಯ ಸದಸ್ಯರಾದ  ನಿತಿನ್ ಹಿಂಡಿ ರವರು, ರಾಜು ಕಮತಿ ರವರು ಹಾಗೂ ಎಲ್ & ಟಿ ನ ಅಧಿಕಾರಿಗಳು ಉಪಸ್ಥಿತರಿದ್ದರು.

 

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.